ಸಾರಾಂಶ
ನರಸಿಂಹರಾಜಪುರ, ತಾಲೂಕಿನ ಹೊನ್ನೇಕೊಡಿಗೆ ಸರ್ಕಾರಿ ಹಿರಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಮೂಡಬಾಗಿಲು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಗುಬ್ಬಿಗಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳು ಭಾಗವಹಿಸಿ 18 ಪ್ರಶಸ್ತಿಗಳನ್ನು ಪಡೆದು ಶಾಲೆಗೆ ಸಮಗ್ರ ಪ್ರಶಸ್ತಿ ತಂದುಕೊಟ್ಟಿದ್ದಾರೆ ಎಂದು ಗುಬ್ಬಿಗಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯ ಎ.ಇ. ಅಶೋಕ್ ತಿಳಿಸಿದ್ದಾರೆ.
ಮುಖ್ಯೋಪಾಧ್ಯಾಯ ಎ.ಇ. ಅಶೋಕ್ ಮಾಹಿತಿ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರತಾಲೂಕಿನ ಹೊನ್ನೇಕೊಡಿಗೆ ಸರ್ಕಾರಿ ಹಿರಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಮೂಡಬಾಗಿಲು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಗುಬ್ಬಿಗಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳು ಭಾಗವಹಿಸಿ 18 ಪ್ರಶಸ್ತಿಗಳನ್ನು ಪಡೆದು ಶಾಲೆಗೆ ಸಮಗ್ರ ಪ್ರಶಸ್ತಿ ತಂದುಕೊಟ್ಟಿದ್ದಾರೆ ಎಂದು ಗುಬ್ಬಿಗಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯ ಎ.ಇ. ಅಶೋಕ್ ತಿಳಿಸಿದ್ದಾರೆ.
ಉತ್ತಮ ಸಾಧನೆ ಮಾಡಿದ ಮಕ್ಕಳನ್ನು ಹಾಗೂ ತರಬೇತಿ ನೀಡಿದ ಶಿಕ್ಷಕರನ್ನು ಶಾಲೆ ಎಸ್.ಡಿಎಂಸಿ ಅಧ್ಯಕ್ಷ ಚಂದ್ರಶೇಖರ್, ಉಪಾಧ್ಯಕ್ಷೆ ಸವಿತ, ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮಧು ಕುಮಾರ್, ಗುಬ್ಬಿಗಾ ಗ್ರಾಪಂ ಅಧ್ಯಕ್ಷೆ ನಾಗರತ್ನ ಉಪಾಧ್ಯಕ್ಷ ಶಂಕರ್, ಮುಖ್ಯ ಶಿಕ್ಷಕ ಎ.ಇ.ಅಶೋಕ್ ಅಭಿನಂದಿಸಿದರು.ವಿಜೇತರು: ಹಿರಿಯರ ವಿಭಾಗ - ಇಂಗ್ಲಿಷ್ ಕಂಠಪಾಠ ಮತ್ತು ಧಾರ್ಮಿಕ ಪಠಣ ರಿಯಾ ಎಂ.ಸಿ ಪ್ರಥಮ, ಪ್ರಬಂಧ ಮತ್ತು ಕಥೆ ಹೇಳುವುದು ಅಮೂಲ್ಯ ವಿ.ಜೆ.ಪ್ರಥಮ, ಭಕ್ತಿಗೀತೆ ಪ್ರಿಯಾಂಕ ಎಸ್ ಪ್ರಥಮ, ಕನ್ನಡ ಕಂಠ ಪಾಠ ಪ್ರಿಯಾಂಕ ಎಸ್ ದ್ವಿತೀಯ, ದೇಶಭಕ್ತಿ ಗೀತೆ ಜಿಸ್ಟೀನ್ ದ್ವಿತೀಯ, ಧಾರ್ಮಿಕ ಪಠಣ ಅರೇಬಿಕ್ ಮತ್ತು ಕವನ ವಾಚನ ನಿಧಿ ಎಚ್.ಜಿ ದ್ವಿತೀಯ, ಆಶು ಭಾಷಣ ಸ್ಪರ್ಧೆ ಜೋಬಿಲ್ ವರ್ಗೀಸ್ ತೃತೀಯ
ಕಿರಿಯರ ವಿಭಾಗ: ಭಕ್ತಿಗೀತೆ ಪುನೀತ್ ಎಲ್ ಪ್ರಥಮ,ಧಾರ್ಮಿಕ ಪಠನ ಅರೇಬಿಕ್ -ಹಾನಿಯಾ ಮರಿಯಂ ಪ್ರಥಮ, ಕನ್ನಡ ಕಂಠ ಪಾಠ ಪುನೀತ್ ಎಲ್. ದ್ವಿತೀಯ, ದೇಶಭಕ್ತಿ ಗೀತೆ ಸಾಂಘವಿ ಡಿ.ಎಂ. ದ್ವಿತೀಯ,ಇಂಗ್ಲೀಷ್ ಕಂಠ ಪಾಠ ಸಾಂಘವಿ ಡಿ. ಎಂ.ದ್ವಿತೀಯ,ಆಶುಭಾಷಣ ಸ್ಪರ್ಧೆ ಅಶ್ವಿತ್ ಕೆ.ವಿ.ದ್ವಿತೀಯ, ಕ್ಲೇಮಾಡ ಲಿಂಗ್ ಅಭಿನವ ಎನ್.ಎಸ್. ತೃತೀಯ,ಛದ್ಮವೇಷ ಸ್ಪರ್ಧೆ ಸಿಯಾ ಎಂ.ಸಿ. ತೃತೀಯ;Resize=(128,128))
;Resize=(128,128))
;Resize=(128,128))
;Resize=(128,128))