ಫೆ.10ಕ್ಕೆ ಗುಳೇದಗುಡ್ಡ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ

| Published : Jan 27 2024, 01:16 AM IST

ಫೆ.10ಕ್ಕೆ ಗುಳೇದಗುಡ್ಡ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ
Share this Article
  • FB
  • TW
  • Linkdin
  • Email

ಸಾರಾಂಶ

ಗುಳೇದಗುಡ್ಡ: ಫೆ.10ರಂದು ತಾಲೂಕಿನ ಕಟಗೇರಿ ಗ್ರಾಮದಲ್ಲಿ ಗುಳೇದಗುಡ್ಡ ತಾಲೂಕಿನ ನಾಲ್ಕನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಫೆ. 10ರಂದು ಬೆಳಗ್ಗೆ 7.30 ಗಂಟೆಗೆ ಶಾಸಕ ಭೀಮಸೇನ ಚಿಮ್ಮನಕಟ್ಟಿ ರಾಷ್ಟ್ರ ಧ್ವಜಾರೋಹಣ, ಜಿಲ್ಲಾ ಕಸಾಪ ಅಧ್ಯಕ್ಷ ಶಿವಾನಂದ ಶೆಲ್ಲಿಕೇರಿ ನಾಡಧ್ವಜ ಮತ್ತು ತಾಲೂಕು ಅಧ್ಯಕ್ಷ ಎಚ್.ಎಸ್.ಘಂಟಿ ಪರಿಷತ್ ಧ್ವಜಾರೋಹಣ ನೆರವೇರಿಸುವರು.9 ಗಂಟೆಗೆ ಸಮ್ಮೇಳನ ಅಧ್ಯಕ್ಷರ ಭವ್ಯ ಮೆರವಣಿಗೆ, 11 ಗಂಟೆಗೆ ಶಾಸಕ ಭೀಮಸೇನ ಚಿಮ್ಮನಕಟ್ಟಿ ಅಧ್ಯಕ್ಷತೆಯಲ್ಲಿ ಸಮ್ಮೇಳನದ ಉದ್ಘಾಟನೆ ಜರುಗುವುದು.

ಗುಳೇದಗುಡ್ಡ: ಫೆ.10ರಂದು ತಾಲೂಕಿನ ಕಟಗೇರಿ ಗ್ರಾಮದಲ್ಲಿ ಗುಳೇದಗುಡ್ಡ ತಾಲೂಕಿನ ನಾಲ್ಕನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ ಎಂದು ಕಸಾಪ ತಾಲೂಕು ಅಧ್ಯಕ್ಷ ಡಾ.ಎಚ್.ಎಸ್. ಘಂಟಿ ತಿಳಿಸಿದರು.

