ಗುಂಡ್ಲುಪೇಟೆ: 1160 ಕೆಜಿ ಪಡಿತರ ಅಕ್ಕಿ ವಶ

| Published : Nov 14 2025, 01:45 AM IST

ಸಾರಾಂಶ

ಪಡಿತರ ಅಕ್ಕಿ ಸಾಗಾಣಿಕೆ ಯತ್ನಿಸುತ್ತಿದ್ದಾನೆ ಎಂದು ಖಚಿತ ಮಾಹಿತಿ ಮೇರೆಗೆ ಪೊಲೀಸರು ಹಾಗೂ ಆಹಾರ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ 1160 ಕೆಜಿ ವಶಪಡಿಸಿಕೊಂಡಿದ್ದಾರೆ.

ಗುಂಡ್ಲುಪೇಟೆ: ಪಟ್ಟಣದ ವೀರನಪುರ ಕಾಲೋನಿ ಬಳಿ ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿದ್ದ ಪಡಿತರ ಅಕ್ಕಿ ಸಮೇತ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಸರಗೂರಿನ ಅಜರ್‌ ಪಾಷಾ ಪಡಿತರ ಅಕ್ಕಿ ಸಾಗಾಣಿಕೆ ಯತ್ನಿಸುತ್ತಿದ್ದಾನೆ ಎಂದು ಖಚಿತ ಮಾಹಿತಿ ಮೇರೆಗೆ ಪೊಲೀಸರು ಹಾಗೂ ಆಹಾರ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ 1160 ಕೆಜಿ ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಗುಂಡ್ಲುಪೇಟೆ ಪೊಲೀಸ್‌ ಠಾಣೆಯಲ್ಲಿ ಅಕ್ಕಿ ಸಾಗಾಣಿಕೆ ಮಾಡುತ್ತಿದ್ದ ಗೂಡ್ಸ್‌ ಸಮೇತ ವಶಕ್ಕೆ ಪಡೆದು ಪ್ರಕರಣ ದಾಖಲಿಸಿ ಕೊಂಡು ತನಿಖೆ ನಡೆಸುತ್ತಿದ್ದಾರೆ.