ಕಾವ್ಯರಚನೆ ಮಾರ್ಗದರ್ಶನ: ವಿಶೇಷ ಉಪನ್ಯಾಸ

| Published : Oct 30 2025, 02:45 AM IST

ಸಾರಾಂಶ

ಮಂಜುನಾಥ ಪೈ ಸ್ಮಾರಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಂತರಿಕ ಗುಣಮಟ್ಟ ಭರವಸೆ ಕೋಶ, ಸಾಹಿತ್ಯ ಸಂಘ ಮತ್ತು ಕನ್ನಡ ವಿಭಾಗಗಳ ಸಂಯುಕ್ತ ಆಶ್ರಯದಲ್ಲಿ ‘ಕಾವ್ಯ ರಚನೆ: ಒಂದು ಮಾರ್ಗದರ್ಶನ’ ಕುರಿತು ವಿಶೇಷ ಉಪನ್ಯಾಸ ಇತ್ತೀಚೆಗೆ ನಡೆಯಿತು.

ಕಾರ್ಕಳ: ಮಂಜುನಾಥ ಪೈ ಸ್ಮಾರಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಂತರಿಕ ಗುಣಮಟ್ಟ ಭರವಸೆ ಕೋಶ, ಸಾಹಿತ್ಯ ಸಂಘ ಮತ್ತು ಕನ್ನಡ ವಿಭಾಗಗಳ ಸಂಯುಕ್ತ ಆಶ್ರಯದಲ್ಲಿ ‘ಕಾವ್ಯ ರಚನೆ: ಒಂದು ಮಾರ್ಗದರ್ಶನ’ ಕುರಿತು ವಿಶೇಷ ಉಪನ್ಯಾಸ ಇತ್ತೀಚೆಗೆ ನಡೆಯಿತು.ಸಂಪನ್ಮೂಲ ವ್ಯಕ್ತಿ, ಕಾರ್ಕಳದ ಶ್ರೀ ಭುವನೇಂದ್ರ ಕಾಲೇಜಿನ ಕನ್ನಡ ಉಪನ್ಯಾಸಕಿ ಸುಲೋಚನಾ ಪಚ್ಚಿನಡ್ಕ ಮಾಕನಾಡಿ, ಕಾವ್ಯ ರಚನೆಯು ಕೇವಲ ಸಾಹಿತ್ಯಾಭಿವ್ಯಕ್ತಿಯಲ್ಲ, ಅದು ಮನಸ್ಸಿನ ಸೃಜನಾತ್ಮಕ ತರಬೇತಿ ಎಂದರು.

ವಿದ್ಯಾರ್ಥಿಗಳಿಗೆ ಕಾವ್ಯ ಬರವಣಿಗೆಯಲ್ಲಿ ಅಗತ್ಯವಾದ ಕಲಿಕಾ ಅಂಶಗಳು ಹಾಗೂ ಭಾವನೆಗಳ ಪ್ರಸ್ತುತಿ ಮನದಟ್ಟುಗೊಳಿಸಿದರು.

ಪ್ರಾಂಶುಪಾಲ ಡಾ. ಸುರೇಶ್ ರೈ ಕೆ. ಅಧ್ಯಕ್ಷತೆ ವಹಿಸಿದ್ದರು.

ಕಾಲೇಜಿನ ಆಂತರಿಕ ಗುಣಮಟ್ಟ ಭರವಸೆ ಕೋಶದ ಸಂಚಾಲಕ ವಿನಯ್ ಎಂ.ಎಸ್., ಸಾಹಿತ್ಯ ಸಂಘದ ಸಂಚಾಲಕ ಚೇತನ ಬಿ., ಕನ್ನಡ ವಿಭಾಗದ ಮುಖ್ಯಸ್ಥೆ ರೇಣುಕಾ ಎಚ್.ಜಿ. ಉಪಸ್ಥಿತರಿದ್ದರು.ಪ್ರಜ್ಞಾ (ತೃತೀಯ ಬಿ.ಎ.) ನಿರೂಪಿಸಿದರು, ತೃಪ್ತಿ (ತೃತೀಯ ಬಿ.ಎ.) ಪ್ರಾರ್ಥಿಸಿದರು. ಸಹಾಯಕ ಪ್ರಾಧ್ಯಾಪಕ ಚೇತನ ಬಿ. ಸ್ವಾಗತ ಭಾಷಣ ಮಾಡಿದರು ಹಾಗೂ ಕೀರ್ತನ್ (ತೃತೀಯ ಬಿ.ಎ.) ವಂದಿಸಿದರು.