ದೀಪಾವಳಿ ಹಬ್ಬಕ್ಕೆ ಪಟಾಕಿ ಹಚ್ಚಲ್ಲ ಎಂದು ಹೊಂಗಳ್ಳಿ ಶಾಲೆ ಮಕ್ಕಳು ನಿರ್ಧಾರ

| Published : Oct 30 2024, 12:37 AM IST

ದೀಪಾವಳಿ ಹಬ್ಬಕ್ಕೆ ಪಟಾಕಿ ಹಚ್ಚಲ್ಲ ಎಂದು ಹೊಂಗಳ್ಳಿ ಶಾಲೆ ಮಕ್ಕಳು ನಿರ್ಧಾರ
Share this Article
  • FB
  • TW
  • Linkdin
  • Email

ಸಾರಾಂಶ

ಗುಂಡ್ಲುಪೇಟೆಯ ಹೊಂಗಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಶಾಲೆಯ ಪ್ರಾರ್ಥನಾ ಸಮಯದಲ್ಲಿ ದೀಪಾವಳಿ ಹಬ್ಬಕ್ಕೆ ಪಟಾಕಿ ಹಚ್ಚದೆ ನೆಲ, ಜಲ, ಶಬ್ಧ, ವಾಯು ಮಾಲಿನ್ಯ ಮಾಡುವುದಿಲ್ಲ ಎಂದು ಶಪಥ ಮಾಡುವ ಮೂಲಕ ಶಾಲಾ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಮಾದರಿಯಾಗಿದ್ದಾರೆ.

ಮಣ್ಣಿನ ಹಣತೆ ಹಚ್ಚಿ ಹಬ್ಬದಾಚರಣೆ ನಿರ್ಧಾರ । ಹಸಿರು, ಪರಿಸರ ಸ್ನೇಹಿ ದೀಪಾವಳಿ ಆಚರಣೆ

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ತಾಲೂಕಿನ ಹೊಂಗಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಶಾಲೆಯ ಪ್ರಾರ್ಥನಾ ಸಮಯದಲ್ಲಿ ದೀಪಾವಳಿ ಹಬ್ಬಕ್ಕೆ ಪಟಾಕಿ ಹಚ್ಚದೆ ನೆಲ, ಜಲ, ಶಬ್ಧ, ವಾಯು ಮಾಲಿನ್ಯ ಮಾಡುವುದಿಲ್ಲ ಎಂದು ಶಪಥ ಮಾಡುವ ಮೂಲಕ ಶಾಲಾ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಮಾದರಿಯಾಗಿದ್ದಾರೆ.

ಕಳೆದೊಂದು ವಾರದಿಂದಲೂ ಶಾಲೆಯ ಪ್ರಾರ್ಥನಾ ಸಮಯದಲ್ಲಿ ಶಾಲೆಯ ಮಕ್ಕಳು ತಮ್ಮ ತಮ್ಮ ಮನೆಗಳಲ್ಲಿ ಮಣ್ಣಿನ ಹಣತೆ ಹಚ್ಚುವ ಮೂಲಕ ಹಸಿರು ದೀಪಾವಳಿ, ಪರಿಸರ ಸ್ನೇಹಿ ದೀಪಾವಳಿ, ಸ್ವಚ್ಛ ದೀಪಾವಳಿ, ಸ್ವಾಸ್ಥ್ಯ ದೀಪಾವಳಿ ಆಚರಿಸಲು ತೀರ್ಮಾನಿಸಿದ್ದಾರೆ.

