ಸಾರಾಂಶ
5000ಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರ ಕೆಲಸಕ್ಕೆ ಅಪಾಯದ ಬೀತಿ: ಚಂದ್ರಕಾಂತ
ಕನ್ನಡಪ್ರಭ ವಾರ್ತೆ ಬೀದರ್2024-25ನೇ ಸಾಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರ ನೇಮಕಾತಿಯಲ್ಲಿ ಕೊರ್ಟ್ ಆದೇಶದ ಪ್ರಕಾರ ಕಾಲೇಜು ಶಿಕ್ಷಣ ಇಲಾಖೆ ಯುಜಿಸಿ ನಿಯಮಾವಳಿಗಳನ್ನು ಅತಿಥಿ ಉಪನ್ಯಾಸಕರ ನೇಮಕಾತಿಗಳಲ್ಲಿ ಅನುಸರಿಸಿದ್ದರೆ 5000 ಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರು ಉದ್ಯೋಗ ಕಳಿದುಕೊಂಡು ಬೀದಿಗೆ ಬರಬೇಕಾದ ಪರಿಸ್ಥಿತಿ ಎದುರಾಗಲಿದ್ದು, ಈ ನಿಯಮ ಅತಿಥಿ ಉಪನ್ಯಾಸಕರಿಗೆ ಅನುಸರಿಸದಿರಲು ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘ ಆಗ್ರಹಿಸಿದೆ.
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಸಂಘದ ಜಿಲ್ಲಾಧ್ಯಕ್ಷ ಚಂದ್ರಕಾಂತ ನಾರಾಯಣಪುರ ಅವರು, ಕರ್ನಾಟಕದಲ್ಲಿ 430 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿದ್ದು, 11,000ಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರು 15ರಿಂದ 20 ವರ್ಷದಿಂದ ಅತ್ಯಂತ ಕಡಿಮೆ ಸಂಬಳದಲ್ಲಿ ಕೆಲಸ ಮಾಡುತ್ತಿದ್ದಾರೆ. ಅದರಲ್ಲಿ ಶೇ.50ರಷ್ಟು ಆತಿಥಿ ಉಪನ್ಯಾಸಕರು ನೀಟ್, ಸೆಟ್, ಎಂಫಿಲ್, ಪಿಎಚ್.ಡಿ ಪದವಿಗಳನ್ನು ಯುಜಿಸಿ ಅನಿಯಮನುಸಾರ ಅರ್ಹತೆ ಹೊಂದಿದವರಾಗಿದ್ದಾರೆ. ಆದರೆ, ದಿಢೀರನೆ ಸರ್ಕಾರ ಯುಜಿಸಿ ನಿಯಮದ ಪ್ರಕಾರ ಸರ್ಕಾರ ಅತಿಥಿ ಉಪನ್ಯಾಸಕರ ನೇಮಕಾತಿ ಮಾಡಿಕೊಳ್ಳಲು ಮುಂದಾದರೆ ಶೇ. 55 ರಷ್ಟು ಅಂದರೆ 5,800ಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರ ಕುಟುಂಬಗಳು ಬೀದಿಗೆ ಬರುತ್ತವೆ. ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ಹೇಳಿದರು.ಕೊರ್ಟ್ ಆದೇಶ ಪಾಲಿಸುವ ಸರ್ಕಾರಗಳು ಈ ಹಿಂದೆ ಕೊರ್ಟ್ ಆದೇಶ ಮಾಡಿದ. 10 ವರ್ಷ ಸೇವೆ ಸಲ್ಲಿಸಿದ ಅತಿಥಿ ಉಪನ್ಯಾಸಕರಿಗೆ ಸೇವಾನುಭವ ಆಧಾರದ ಮೇಲೆ ಖಾಯಂ ಮಾಡಿ ಎಂದು ಹೇಳಿದೆ, ಸಮಾನ ಕೆಲಸಕ್ಕೆ ಸಮಾನ ವೇತನ ಕೊಡಲು ಹೇಳಿದೆ. ರಾಷ್ಟ್ರದಲ್ಲಿ ಯುಜಿಸಿ ನಿಯಮ ಒಂದೆ ಇವೆ ಆದರೆ, ಕೆಲವು ರಾಜ್ಯಗಳಲ್ಲಿಯು ಯುಜಿಸಿ ಅರ್ಹತೆ ಹೊಂದಿರುವವರು ಹಾಗೂ ಯುಜಿಸಿ ಅನರ್ಹತೆ ಹೊಂದಿದ ಅತಿಥಿ ಉಪನ್ಯಾಸಕರು ಕಾರ್ಯ ನಿರ್ವಹಿಸಲು ಪಂಜಾಬ, ಹರಿಯಾಣ, ದೇಹಲಿ, ಇತ್ಯಾದಿ ಕಡೆಗಳಲ್ಲಿ ಒಂದೇ ನಿಯಮ ಇರುವಾಗ ರಾಜ್ಯದಲ್ಲಿ ಬೇರೆ ನಿಯಮ ಮಾಡಲು ಸಾಧ್ಯವಿಲ್ಲ. ಆದ್ದರಿಂದ ಕೂಡಲೇ ಯುಜಿಸಿ ನಿಯಮ ಬದಿಗಿರಿಸಿ, ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಳ್ಳಬೇಕು ಎಂದು ನಾರಾಯಣಪುರ ಒತ್ತಾಯಿಸಿದ್ದಾರೆ.
ಈ ವೇಳೆ ಅತಿಥಿ ಉಪನ್ಯಾಸಕರ ಹೊರಾಟ ಸಮಿತಿ ಪದಾಧಿಕಾರಿಗಳಾದ ಡಾ.ಏಕನಾಥ ಹಲಸೆ, ಜಾವಿದ, ಡಾ.ಚೇತನ, ಶಾಮಸುಂದರ, ವನಿತಾಬಾಂಗೆ, ಬಂಡೆಪ್ಪ ಬಾಲಕಂದೆ, ಸಂದೀಪ ಕುಲಕರ್ಣಿ, ಮಲ್ಲಿಕಾರ್ಜುನ ಇತರರು ಉಪಸ್ಥಿತರಿದ್ದರು.---
ಪೋಟೋ: 3ಬಿಡಿಆರ್61ಸುದ್ದಿಗೋಷ್ಠಿಯಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಚಂದ್ರಕಾಂತ ನಾರಾಯಣಪುರ ಮಾತನಾಡಿದರು.