ರೆಸಾರ್ಟ್‌ನಲ್ಲಿ ಅತಿಥಿಗಳ ಮಾರಾಮಾರಿ

| Published : Apr 16 2025, 12:31 AM IST

ಸಾರಾಂಶ

ತಾಲೂಕಿನ ಅಚ್ಚನಹಳ್ಳಿ ಗ್ರಾಮದ ರೆಸಾರ್ಟ್ ಒಂದರಲ್ಲಿ ಅತಿಥಿಗಳು ಹಾಗೂ ನೌಕರರ ನಡುವೆ ಮಾರಾಮಾರಿ ನಡೆದು ನಾಲ್ವರು ಗಾಯಗೊಂಡಿದ್ದಾರೆ

ಸಕಲೇಶಪುರ: ತಾಲೂಕಿನ ಅಚ್ಚನಹಳ್ಳಿ ಗ್ರಾಮದ ರೆಸಾರ್ಟ್ ಒಂದರಲ್ಲಿ ಅತಿಥಿಗಳು ಹಾಗೂ ನೌಕರರ ನಡುವೆ ಮಾರಾಮಾರಿ ನಡೆದು ನಾಲ್ವರು ಗಾಯಗೊಂಡಿದ್ದಾರೆ, ಜೊತೆಗೆ ರೆಸಾರ್ಟ್ ಹಾನಿಗೊಂಡಿದೆ. ಭಾನುವಾರ ಮುಂಜಾನೆ ರೆಸಾರ್ಟ್‌ಗೆ ಆಗಮಿಸಿದ್ದ ಮಂಗಳೂರು ಮೂಲದ ೩೬ ಜನರ ತಂಡ ಈಜು ಕೊಳ ಬಳಸುವ ವಿಚಾರದಲ್ಲಿ ರೆಸಾರ್ಟ್ ನೌಕರರೊಂದಿಗೆ ಜಗಳ ಆರಂಭಿಸಿದ್ದರು. ಜಗಳ ವಿಕೋಪಕ್ಕೆ ತಿರುಗಿದ ವೇಳೆ ಒಂದು ತಂಡ ರೆಸಾರ್ಟ್ ಮೇಲೆ ಕಲ್ಲು ತೂರಾಟ ನಡೆಸಿದರೆ ಮತ್ತೊಂದು ತಂಡ ಎದುರಾಳಿಗಳ ಮೇಲೆ ಬ್ಯಾಟ್‌ನಿಂದ ಹಲ್ಲೆ ನಡೆಸಿದೆ. ಪರಿಣಾಮ ರೆಸಾರ್ಟ್ ಕಿಟಿಕಿ ಬಾಗಿಲುಗಳ ಗಾಜು ದ್ವಂಸಗೊಂಡಿದ್ದರೆ ಮಹಿಳೆಯರು ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ. ಗಾಯಾಳುಗಳು ಹಾನುಬಾಳಿನ ಪ್ರಾಥಮಿಕ ಚಿಕಿತ್ಸಾ ಕೇಂದ್ರದಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಈ ಸಂಬಂಧ ಯಾವುದೆ ಠಾಣೆಯಲ್ಲಿ ದೂರು ದಾಖಲಾಗಿಲ್ಲ.