ಶುಕ್ರವಾರ ಕಸಾಪ ಪದಾಧಿಕಾರಿಗಳು ಶಾಸಕ ಭೀಮಸೇನ ಚಿಮ್ಮನಕಟ್ಟಿ ಅವರನ್ನು ಭೇಟಿಯಾಗಿ ಸಮ್ಮೇಳನ ಕುರಿತು ಚರ್ಚಿಸಿದ ಬಳಿಕ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಫೆ. 10ರಂದು ಬೆಳಗ್ಗೆ 7.30 ಗಂಟೆಗೆ ಶಾಸಕ ಭೀಮಸೇನ ಚಿಮ್ಮನಕಟ್ಟಿ ರಾಷ್ಟ್ರ ಧ್ವಜಾರೋಹಣ, ಜಿಲ್ಲಾ ಕಸಾಪ ಅಧ್ಯಕ್ಷ ಶಿವಾನಂದ ಶೆಲ್ಲಿಕೇರಿ ನಾಡಧ್ವಜ ಮತ್ತು ತಾಲೂಕು ಅಧ್ಯಕ್ಷ ಹೆಚ್.ಎಸ್.ಘಂಟಿ ಪರಿಷತ್ ಧ್ವಜಾರೋಹಣ ನೆರವೇರಿಸುವರು. 9 ಗಂಟೆಗೆ ಸಮ್ಮೇಳನ ಅಧ್ಯಕ್ಷರ ಭವ್ಯ ಮೆರವಣಿಗೆ, ಕುಂಭಮೇಳ ಜರುಗುವುದು. ಮೆರವಣಿಗೆಯಲ್ಲಿ ವಿವಿಧ ಜಾನಪದ ಕಲಾ ತಂಡಗಳು ಮತ್ತು 100 ಮೀಟರ್ ಉದ್ದದ ನಾಡ ಧ್ವಜದೊಂದಿಗೆ ತಾಯಿ ಭುವನೇಶ್ವರಿ ಭಾವಚಿತ್ರದ ಮೆರವಣಿಗೆ ನಡೆಯಲಿದೆ. 11 ಗಂಟೆಗೆ ಶಾಸಕ ಭೀಮಸೇನ ಚಿಮ್ಮನಕಟ್ಟಿ ಅಧ್ಯಕ್ಷತೆಯಲ್ಲಿ ಸಮ್ಮೇಳನದ ಉದ್ಘಾಟನೆ ಜರುಗುವುದು. ಗ್ರಾಪಂ ಅಧ್ಯಕ್ಷೆ ಸುಮಿತ್ರಾ ದ್ಯಾವಣ್ಣವರ್ ಚಿತ್ರಕಲಾ ಪ್ರದರ್ಶನ, ಡಿಡಿಪಿಐ ಬಿ.ಕೆ. ನಂದನೂರ ಪುಸ್ತಕ ಮಳಿಗೆ ಹಾಗೂ ಸಂಸದ ಪಿ.ಸಿ.ಗದ್ದಿಗೌಡರ ಸ್ಮರಣ ಸಂಚಿಕೆ ಲೋಕಾರ್ಪಣೆಗೊಳಿಸುವರು.

12 ಗಂಟೆಗೆ ತಾಲೂಕು ದರ್ಶನ ಗೋಷ್ಠಿ ಬಳಿಕ ಸಮ್ಮೇಳನ ಅಧ್ಯಕ್ಷರ ಬದುಕು-ಬರಹ, ಸಂವಾದ ಗೋಷ್ಠಿ ನಡೆಯಲಿದೆ. ಮಧ್ಯಾಹ್ನ 3.30ಕ್ಕೆ ಕವಿಗೋಷ್ಠಿ, 4.30ಕ್ಕೆ ಬಹಿರಂಗ ಅಧಿವೇಶನ, ನಂತರ ಸಾಧಕರಿಗೆ ಸನ್ಮಾನ, 6.30ಕ್ಕೆ ಸಮ್ಮೇಳನದ ಸಮಾರೋಪ ಸಮಾರಂಭ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿವೆ. ಕಸಾಪ ಜಿಲ್ಲಾ ಕೋಶಾಧ್ಯಕ್ಷ ಡಾ. ಸಿಎಂ ಜೋಶಿ, ಗೌರವ ಕಾರ್ಯದರ್ಶಿ ಡಾ. ಚಂದ್ರಶೇಖರ ಕಾಳನ್ನವರ, ಎ.ಎಸ್. ಕಾಡರ ಅವರು ಸಮ್ಮೇಳನದ ಸಿದ್ಧತೆ ಹಾಗೂ ಸಮ್ಮೇಳನದ ಮಾಹಿತಿ ನೀಡಿದರು. ಈರಣ್ಣ ಅಲದಿ, ವಿಠ್ಠಲ್ ಬದಿ, ಮಲ್ಲಿಕಾರ್ಜುನ ಹಾಲಿಗೇರಿ, ಸಂಗಣ್ಣ ಚಿಕ್ಕಾಡಿ, ದೇವರಾಜ ಅಡ್ಡಿ, ಗುಂಡಪ್ಪ ಕೋಟಿ, ಎಲ್ಲಪ್ಪ ಮನ್ನಿಕಟ್ಟಿ ಸೇರಿದಂತೆ ಕಸಾಪ ಪದಾಧಿಕಾರಿಗಳು ಸುದ್ದಿಗೋಷ್ಠಲ್ಲ್ಲಿ ಇದ್ದರು.