ಗುಂಡ್ಲುಪೇಟೆ: ತೆರಕಣಾಂಬಿಯಲ್ಲಿ ವಿಶೇಷವಾದ ಪ್ರಾಚೀನ ಕಾಲದ ಶ್ರೀರಾಮಮಂದಿರ

| Published : Jan 12 2024, 01:46 AM IST

ಗುಂಡ್ಲುಪೇಟೆ: ತೆರಕಣಾಂಬಿಯಲ್ಲಿ ವಿಶೇಷವಾದ ಪ್ರಾಚೀನ ಕಾಲದ ಶ್ರೀರಾಮಮಂದಿರ
Share this Article
  • FB
  • TW
  • Linkdin
  • Email

ಸಾರಾಂಶ

ತಾಲೂಕಿನ ತೆರಕಣಾಂಬಿ ಗ್ರಾಮದಲ್ಲಿ ವಿಶೇಷವಾದ ಪ್ರಾಚೀನ ಕಾಲದ ಶ್ರೀರಾಮಮಂದಿರ ಗ್ರಾಮದ ಹೃದಯ ಭಾಗದಲ್ಲಿ ೧೦೦ ಅಂಕಣ ನೆಲ ಅಂತಸ್ತು.ಮೇಲೆ ೬ ಅಂತಸ್ತು ಒಟ್ಟು ೧೦೬ ಅಂಕಣದ ಶ್ರೀರಾಮ ಮಂದಿರವನ್ನು ಭವ್ಯ ಕಟ್ಟಡವಿದೆ. ಆದರೀಗ ರಾಮಮಂದಿರ ಮುಚ್ಚಿ ಹೋಗಿರುವುದು ಕಂಡು ಬರುತ್ತಿದೆ.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ತಾಲೂಕಿನ ತೆರಕಣಾಂಬಿ ಗ್ರಾಮದಲ್ಲಿ ವಿಶೇಷವಾದ ಪ್ರಾಚೀನ ಕಾಲದ ಶ್ರೀರಾಮಮಂದಿರ ಗ್ರಾಮದ ಹೃದಯ ಭಾಗದಲ್ಲಿ ೧೦೦ ಅಂಕಣ ನೆಲ ಅಂತಸ್ತು.ಮೇಲೆ ೬ ಅಂತಸ್ತು ಒಟ್ಟು ೧೦೬ ಅಂಕಣದ ಶ್ರೀರಾಮ ಮಂದಿರವನ್ನು ಭವ್ಯ ಕಟ್ಟಡವಿದೆ. ಆದರೀಗ ರಾಮಮಂದಿರ ಮುಚ್ಚಿ ಹೋಗಿರುವುದು ಕಂಡು ಬರುತ್ತಿದೆ.

ಅಯೋಧ್ಯೆಯ ಮೂಲ ರಾಮಮಂದಿರವನ್ನು ಮೀರ್ ಬಾಕಿ ಧರಾಶಾಹಿಯಾಗಿಸಿದ ಕಾಲಘಟ್ಟದಲ್ಲೇ ತೆರಕಣಾಂಬಿಯಲ್ಲೂ ಶಿಲ್ಪದಲ್ಲಿ ಭಕ್ತಾಗ್ರೇಸರ ಕುಂಬಾರ ಸಮುದಾಯದ ಹರಿದಾಸ ಚನ್ನ ಕೇಶವ ಶೆಟ್ಟಿ ಮಧುಕರಿ ಕಾಯಕದ ಮೂಲಕವೇ

ಅಂದಿನ ತೆರಕಣಾಂಬಿ ದೊರೆಯ ಊಳಿಗದವರು ಮಾಡಿದ ಅಪಹಾಸ್ಯಕ್ಕೆ ಒಳಗಾಗಿದ್ದರು.

ದೊರೆಯ ಊಳಿಗದವರ ಅಪಹಾಸ್ಯಕ್ಕೆ ಪ್ರತಿಯಾಗಿ ಕುಂಬಾರ ಸಮುದಾಯದ ಹೆಮ್ಮೆಯ ಸಂಕೇತವನ್ನಾಗಿ ಶ್ರೀರಾಮಮಂದಿರ ನಿರ್ಮಿಸಿದ್ದರು ಎಂಬ ಉಲ್ಲೇಖವಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಎಂ.ಶೈಲಕುಮಾರ್‌(ಶೈಲೇಶ್) ಹೇಳಿದ್ದಾರೆ.

ಕಾಲಾನಂತರ ಶಿಥಿಲವಾದ ಶ್ರೀರಾಮಮಂದಿರದ ಜಾಗವನ್ನು ಬಲಿಷ್ಠವಾದ ಮಂದಿ ಅತಿಕ್ರಮಿಸಿಕೊಂಡು ಗರ್ಭಗೃಹದ ಮೂಲ ವಿಗ್ರಹವಿದ್ದ ಸ್ಥಳದಲ್ಲೇ ತಮ್ಮ ಶಯ್ಯಾಗೃಹ ನಿರ್ಮಿಸಿಕೊಂಡಿದ್ದಾರೆ?

ಉತ್ಸವ ಮೂರ್ತಿ ಇಂದಿಗೂ ಕುಂಬಾರರು ಕಾಲಾನಂತರ ಕಟ್ಟಿಕೊಂಡ ಸಣ್ಣ ರಾಮಮಂದಿರದಲ್ಲಿಟ್ಟುಕೊಂಡು ಪ್ರತಿ ರಾಮನವಮಿಯಂದು ಗ್ರಾಮದಲ್ಲಿ ಮೆರವಣಿಗೆ ನಡೆಸುತ್ತಿದ್ದ ಬರುತ್ತಿದ್ದಾರೆ.

ದುರ್ಬಲ ಸಮುದಾಯದ ಪೂಜಾಸ್ಥಳವನ್ನು ಗ್ರಾಮದ ಬಲಿಷ್ಠರು ಕಿತ್ತುಕೊಂಡಿದ್ದು ಕಂಡರೂ,ಮರಳಿ ಕೇಳುವ ಧ್ವನಿಯೂ ಇಲ್ಲವಾಗಿದೆ ವಿಪರ್ಯಾಸ ಎಂದರೆ ರಾಮನ ಹೆಸರಲ್ಲಿ ದೇಶದೆಲ್ಲೆಡೆ ಅಧಿಕಾರ ಪಡೆದವರಿಗೆ ಇಲ್ಲಿನ ಶ್ರೀರಾಮಮಂದಿರದ ಅನ್ಯಾಯ ಕಾಣದಾಗಿದೆ.

ಪ್ರಾಚೀನ ಇತಿಹಾಸವನ್ನು ಗರ್ಭದಲ್ಲಿ ಇರಿಸಿಕೊಂಡಿರುವ ತೆರಕಣಾಂಬಿ ಗ್ರಾಮದ ಶ್ರೀರಾಮ ಮಂದಿರದಲ್ಲಿ ರಾಮನ ವಿಗ್ರಹವಿಲ್ಲ. ಶ್ರೀರಾಮಂದಿರವೀಗ ಪಾಳು ಬಿದ್ದಿದೆ ಜೊತೆಗೆ ಬಲಿಷ್ಠರ ಪಾಲಾಗಿರುವುದು ಮೇಲ್ನೋಟಕ್ಕೆ ಕಾಣುತ್ತಿದೆ.