ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಆದ್ಯತೆ ನೀಡುವಲ್ಲಿ ಕುಟುಂಬಗಳು, ಶಿಕ್ಷಣ ಸಂಸ್ಘೆಗಳು, ಸಾಮಾಜಿಕ ಸಂಘಟನೆಗಳು ಅತ್ಯಂತ ಗಂಭೀರವಾಗಿ ಪರಿಗಣಿಸಿ ಮಾರ್ಗದರ್ಶನ ನೀಡುವ ಅಗತ್ಯವಿದೆ ಎಂದು ಲೊಯೋಲ ವಿಕಾಸ ಕೇಂದ್ರದ ಸಹಾಯಕ ನಿರ್ದೇಶಕ ಜೇಸನ್ ತಿಳಿಸಿದರು.

ಹಾನಗಲ್ಲ: ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಆದ್ಯತೆ ನೀಡುವಲ್ಲಿ ಕುಟುಂಬಗಳು, ಶಿಕ್ಷಣ ಸಂಸ್ಘೆಗಳು, ಸಾಮಾಜಿಕ ಸಂಘಟನೆಗಳು ಅತ್ಯಂತ ಗಂಭೀರವಾಗಿ ಪರಿಗಣಿಸಿ ಮಾರ್ಗದರ್ಶನ ನೀಡುವ ಅಗತ್ಯವಿದೆ ಎಂದು ಲೊಯೋಲ ವಿಕಾಸ ಕೇಂದ್ರದ ಸಹಾಯಕ ನಿರ್ದೇಶಕ ಜೇಸನ್ ತಿಳಿಸಿದರು.ಪಟ್ಟಣದ ಲೊಯೋಲ ವಿಕಾಸ ಕೇಂದ್ರದಲ್ಲಿ ಆಯೋಜಿಸಿದ ಅಪೌಷ್ಟಿಕ ಮಕ್ಕಳಿಗೆ ಪೌಷ್ಟಿಕ ಆಹಾರ ಕಿಟ್ ವಿತರಣೆ ಹಾಗೂ ಆರೋಗ್ಯ ತಪಾಸಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಂದು ಮಗುವನ್ನು ಆರೋಗ್ಯದ ವಿಷಯದಲ್ಲಿ ಪಾಲಕರು ಕಾಳಜಿಯಿಂದ ನೋಡಿಕೊಳ್ಳುವುದು ಜವಾಬ್ದಾರಿಯ ಕರ್ತವ್ಯ. ಪೌಷ್ಟಿಕ ಆಹಾರ ಬಹಳ ಮಹತ್ವದಾಗಿದೆ, ಸರಿಯಾದ ಪೌಷ್ಟಿಕಾಂಶದ ಕೊರತೆಯಿಂದ ಮಕ್ಕಳ ಆರೋಗ್ಯ ಹಿಂದುಳಿಯುವ ಸಾಧ್ಯತೆ ಇರುವುದರಿಂದ ಇಂತಹ ಕಾರ್ಯಕ್ರಮಗಳು ಅವಶ್ಯವಾಗಿವೆ. ಕಾರ್ಯಕ್ರಮದ ಮುಖ್ಯ ಉದ್ದೇಶ ಮಕ್ಕಳನ್ನು ಅಪೌಷ್ಟಿಕತೆಯಿಂದ ಮುಕ್ತರನ್ನಾಗಿಸುವುದಾಗಿದೆ. ಆದ್ದರಿಂದ ನಾವು ನೀವೆಲ್ಲರೂ ಒಂದಾಗಿ ಅಪೌಷ್ಟಿ ಕತೆ ಬಾರದಂತೆ ತಡೆಯುವುದು, ಮಕ್ಕಳ ಆರೋಗ್ಯಕ್ಕೆ ಆದ್ಯತೆ ನೀಡುವುದು ನಮ್ಮ ನಿಮ್ಮೆಲ್ಲರ ಹೊಣೆಯಾಗಿದೆ ಎಂದರು.