ಸಾರಾಂಶ
ಪುರಸಭೆ ೧೪ ನೇ ವಾರ್ಡ್‌ನ ಕೆಲ ಬೀದಿಗಳಿಗೆ ಮಲ ಮಿಶ್ರಿತ ನೀರು ಸರಬರಾಗುತ್ತಿದ್ದು, ಮಲಮಿಶ್ರಿತ ನೀರು ಎಲ್ಲಿಂದ ಬರುತ್ತಿದೆ ಎಂದು ಪತ್ತೆ ಹಚ್ಚಲು ಪುರಸಭೆ ಸಿಬ್ಬಂದಿ ಕೆಲ ಬೀದಿಗಳಲ್ಲಿ ರಸ್ತೆ ಅಗೆದಿದ್ದಾರೆ.
ಮಲ ಮಿಶ್ರಿತ ನೀರನ್ನು ಪತ್ತೆಹಚ್ಚಲು ಮುಂದಾದ ಪುರಸಭೆ ಅಧಿಕಾರಿಗಳು । ಸಮಸ್ಯೆ ಆಲಿಸಲು ಬಾರದ ವಾರ್ಡ್ ಸದಸ್ಯ
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆಪುರಸಭೆ ೧೪ ನೇ ವಾರ್ಡ್‌ನ ಕೆಲ ಬೀದಿಗಳಿಗೆ ಮಲ ಮಿಶ್ರಿತ ನೀರು ಸರಬರಾಗುತ್ತಿದ್ದು, ಮಲಮಿಶ್ರಿತ ನೀರು ಎಲ್ಲಿಂದ ಬರುತ್ತಿದೆ ಎಂದು ಪತ್ತೆ ಹಚ್ಚಲು ಪುರಸಭೆ ಸಿಬ್ಬಂದಿ ಕೆಲ ಬೀದಿಗಳಲ್ಲಿ ರಸ್ತೆ ಅಗೆದಿದ್ದಾರೆ.೧೪ ನೇ ವಾರ್ಡ್ ಜನತಾ ಕಾಲೋನಿಯ ಕಸಾಪ ಜಿಲ್ಲಾಧ್ಯಕ್ಷ ಎಂ.ಶೈಲಕುಮಾರ್(ಶೈಲೇಶ್) ಅವರ ಮನೆಗೆ ಮಲ ಮಿಶ್ರಿತ ನೀರು ಸಂಪಿಗೆ ಬಂದಿದೆ. ವಾಸನೆ ಕಂಡು ಹೌಹಾರಿದ ಶೈಲೇಶ್ ಪುರಸಭೆಗೆ ಮಾಹಿತಿ ನೀಡಿದ್ದಾರೆ.ಪುರಸಭೆಯ ಅಧಿಕಾರಿಗಳು, ಸಿಬ್ಬಂದಿ ಸ್ಪಂದಿಸಿ ಶೈಲೇಶ್ ಮನೆಯ ಹಿಂಭಾಗದ ರಸ್ತೆಯ ಕುಡಿವ ನೀರು ಬರುವ ಪೈಪ್ ಅಗೆದಾಗ ವಾಸನೆಯ ನೀರು ಮೂಗಿಗೆ ರಾಚಿತು ಎಂದು ಶೈಲಕುಮಾರ್ ಸ್ಪಷ್ಟಪಡಿಸಿದ್ದಾರೆ.ಕುಡಿವ ನೀರಿನ ಪೈಪ್‌ಗೆ ಮಲ ಮಿಶ್ರಿತ ನೀರು ಎಲ್ಲಿಂದ ಬರುತ್ತದೆ ಎಂದು ಪತ್ತೆ ಹಚ್ಚಲು ಪುರಸಭೆ ಸಿಬ್ಬಂದಿಗಳು ಜನತಾ ಕಾಲೋನಿಯ ಕೆಲ ಬೀದಿಗಲ್ಲಿ ಕುಡಿವ ನೀರಿನ ಪೈಪ್‌ಗಳ ಬಳಿ ಗುಂಡಿ ಅಗೆದು ಪತ್ತೆ ಹಚ್ಚಲು ಮುಂದಾಗಿದ್ದಾರೆ.ಆದರೆ ಶನಿವಾರ ಮಧ್ಯಾಹ್ನ ತನಕವೂ ಮಲ ಮಿಶ್ರಿತ ನೀರು ಎಲ್ಲಿಂದ ಬರುತ್ತದೆ ಎಂದು ತಿಳಿಯಲು ಆಗಿಲ್ಲ. ಸಂಕ್ರಾಂತಿ ಹಬ್ಬಕ್ಕೆ ನೀರು ಈ ಭಾಗದ ಜನರಿಗೆ ಬೇಕಿರುವ ಕಾರಣ ಪುರಸಭೆ ಎಚ್ಚೆತ್ತು ಮಲ ಮಿಶ್ರಿತ ನೀರು ಎಲ್ಲಿಂದ ಬರುತ್ತದೆ ಎಂದು ಪತ್ತೆ ಹಚ್ಚುವ ತನಕ ಹಾಲಿ ಇದ್ದ ಕುಡಿವ ನೀರಿನ ಪೈಪ್ ಮೂಲಕ ನೀರು ಬಿಡದಂತೆ ಹೇಳಿದ್ದಾರೆ.