ಸಾರಾಂಶ
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಪಟ್ಟಣದ ತಾಲೂಕು ಕಚೇರಿಯಲ್ಲಿ ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆ ನಡೆದಿದ್ದು, ಶೇ.93.26 ಮತದಾನ ಶಾಂತಿಯುತವಾಗಿ ನಡೆದಿದೆ.ತಾಲೂಕು ಕಚೇರಿಯ ಸಭಾ ಭವನದಲ್ಲಿ ಮತದಾನ ನಡೆದಿದ್ದು, ಒಟ್ಟು 403 ಮತಗಳಲ್ಲಿ 376 ಮತಗಳು ಮಾತ್ರ ಚಲಾವಣೆಗೊಂಡಿವೆ. ದಕ್ಷಿಣ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಮರಿತಿಬ್ಬೇಗೌಡರ ಪರ ಕಾಂಗ್ರೆಸ್ ಮುಖಂಡರು ಎರಡು ಕಡೆ ಶಾಮಿಯಾನ, ಬಿಜೆಪಿ ಬೆಂಬಲಿತ ಅಭ್ಯರ್ಥಿ ವಿವೇಕಾನಂದ ಪರ ತಾಲೂಕು ಕಚೇರಿ ಮುಂಭಾಗದ ಹೆದ್ದಾರಿ ಬದಿಯಲ್ಲಿ ಶಾಮಿಯಾನ ಹಾಕಿ ಕುಳಿತಿದ್ದರು. ಮತದಾನ ಕೇಂದ್ರಕ್ಕೆ ಮತದಾನ ಮಾಡಲು ಬಂದ ಶಿಕ್ಷಕ ಮತದಾರರಿಗೆ ಗುರುತಿನ ಚೀಟಿ ನೀಡಿ ನಮ್ಮ ಪಕ್ಷದ ಅಭ್ಯರ್ಥಿಗೆ ಮತ ನೀಡಬೇಕು ಎಂದು ಕಾಂಗ್ರೆಸ್, ಬಿಜೆಪಿ ಪಕ್ಷದ ಮುಖಂಡರು ಮನವಿ ಮಾಡಿದರು. ಕಾಂಗ್ರೆಸ್ ಪಕ್ಷದ ಮುಖಂಡರಾದ ಎಚ್.ಎಸ್.ನಂಜಪ್ಪ, ಎಚ್.ಎಸ್.ನಂಜುಂಡಪ್ರಸಾದ್, ಕೆ.ಎಸ್.ಮಹೇಶ್, ಪಿ.ಬಿ.ರಾಜಶೇಖರ್, ಎಚ್.ಎನ್.ಬಸವರಾಜು, ಹಂಗಳ ಗಂಗಪ್ಪ, ಮಂಚಹಳ್ಳಿ ಲೋಕೇಶ್, ಪುರಸಭೆ ಸದಸ್ಯರಾದ ಅಣ್ಣಯ್ಯಸ್ವಾಮಿ, ಎನ್.ಕುಮಾರ್, ಕಮರಹಳ್ಳಿ ಕುಮಾರ್, ಬಸವೇಶ್, ಶಿವಪುರ ಮಂಜಪ್ಪ, ಹೊಸೂರು ಶಿವಣ್ಣ, ಕಣ್ಣೇಗಾಲ ಜಯರಾಂ, ಬಿ.ಸಿ.ಮಹದೇವಸ್ವಾಮಿ, ಮಂಡ್ಯ ಗಿರೀಶ್, ವೀರನಪುರ ಗುರು ಇದ್ದರು. ಬಿಜೆಪಿ ಪಾಳೆಯದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಸಿ.ಎಸ್.ನಿರಂಜನ್ ಕುಮಾರ್, ಬಿಜೆಪಿ ಮುಖಂಡರಾದ ಪಿ.ಗಿರೀಶ್, ಎಲ್.ಸುರೇಶ್, ಸಿ.ಮಹದೇವಪ್ರಸಾದ್, ಕೆ.ಎಸ್.ರೇವಣ್ಣ, ಕಿರಣ್ ಗೌಡ ಸೇರಿದಂತೆ ಹಲವರಿದ್ದರು.