ಸಂಪನ್ಮೂಲ ವ್ಯಕ್ತಿ ಡಾ. ಎಸ್. ಆರ್. ಕಿತ್ತೂರಮಠ ಮಾತನಾಡಿ, ಈ ಕಾರ್ಯಕ್ರಮ ಮಕ್ಕಳ ಆರೋಗ್ಯ ದೃಷ್ಟಿಯಿಂದ ಅತ್ಯಂತ ಮಹತ್ವದಾಗಿದೆ. ಸರಿಯಾದ ಸಮಯದಲ್ಲಿ ಸಮತೋಲನ ಪೌಷ್ಟಿಕ ಆಹಾರ ನೀಡುವುದರಿಂದ ಮಕ್ಕಳ ದೈಹಿಕ, ಮಾನಸಿಕ ಮತ್ತು ಬುದ್ಧಿವಂತಿಕೆಯ ಬೆಳವಣಿಗೆಗೆ ಸಹಕಾರಿ. ಮಕ್ಕಳಿಗೆ ದಿನ ನಿತ್ಯ ಪೌಷ್ಟಿಕ ಆಹಾರವಾದ ಮೊಟ್ಟೆ, ಹಾಲು, ಹಣ್ಣು, ತರಕಾರಿ, ರಾಗಿ ಮಾಲ್ಟ್, ಮತ್ತು ಮನೆಯಲ್ಲಿಯೇ ಸಿಗುವ ಪೌಷ್ಟಿಕ ಪದಾರ್ಥಗಳನ್ನು ನೀಡಬೇಕು. ಸಮಯಕ್ಕೆ ಸರಿಯಾದ ಆಹಾರ ಹಾಗೂ ನಿಯಮಿತ ಆರೋಗ್ಯ ತಪಾಸಣೆ ಮಕ್ಕಳ ಆರೋಗ್ಯ ಕಾಪಾಡಲು ಬಹಳ ಅಗತ್ಯವಾಗಿದೆ ಎಂದರು ಮುಖ್ಯ ಅತಿಥಿಯಾಗಿ ಮಾತನಾಡಿದ ಶಿಶು ಅಭಿವೃದ್ಧಿ ಇಲಾಖೆಯ ಹಿರಿಯ ಮೇಲ್ವಿಚಾರಕಿ ಸುವರ್ಣ ಜಡಿಮಠ, ಅಪೌಷ್ಟಿಕ ಮಕ್ಕಳಿಗಾಗಿ ನಮ್ಮ ಇಲಾಖೆಯಿಂದ ಕೈಗೊಳ್ಳುವಂತಹ ಜಾಗ್ರತಿ ಕಾರ್ಯಕ್ರಮಗಳನ್ನು ನಡೆಸುತ್ತೇವೆ. ತಾಯಿ ತಾನು ಆರೋಗ್ಯವಾಗಿದ್ದರೆ ಮಗುವು ಕೂಡಾ ಆರೋಗ್ಯದಿಂದ ಇರುತ್ತದೆ. ಮಕ್ಕಳನ್ನು ಅಪೌಷ್ಟಿಕತೆಯಿಂದ ಮುಕ್ತರನ್ನಾಗಿಸಲು ಪಣ ತೊಡೋಣ ಎಂದರು.ಲೋಹಿತ್ ಕಾಟಣ್ಣವರ ಸ್ವಾಗತಿಸಿದರು. ನಾಗರತ್ನ ಕೊಪ್ಪದ ಸಂವಿಧಾನ ಪ್ರಸ್ತಾವನೆ ಓದಿದರು. ಎಸ್.ಬಿ.ಜಯಮ್ಮ ನಿರೂಪಿಸಿದರು. ವೀಣಾ ಕೋರಿಶೆಟ್ಟರ ವಂದಿಸಿದರು.