ಜೆಜೆಎಂ ಯೋಜನೆಯ ಪೈಪ್ ಜನತಾ ಕಾಲೋನಿಯಲ್ಲಿ ಹಾಕಲಾಗಿದೆ. ಜೆಜೆಎಂ ಪೈಪ್ ಮೂಲಕ ಸಂಕ್ರಾಂತಿ ಹಬ್ಬ ಮುಗಿವ ತನಕ ಪುರಸಭೆಯ ನೀರನ್ನು ಬಿಡಲು ಸಿಬ್ಬಂದಿಗೆ ಹೇಳಿದ್ದಾರೆ ಹಾಗಾಗಿ ಜನತಾ ಕಾಲೋನಿಯ ಕೆಲ ಬೀದಿಗಳ ಜನರು ನಿಟ್ಟಿಸಿರು ಬಿಟ್ಟಿದ್ದಾರೆ.ಸಮಸ್ಯೆ ಆಲಿಸಲು ಬಾರದ ಸದಸ್ಯ : ಜನತಾ ಕಾಲೋನಿಯಲ್ಲಿ ಮಲಮಿಶ್ರಿತ ನೀರು ಮನೆಗಳಿಗೆ ಬರುತ್ತಿದೆ ಎಂಬ ಮಾಹಿತಿ ಪಟ್ಟಣದಲ್ಲಿ ಹರಿದಾಡುತ್ತಿದ್ದರೂ ಈ ವಾರ್ಡ್ ಜನತೆಯ ಸಮಸ್ಯೆ ಕೇಳಲು ಸೌಜನ್ಯಕ್ಕೂ ಈ ವಾರ್ಡ್ ಬಿಜೆಪಿ ಸದಸ್ಯ ಎಸ್.ಕುಮಾರ್ ಬಂದಿಲ್ಲ ಎಂಬುದು ಜನರ ಮಾತು.ಜೆಜೆಎಂ ಯೋಜನೆಯ ಪೈಪ್ ಹಾಕಲು ಭೂಮಿಯನ್ನು ಜೆಸಿಬಿ ಯಂತ್ರ ಕೆಲಸ ಮಾಡುವಾಗ ಪುರಸಭೆ ಕುಡಿಯುವ ನೀರಿನ ಪೈಪ್ ಡ್ಯಾಮೇಜ್ ಆಗಿ ಚರಂಡಿ ನೀರು ಲಿಂಕ್ ಆಗಿ ಜನತಾ ಕಾಲೋನಿಯ ಕೆಲ ಮನೆಗಳಿಗೆ ಬಂದಿದೆ. ಎಲ್ಲಿ ಕಲುಷಿತ ನೀರು ಲಿಂಕ್ ಆಗಿದೆ ಎಂದು ಸಿಬ್ಬಂದಿ ಹುಡುಕಾಟ ನಡೆಸಿದ್ದಾರೆ. ಹೊಸ ಪೈಪ್ ಹಾಕಿ ನೀರು ಕೊಡುವ ಪ್ರಯತ್ನ ಮಾಡುತ್ತಿದ್ದೇವೆ. ಹಬ್ಬದ ಹಿನ್ನಲೆ ಜೆಜೆಎಂ ಪೈಪ್ ನಿಂದ ನೀರು ಕೊಡುವ ಪ್ರಯತ್ನ ಆದರೆ ನೀರು ಕೊಡಲಾಗುವುದು.-ಕೆ.ಪಿ.ವಸಂತಕುಮಾರಿ,ಪುರಸಭೆ ಮುಖ್ಯಾಧಿಕಾರಿ
ಜನತಾ ಕಾಲೋನಿಯಲ್ಲಿ ಕುಡಿವ ನೀರಿನ ಪೈಪ್‌ನಲ್ಲಿ ಮಲಮಿಶ್ರಿತ ವಾಸನೆ ಬೀರುವ ನೀರು ಬಂದಿತ್ತು. ಪುರಸಭೆ ಗಮನಕ್ಕೆ ತಂದಾಗ ಮಲ ಮಿಶ್ರಿತ ನೀರು ಎಲ್ಲಿಂದ ಬರುತ್ತಿದೆ ಎಂದು ಪತ್ತೆ ಹಚ್ಚಲು ಶನಿವಾರ ತನಕ ಆಗಿಲ್ಲ. ಪುರಸಭೆ ಸಿಬ್ಬಂದಿ ಜೆಜೆಎಂ ಪೈಪ್‌ನಲ್ಲಿ ತಾತ್ಕಾಲಿಕವಾಗಿ ನೀಡುತ್ತೇವೆ ಎಂದು ಹೇಳಿದ್ದಾರೆ. ಪುರಸಭೆ ಸಿಬ್ಬಂದಿ ಮಲಮಿಶ್ರಿತ ನೀರು ಬರುವ ಜಾಗ ಹುಡುಕಾಟ ನಡೆಸುತ್ತಿದ್ದಾರೆ.ಎಂ.ಶೈಲಕುಮಾರ್(ಶೈಲೇಶ್),ಕಸಾಪ ಜಿಲ್ಲಾಧ್ಯಕ್ಷ