ದೀಪಾವಳಿ ಎಂದಾಕ್ಷಣ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಪಟಾಕಿ ಹಚ್ಚಲು ತುದಿಗಾಲ ಮೇಲೆ ನಿಂತಿರುತ್ತಾರೆ. ಆದರೆ ಹೊಂಗಳ್ಳಿ ಶಾಲೆಯ ಮಕ್ಕಳು ಭಿನ್ನವಾಗಿದ್ದು, ದೀಪಾವಳಿ ದಿನ ಪಟಾಕಿ ಹಚ್ಚದೆ ತಮ್ಮ ತಮ್ಮ ಮನೆ ಮನಗಳನ್ನು ಬೆಳಗಲು ದೇವರ ಹೆಸರಲ್ಲಿ ಪ್ರತಿಜ್ಞೆ ಮಾಡಿದ್ದಾರೆ.

ಮುಖ್ಯ ಶಿಕ್ಷಕ ಬಿ.ಮಹದೇಶ್ವರಸ್ವಾಮಿ ಮಾತನಾಡಿ, ಹೊಂಗಳ್ಳಿ ಶಾಲೆಯಲ್ಲಿ ಕಳೆದ ೮ ವರ್ಷಗಳಿಂದಲೂ ಶಾಲೆಯ ಮಕ್ಕಳು ಪ್ರತಿ ವರ್ಷ ದೀಪಾವಳಿ ಹಬ್ಬಕ್ಕೆ ಪಟಾಕಿ ಹಚ್ಚದೆ ಪ್ರತಿಜ್ಞೆ ಮಾಡುವುದರ ಮೂಲಕ ಇತರರಿಗೂ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ತುಂಬಾ ಹಣ ಖರ್ಚು ಮಾಡಿ ಪಟಾಕಿ ಸಿಡಿಸಿದರೆ ಪರಿಸರಕ್ಕೆ ಹಾನಿ ಮಾಡುವುದಲ್ಲದೆ, ಪಟಾಕಿಯಿಂದ ಅನಾಹುತ ಸಂಭವಿಸಿದರೆ ಮಕ್ಕಳ ಅಮೂಲ್ಯವಾದ ಕಣ್ಣು, ಕಿವಿ, ಚರ್ಮ ಇತ್ಯಾದಿ ಸುಟ್ಟು ಅಂಗಹೀನರಾಗಿದ್ದಾರೆ. ಬದುಕನ್ನೇ ಕತ್ತಲೆ ಮಾಡಿಕೊಂಡು ಅಂಧಕಾರದಲ್ಲಿ ಮುಳುಗಿದ್ದಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಶಿಕ್ಷಕರಾದ ನಂದಿನಿ, ವಿನೋದ, ಕವಿತ ಹಾಗೂ ಶಾಲೆಯ ಮಕ್ಕಳಿದ್ದರು. ಈ ಏಳೂರಲ್ಲಿ ದೀಪಾವಳಿ ಹಬ್ಬ ಆಚರಿಸಲ್ಲ!

