ಗುಂಡೇವಾಡಿ ವಿಪಿಜಿಕೆ:ಶಿವಾನಂದ ಗೊಲಬಾಂವಿ ಅಧ್ಯಕ್ಷ, ಆನಂದ ಕದಂ ಉಪಾಧ್ಯಕ್ಷ

| Published : Oct 26 2024, 01:15 AM IST

ಸಾರಾಂಶ

ಗುಂಡೇವಾಡಿ ವಿವಿಧೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘಕ್ಕೆ ಶಿವಾನಂದ ಗೊಲಬಾವಿ ಅಧ್ಯಕ್ಷರಾಗಿ 3ನೇ ಬಾರಿಗೆ ಹಾಗೂ ಆನಂದ ಬಾಪು ಕದಮ್ ಉಪಾಧ್ಯರಾಗಿ 3ನೇ ಬಾರಿಗೆ ಅವಿರೋಧವಾಗಿ ಆಯ್ಕೆಯಾದರು.

ಕನ್ನಡಪ್ರಭ ವಾರ್ತೆ ಕಾಗವಾಡ

ಗುಂಡೇವಾಡಿ ವಿವಿಧೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘಕ್ಕೆ ಶಿವಾನಂದ ಗೊಲಬಾವಿ ಅಧ್ಯಕ್ಷರಾಗಿ 3ನೇ ಬಾರಿಗೆ ಹಾಗೂ ಆನಂದ ಬಾಪು ಕದಮ್ ಉಪಾಧ್ಯರಾಗಿ 3ನೇ ಬಾರಿಗೆ ಅವಿರೋಧವಾಗಿ ಆಯ್ಕೆಯಾದರು.

ಶುಕ್ರವಾರ ನಡೆದ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ಇಬ್ಬರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಗುಂಡೇವಾಡಿ ವಿವಿದೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘಕ್ಕೆ ಈಚೆಗೆ ಚುನಾವಣೆ ನಡೆದು ಶಾಸಕರಾದ ಲಕ್ಷ್ಮಣ ಸವದಿ, ರಾಜು ಕಾಗೆ ಬೆಂಬಲಿತ ರೈತ ಸಹಕಾರಿ ಬೆಂಬಲಿತ ಶಿವಾನಂದ ಗೊಲಬಾವಿ ಹಾಗೂ ಗೂಳಪ್ಪ ಜತ್ತಿ ನೇತೃತ್ವದ ಗುಂಪು ಎಲ್ಲ ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರು.ಶುಕ್ರವಾರ ನಡೆದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ಚುನಾವಣೆ ಅಧಿಕಾರಿಯಾಗಿ ರಾಘವೇಂದ್ರ ನೂಲಿ, ಸಹಾಯಕ ಚುನಾವಣೆ ಅಧಿಕಾರಿಯಾಗಿ ಸಂಘದ ಮುಖ್ಯ ಕಾರ್ಯನಿರ್ವಾಹಕ ಕಾಶೀನಾಥ ಕವಟೇಕರ ಕಾರ್ಯನಿರ್ವಹಿಸಿದರು.

ಸನ್ಮಾನ; ನೂತನ ಅಧ್ಯಕ್ಷ,ಉಪಾಧ್ಯಕ್ಷರನ್ನು ಹಾಗೂ ಆಡಳಿತ ಮಂಡಳಿಯವರನ್ನು ಸಂಘದ ಪರವಾಗಿ ಮುಖ್ಯಕಾರ್ಯನಿರ್ವಾಹಕ ಕಾಶೀನಾಥ ಕವಟೇಕರ ಹೂಮಾಲೆ ಹಾಕಿ ಸನ್ಮಾನಿಸಿದರು. ನಂತರ ಬೆಂಬಲಿಗರು ಗುಲಾಲು ಎರಚಿ ಜೈ ಘೋಷಣೆ ಕೂಗಿ ಸಂಭ್ರಮಿಸಿದರು.

ನಿರ್ದೇಶಕರಾದ ಶಿವಾನಂದ ಗೊಲಬಾವಿ, ಖಂಡು ಧನಗರ, ಪಾಪಾಚಂದ ಭೋಸಗೆ, ಶಿವಾನಂದ ಪಾಟೀಲ, ಹುಚ್ಚಪ್ಪ ಗುಂಜಿಗಾಂವಿ, ಕಮಲಾ ಜತ್ತಿ, ಸಂಗೀತಾ ಗೆಜ್ಜಿ, ಸದಾಶಿವ ಕಾಂಬಳೆ, ಪೀರಪ್ಪ ಬೇರಡ, ಲಾಲಸಾಬ ಕುಡಚಿ, ಹಾಗೂ ಸಕ್ಕುಬಾಯಿ ವೀರ ಇತರರು ಇದ್ದರು.