ಸಂಚಾರ ನಿಯಮಗಳ ಪಾಲನೆಗೆ ಮಾರ್ಗದರ್ಶನ

| Published : Feb 29 2024, 02:06 AM IST

ಸಾರಾಂಶ

ಪಟ್ಟಣದ ಪೊಲೀಸ್ ಠಾಣೆಯಲ್ಲಿ ಶಾಲಾ ವಾಹನಗಳ ಚಾಲಕರಿಗೆ ಸಂಚಾರ ನಿಯಮಗಳ ಪಾಲನೆ ಹಾಗು ಸುರಕ್ಷಿತ ಪ್ರಯಾಣ ಕುರಿತಂತೆ ಮಾರ್ಗದರ್ಶನ ನೀಡಲಾಯಿತು.

ಕಡೂರು ಪೊಲೀಸ್ ಠಾಣೆಯಲ್ಲಿ ಶಾಲಾ ವಾಹನ ಚಾಲಕರಿಗೆ ಮಾಹಿತಿ

ಕನ್ನಡ ಪ್ರಭ ವಾರ್ತೆ, ಕಡೂರು

ಪಟ್ಟಣದ ಪೊಲೀಸ್ ಠಾಣೆಯಲ್ಲಿ ಶಾಲಾ ವಾಹನಗಳ ಚಾಲಕರಿಗೆ ಸಂಚಾರ ನಿಯಮಗಳ ಪಾಲನೆ ಹಾಗು ಸುರಕ್ಷಿತ ಪ್ರಯಾಣ ಕುರಿತಂತೆ ಮಾರ್ಗದರ್ಶನ ನೀಡಲಾಯಿತು.

ಕಡೂರು ಪೊಲೀಸ್ ಠಾಣೆಯಲ್ಲಿ ಪಟ್ಟಣದ ಪ್ರಜ್ಞಾ ಸೆಂಟ್ರಲ್ ಶಾಲೆ, ದೀಕ್ಷಾ ವಿದ್ಯಾಮಂದಿರ ಸೇರಿದಂತೆ ವಿವಿಧ ಶಾಲಾ ವಾಹನಗಳ ಚಾಲಕರಿಗೆ ನೀಡಿದ ಮಾರ್ಗದರ್ಶನದಲ್ಲಿ ಪೊಲೀಸ್‌ ಸಬ್ ಇನ್ಸ್ಪಪೆಕ್ಟರ್‌ ಧನಂಜಯ ಮಾತನಾಡಿ, ಪ್ರತಿದಿನ ಶಾಲಾ ಮಕ್ಕಳನ್ನು ವಾಹನಗಳಲ್ಲಿ ಕರೆದೊಯ್ದು ಮತ್ತು ಅವರನ್ನು ಸುರಕ್ಷಿವಾಗಿ ಮನೆಗೆ ಕರೆದೊಯ್ಯುವ ಬಹು ದೊಡ್ಡ ಜವಾಬ್ದಾರಿಯನ್ನು ಹೊತ್ತಿದ್ದೀರಿ. ನೀವುಗಳು ಮಕ್ಕಳು ಹತ್ತಿ ಇಳಿದ ನಂತರವೇ ಗಮನಿಸಿ ವಾಹನಗಳನ್ನು ಮುಂದೆ ಚಲಿಸಬೇಕು. ಮಕ್ಕಳ ಸುರಕ್ಷಿತ ಪ್ರಯಾಣದ ನಿಯಮ ಅನುಸರಿಸುವ ಮುಖೇನ ವಾಹನ ಚಾಲನೆ ಮಾಡುವಂತೆ ಚಾಲಕರಿಗೆ ಅಗತ್ಯ ಮಾರ್ಗದರ್ಶನ ನೀಡಿದರು.

ಈ ಕುರಿತು ಪ್ರಜ್ಞಾ ಶಾಲೆ ಆಡಳಿತ ಮಂಡಳಿ ಪ್ರದಾನ ಕಾರ್ಯದರ್ಶಿ ಎನ್‌.ಪಿ ಮಂಜುನಾಥ ಪ್ರಸನ್ನ ಮಾತನಾಡಿ, ಇನ್ಸ್ ಪೆಕ್ಟ್ರರ್ ಹಾಗು ಪೊಲೀಸರು ಶಾಲಾ ವಾಹಗಳ ಚಾಲನೆ ಹಾಗು ಟ್ರಾಫಿಕ್ ಹಾಗೂ ಮಕ್ಕಳ ಸೇಫ್ಟಿ ಬಗ್ಗೆ ಸೂಕ್ತ ಸಲಹೆ ಸೂಚನೆಗಳನ್ನು ಹಾಗೂ ಅಪಘಾತದಿಂದ ಆಗುವಂತಹ ಅನಾಹುತಗಳ ಬಗ್ಗೆ ಮತ್ತು ಅಗತ್ಯ ಕಾನೂನು ತಿಳುವಳಿಕೆ ನೀಡಿದರು. ಪೋಲೀಸರಿಗೆ ಶಾಲೆಗಳ ಪರವಾಗಿ ಕೃತಜ್ಞತೆ ಅರ್ಪಿಸುತ್ತೇನೆ ಎಂದರು.28ಕೆಕೆಡಿಯು2. ಡೂರು ಪೋಲೀಸ್‌ ಠಾಣೆಯಲ್ಲಿ ಶಾಲಾ ವಾಹನಗಳ ಚಾಲಕರಿಗೆ ಸುರಕ್ಷಿತ ಚಾಲನೆ ಕುರಿತು ಪೋಲೀಸರು ಮಾರ್ಗದರ್ಶನ ಮಾಡಿದರು.