ನ.೬ರಂದು ದೀಪದ ಹಬ್ಬ ಆಚರಣೆಗೆ ಸಿದ್ಧತೆ

ರಂಗೂಪುರ ಶಿವಕುಮಾರ್‌

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆದೀಪಾವಳಿ ಹಬ್ಬ ದೇಶದೆಲ್ಲೆಡೆ ಸಂಭ್ರಮ, ಸಡಗರಿಂದ ಆಚರಣೆಯಲ್ಲಿ ಸಿದ್ಧವಾಗುತ್ತಿದ್ದರೆ ತಾಲೂಕಿನ ನೇನೇಕಟ್ಟೆ ಸುತ್ತ-ಮುತ್ತಲ ೭ ಹಳ್ಳಿಯಲ್ಲಿ ದೀಪಾವಳಿ ಹಬ್ಬವನ್ನು ಗುರುವಾರ ಸೇರಿ ಮೂರು ದಿನವೂ ಆಚರಿಸುವುದಿಲ್ಲ.ದೀಪಾವಳಿ ಹಬ್ಬ ಬುಧವಾರ ಬಂದರೆ ಮಾತ್ರ ಎಲ್ಲರಂತೆ ಈ ೭ ಗ್ರಾಮಗಳ ಜನರು ಹಬ್ಬ ಮಾಡಲಿದ್ದಾರೆ. ಈ ಸಾಲಿನಲ್ಲಿ ದೀಪಾವಳಿ ಹಬ್ಬ ಶನಿವಾರ ಗುರುವಾರ, ಶುಕ್ರವಾರ, ಶನಿವಾರ ಬಂದಿರುವ ಕಾರಣ ಹಬ್ಬದ ಸಂಭ್ರಮದ ಕುರುಹು ಈ ಗ್ರಾಮದಲ್ಲಿ ಕಂಡು ಬರುತ್ತಿಲ್ಲ.ನೇನೇಕಟ್ಟೆ ಗ್ರಾಮದ ಸೇರಿದಂತೆ ಏಳೂರು ಎಂದು ಕರೆಯಲ್ಪಡುವ ಮಳವಳ್ಳಿ, ಬನ್ನಿತಾಳಪುರ, ಇಂಗಲವಾಡಿ, ಬೆಂಡಗಳ್ಳಿ, ವೀರನಪುರ ಹಾಗೂ ನಲ್ಲೂರಲ್ಲಿ ಬುಧವಾರ ದೀಪಾವಳಿ ಬಂದರೆ ಮಾತ್ರ ಹಬ್ಬದ ಸಡಗರ, ಸಂಭ್ರಮ ಕಾಣಲಿದೆ.ದೇಶದಲ್ಲೆಡೆ ಯಾವ ದಿನವಾದರೂ ದೀಪಾವಳಿ ಹಬ್ಬ ಮಾಡಲಿದ್ದಾರೆ. ಆದರೆ ಈ ೭ ಹಳ್ಳಿಗಳಲ್ಲಿ ಮಾತ್ರ ಬುಧವಾರ ಹೊರತುಪಡಿಸಿ ಹಬ್ಬ ಮಾಡಿದರೆ ಏನಾದರೂ ಅನಾಹುತ ಸಂಭವಿಸಲಿದೆ ಎಂಬ ಹಿರಿಯರ ವಾಡಿಕೆಯಂತೆ ದೀಪಾವಳಿ ಹಬ್ಬ ಮಾಡುವುದಿಲ್ಲ ಎಂದು ನೇನೇಕಟ್ಟೆ ಗ್ರಾಮದ ಎನ್.ಎಂ.ಗಂಗಾಧರಪ್ಪ ಹೇಳುತ್ತಾರೆ.ಹಾಗಾಗಿ ಮುಂದಿನ ನ.೬ ರಂದು ಮೇಲ್ಕಂಡ ಎಲ್ಲಾ ಹಳ್ಳಿಯಲ್ಲೂ ದೇಶದಲ್ಲಿ ನಡೆಯುವಂತೆ ದೀಪಾವಳಿ ಹಬ್ಬದಾಚರಣೆಯ ಜೊತೆಗೆ ಜಾನುವಾರಿಗೆ ಪೂಜೆ ನಡೆಸಿ ಮೆರವಣಿಗೆ ನಡೆಸಲಾಗುತ್ತದೆ ಎಂದರು.ಇದೊಂದೆ ಹಬ್ಬವಲ್ಲ:ದೀಪಾವಳಿ ಹಬ್ಬ ಆಚರಣೆಗೆ ಬುಧವಾರ ಆಗಬೇಕು. ಅಲ್ಲದೆ ಯುಗಾದಿ ಆಚರಣೆಗೆ ಶುಕ್ರವಾರ ಆಗಬೇಕು. ದೀಪಾವಳಿ ಹಾಗೂ ಯುಗಾದಿ ಹಬ್ಬದ ವಾರದ ದಿನ ಬಿಟ್ಟು ಬೇರೆ ದಿನಗಳಲ್ಲಿ ಬಂದರೆ ಎರಡು ಹಬ್ಬದ ಆಚರಣೆ ಕೂಡ ಇಲ್ಲವಂತೆ ಈ ಏಳು ಊರಿನಲ್ಲಿ.