ಶಿಕ್ಷಣ ಕ್ಷೇತ್ರಕ್ಕೆ ಗುಬ್ಬಿತೋಟದಪ್ಪ ಕೊಡುಗೆಶ್ಲಾಘನೀಯ: ಡಾ। ಸಿ.ಸೋಮಶೇಖರ್‌

| Published : Jun 17 2024, 01:41 AM IST

ಶಿಕ್ಷಣ ಕ್ಷೇತ್ರಕ್ಕೆ ಗುಬ್ಬಿತೋಟದಪ್ಪ ಕೊಡುಗೆಶ್ಲಾಘನೀಯ: ಡಾ। ಸಿ.ಸೋಮಶೇಖರ್‌
Share this Article
  • FB
  • TW
  • Linkdin
  • Email

ಸಾರಾಂಶ

ರಾವ್‌ ಬಹದ್ದೂರ್‌ ಗುಬ್ಬಿ ತೋಟದಪ್ಪ ಜನ್ಮದಿನಾಚರಣೆ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾವ್‌ ಬಹದ್ದೂರ್‌ ಗುಬ್ಬಿ ತೋಟದಪ್ಪ ಅವರು ವಿದ್ಯಾರ್ಥಿ ನಿಲಯ, ಧರ್ಮಛತ್ರ ಸ್ಥಾಪಿಸುವ ಮೂಲಕ ವೀರಶೈವ ಸಮಾಜಕ್ಕೆ ಬಹಳಷ್ಟು ಕೊಡುಗೆ ನೀಡಿದ್ದಾರೆ. ಈ ಕಾರ್ಯ ಶ್ಲಾಘನೀಯ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್‌ ಅಧ್ಯಕ್ಷ ಡಾ.ಸಿ.ಸೋಮಶೇಖರ್‌ ಮೆಚ್ಚುಗೆ ವ್ಯಕ್ತಪಡಿಸಿದರು.

ಬೆಂಗಳೂರು ನಗರ ಜಿಲ್ಲಾ ಶರಣ ಸಾಹಿತ್ಯ ಪರಿಷತ್‌ ಮತ್ತು ಜಯನಗರ ಕದಳಿ ಮಹಿಳಾ ವೇದಿಕೆಯಿಂದ ಜಯನಗರದ ಶಿವರಾತ್ರಿ ರಾಜೇಂದ್ರ ಚಿಂತನ ಮಂಟಪದಲ್ಲಿ ಆಯೋಜಿಸಿದ್ದ ರಾವ್‌ ಬಹದ್ದೂರ್‌ ಗುಬ್ಬಿ ತೋಟದಪ್ಪ ಜನ್ಮದಿನಾಚರಣೆ ಹಾಗೂ ವೇದಿಕೆಯ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

1897 ರ ಮೈಸೂರು ರಾಜರ ಅವಧಿಯಲ್ಲಿ ಗುಬ್ಬಿ ತೋಟದಪ್ಪ ಅವರು ರೈಲ್ವೆಯಿಂದ 10 ಸಾವಿರ ರುಪಾಯಿಗೆ ಎರಡು ಎಕರೆ ಜಾಗ ಖರೀದಿಸಿ ಧರ್ಮಛತ್ರ ನಿರ್ಮಿಸಿದರು. ಬಳಿಕ ಇದರಲ್ಲಿ 10 ಕೊಠಡಿಗಳನ್ನು ವಿದ್ಯಾರ್ಥಿ ನಿಲಯಕ್ಕೆಂದು ಮೀಸಲಿರಿಸಿದರು. ಅಂದಿನ ಕಾಲದಲ್ಲೇ ತೋಟದಪ್ಪ ಅವರು ವಿದ್ಯೆಯ ಮಹತ್ವವನ್ನು ಅರಿತು ಈ ಕಾರ್ಯ ಕೈಗೊಂಡಿದ್ದರು. ವೀರಶೈವ ವಿದ್ಯಾರ್ಥಿಗಳ ಅಭ್ಯಾಸಕ್ಕೆ ಬಹಳಷ್ಟು ಅನುಕೂಲ ಮಾಡಿಕೊಟ್ಟರು ಎಂದು ಪ್ರಶಂಸಿಸಿದರು.

ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ.ನಾಗರಾಜಮೂರ್ತಿ, ಬಿಬಿಎಂಪಿ ಮಾಜಿ ಮಹಾಪೌರರಾದ ಗಂಗಾಂಬಿಕೆ ಮಲ್ಲಿಕಾರ್ಜುನ, ಗುಬ್ಬಿ ತೋಟದಪ್ಪ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಎಂ.ಸದಾಶಿವ ಉಪಸ್ಥಿತರಿದ್ದರು.