ಸಾರಾಂಶ
ಕನ್ನಡಪ್ರಭ ವಾರ್ತೆ ಗುಡ್ಡೆಹೊಸೂರು
ಇಲ್ಲಿಗೆ ಸಮೀಪದ ಕೊಡಗರಹಳ್ಳಿಯ ಸಮುದಾಯಭವನದಲ್ಲಿ ಸಂಸ್ಥೆಯ ವತಿಯಿಂದ ವರಮಹಾಲಕ್ಷೀ ಪೂಜೆಯನ್ನು ಅದ್ಧೂರಿಯಾಗಿ ನಡೆಸಲಾಯಿತು.ಬೆಳಗ್ಗೆ 8 ಗಂಟೆಯಿಂದ ನಡೆದ ಪೂಜಾ ಕಾರ್ಯದಲ್ಲಿ ಸುಮಾರು 500ಕ್ಕೂ ಹೆಚ್ಚು ಭಕ್ತರು ಮತ್ತು ಸಂಸ್ಥೆಯ ಪದಾಧಿಕಾರಿಗಳು ಹಾಜರಿದ್ದರು.
ಪೂಜಾಕಾರ್ಯವನ್ನು ಅರ್ಚಕರಾದ ಪ್ರಭಾಕರ್‌ಕುದ್ದಣ್ಣಯ್ಯ ಭಟ್ ತಂಡದಿಂದ ನಡೆಯಿತು.ನಂತರ ನಡೆದ ಸಭಾಕಾರ್ಯಕ್ರಮದಲ್ಲಿ ಕಿರಿಕೊಡ್ಲಿಮಠದ ಶ್ರೀ ಸದಾಶಿವ ಸ್ವಾಮೀಜಿ ಉಪಸ್ಥಿತರಿದ್ದರು. ನಿವೃತ್ತ ಅರಣ್ಯ ಸಂರಕ್ಷಾಣಾಧಿಕಾರಿ ಎಂ.ಎಸ್. ಚಂಗಪ್ಪ
ಅವರು ಕಾರ್ಯಕ್ರಮ ಉಧ್ಖಾಟಿಸಿ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.ಕೊಡಗರಹಳ್ಳಿ ಪಂಚಾಯ್ತಿ ಅಧ್ಯಕ್ಷೆ ನಿರತಬೆಳೈಪ್ಪ, ಅಲ್ಲಿನ ಪಿ.ಡಿ.ಓ ರವೀಶ್, ಸಂಸ್ಥೆಯ ತಾಲೂಕು ಅಧಿಕಾರಿ ಹನುಮಂತಪ್ಪ ಅಂಗಡಿ, ಮೇಲ್ವಿಚಾರಕ ಯತೀಶ್, ಜೀವನ್‌ಕುಮಾರ್, ಪೂಜಾ ಸಮಿತಿ ಅಧ್ಯಕ್ಷರು, ಕವಿತಾ ಮುಖ್ಯ ಶಿಕ್ಷಕಿ ಶಾಂತಿ
ನಿಕೇತನ ಶಾಲೆ, ಪದಾಧಿಕಾರಿಗಳಾದ ಸುಮಿತ್ರ, ಸುಜಾತ, ರೋಹಿಣಿ ದಿಲೀಪ್‌ಕುಮಾರ್, ಹೊಸಕೋಟೆ ಗಣಪತಿ ಸಮಿತಿ ಅಧ್ಯಕ್ಷರಾದ ದಾಸಂಡ ರಮೇಶ್, ಗಣ್ಯರಾದ ಸಾಯಿಕುಮಾರ್ ದಂತ ವೈದ್ಯರಾದ ಶಶಿಕಾಂತ ರೈ, ಸುಂಟಿಕೊಪ್ಪ ಠಾಣಾಧಿಕಾರಿ ಮೋಹನ್‌ರಾಜ್, ಸಂಸ್ಥೆಯ ಪದಾಧಿಕಾರಿಗಳು ಮುಂತಾದವರು ಹಾಜರಿದ್ದರು.ಈ ಕಾರ್ಯಕ್ರಮವು ಗುಡ್ಡೆಹೊಸೂರು ವಲಯದ ಪ್ರಗತಿ ಸ್ವಸಹಾಯ ಸಂಘ ಮತ್ತು ಒಕ್ಕೂಟದ ವತಿಯಿಂದ ಏರ್ಪಡಿಸಲಾಗಿತ್ತು.
ಈ ಸಂದರ್ಭ ಮಾತನಾಡಿದ ಸದಾಶಿವ ಸ್ವಾಮಿಗಳು ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ವೀರೇಂದ್ರ ಹೆಗ್ಗಡೆಯವರ ಜನಪರ ಯೋಜನೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಯಾವುದೇ ಜಾತಿ, ಧರ್ಮ, ಭೇದಭಾವವಿಲ್ಲದೆ ಇಡೀ ಕರ್ನಾಟಕ ರಾಜ್ಯದ ಮೂಲೆ, ಮೂಲೆಯಲ್ಲು ಗ್ರಾಮ ಮಟ್ಟದಲ್ಲಿ ವಿವಿಧ ಯೋಜನೆಯಿಂದ ಜನರ ಏಳಿಗೆಗಾಗಿ ಶ್ರಮಿಸುತ್ತಿರುವುದನ್ನು ಕೊಂಡಾಡಿದರು. ಇದೇ ಸಂದರ್ಭ ಸುಜ್ಞಾನ ಶಿಷ್ಯವೇತನ ಕಾರ್ಯಕ್ರಮದಡಿ ಒಟ್ಟು 29 ಮಕ್ಕಳಿಗೆ ಸ್ಕಾಲರ್‌ಶಿಪ್‌ನೀಡಲಾಯಿತು. ಇದುವರಗೆ ಒಟ್ಟು 827 ಮಕ್ಕಳಿಗೆ ತಲಾ 10 ರಿಂದ 15 ಸಾವಿರದ ತನಕ ಶಿಷ್ಯ ವೇತನ ಸಂಸ್ಥೆಯ ವತಿಯಿಂದ ನೀಡಲಾಗಿದೆ. ಹೇಮ ಮತ್ತು ನಾಗರಾಜ್ ನಿರೂಪಿಸಿದರು.