ಗಲಾಟೆಯಲ್ಲಿ ಖಾಸಗಿ ಗನ್ ಮ್ಯಾನ್‌ಗಳ ಬುಲೆಟ್‌ನಿಂದಲೇ ಕಾಂಗ್ರೆಸ್‌ ಕಾರ್ಯಕರ್ತ ರಾಜಶೇಖರ ಸಾವಾಗಿದೆ. ಖಾಸಗಿ ಗನ್ ಮ್ಯಾನ್‌ಗಳು ಬಳಸಿವ 12ಎಂಎಂ ಬುಲೆಟ್‌ನಿಂದಲೇ ಸಾವಾಗಿರುವುದು ಖಚಿತವಾಗಿದೆ ಎಂದು ಎಡಿಜಿಪಿ ಹಿತೇಂದ್ರ ಕುಮಾರ್ ತಿಳಿಸಿದ್ದಾರೆ.

 ಬಳ್ಳಾರಿ : ಗಲಾಟೆಯಲ್ಲಿ ಖಾಸಗಿ ಗನ್ ಮ್ಯಾನ್‌ಗಳ ಬುಲೆಟ್‌ನಿಂದಲೇ ಕಾಂಗ್ರೆಸ್‌ ಕಾರ್ಯಕರ್ತ ರಾಜಶೇಖರ ಸಾವಾಗಿದೆ. ಖಾಸಗಿ ಗನ್ ಮ್ಯಾನ್‌ಗಳು ಬಳಸಿವ 12ಎಂಎಂ ಬುಲೆಟ್‌ನಿಂದಲೇ ಸಾವಾಗಿರುವುದು ಖಚಿತವಾಗಿದೆ ಎಂದು ಎಡಿಜಿಪಿ ಹಿತೇಂದ್ರ ಕುಮಾರ್ ತಿಳಿಸಿದ್ದಾರೆ. 

ಗುರುವಾರ ಸಂಜೆ ನಗರದಲ್ಲಿ ನಡೆದ ಬ್ಯಾನರ್‌ ಗಲಾಟೆ ಹಿನ್ನೆಲೆಯಲ್ಲಿ ಖಾಸಗಿ ಗನ್ ಮ್ಯಾನ್‌ಗಳ ಗನ್‌ಗಳನ್ನು ಈಗಾಗಲೇ ವಶಕ್ಕೆ ಪಡೆದಿದ್ದು, ಯಾವ ಗನ್‌ನಿಂದ ಬುಲೆಟ್‌ ಹೊರ ಬಂತು ಎನ್ನುವ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ.

ಜನಾರ್ದನ ರೆಡ್ಡಿ ಹಾಗೂ ಇದೀಗ ಸತೀಶ್ ರೆಡ್ಡಿ ಅಂಗರಕ್ಷಕರ ಗನ್‌ಗಳ ಗುಂಡುಗಳ ಪರಿಶೀಲನೆಯನ್ನೂ ಮಾಡಲಾಗುತ್ತಿದೆ ಎಂದವರು ತಿಳಿಸಿದರು. ಈ ಮಧ್ಯೆ, ಪ್ರಕರಣ ಸಂಬಂಧ ಶಾಸಕ ಭರತರೆಡ್ಡಿ ಸೇರಿ 22 ಜನರ ವಿರುದ್ಧ ದೂರು ದಾಖಲು ಮಾಡಲಾಗಿದೆ ಎಂದವರು ತಿಳಿಸಿದ್ದಾರೆ.ಗಾಂಜಾ ಪೆಡ್ಲರ್‌ ಜತೆ ಭರತ್‌ ಸ್ನೇಹದ ವಿಡಿಯೋ ಬಿಡುಗಡೆ:ಗಾಂಜಾ ಪೆಡ್ಲರ್ ಜೊತೆಗೆ ಕಾಂಗ್ರೆಸ್ ಶಾಸಕ ಭರತ್ ರೆಡ್ಡಿ ಇದ್ದಾರೆ ಎಂದು ಬಿಜೆಪಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಆರೋಪಿಸಿದ್ದಾರೆ. 

ಬಳ್ಳಾರಿಯಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿದ ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ, ಈ ವೇಳೆ ಗಾಂಜಾ ಪೆಡ್ಲರ್ ಜೊತೆ ಭರತ್ ರೆಡ್ಡಿ ಇರುವ ವಿಡಿಯೋ ಪ್ರದರ್ಶಿಸಿದರು. ಭರತ್ ರೆಡ್ಡಿ ಗಾಂಜಾ ಪೆಡ್ಲರ್ ದೌಲಾ ಎಂಬಾತನ ಜೊತೆ ಇದ್ದ ಎಂದು ಆರೋಪಿಸಿದರು. ವಿಡಿಯೋದಲ್ಲಿ, ಶಾಸಕ ನಾರಾ ಭರತ್ ರೆಡ್ಡಿ ಗಾಂಜಾ ಪೆಡ್ಲರ್ ದೌಲಾ ಜೊತೆಗೆ ಕಾಲ ಮೇಲೆ ಕಾಲು ಹಾಕಿಕೊಂಡು ಕುಳಿತಿರುವ ದೃಶ್ಯಗಳು ಇವೆ. ಇದನ್ನು ಆಧಾರವಾಗಿಟ್ಟುಕೊಂಡು ಜನಾರ್ದನ ರೆಡ್ಡಿ ಕಾಂಗ್ರೆಸ್ ಶಾಸಕನ ಮೇಲೆ ಗಂಭೀರ ಆರೋಪಗಳನ್ನು ಮಾಡಿದ್ದಾರೆ. 

ದೌಲಾ ಮೇಲೆ 50 ಕೆಜಿ ಗಾಂಜಾ ಪೆಡ್ಲಿಂಗ್ ಸೇರಿದಂತೆ 18 ಪ್ರಕರಣಗಳು ದಾಖಲಾಗಿವೆ ಎಂದು ಅವರು ತಿಳಿಸಿದ್ದಾರೆ.ಬಳ್ಳಾರಿ ಫೈರಿಂಗ್ ವಿಚಾರದಲ್ಲಿ ಮೃತ ಕಾಂಗ್ರೆಸ್ ಕಾರ್ಯಕರ್ತನಿಗೆ ನ್ಯಾಯ ಸಿಗಬೇಕಾದರೆ ತಪ್ಪಿತಸ್ಥರಾದ ಸತೀಶ್ ರೆಡ್ಡಿ ಮತ್ತು ಅವರ ಅಂಗರಕ್ಷಕರನ್ನು ತಕ್ಷಣ ಬಂಧಿಸಬೇಕು ಎಂದು ಆಗ್ರಹಿಸಿದರು.ಗಾಂಜಾ ಪೆಡ್ಲರ್ ಜತೆ ಭರತ್:

ಬ್ಯಾನರ್ ಗಲಾಟೆ ರೂವಾರಿ ಸತೀಶ್ ರೆಡ್ಡಿಯನ್ನು ಬಂಧಿಸದೆ ಎಸ್ಪಿಯನ್ನು ಸಸ್ಪೆಂಡ್ ಮಾಡಿದ ಸರ್ಕಾರ ಧೋರಣೆ ಖಂಡನೀಯ. ನಗರ ಡಿವೈಎಸ್ಪಿ ನಂದಾರೆಡ್ಡಿ ಕುಮ್ಮಕ್ಕಿನಿಂದ ಈ ಘಟನೆ ಜರುಗಿದೆ ಎಂದು ಬಿಜೆಪಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಆರೋಪಿಸಿದ್ದಾರೆ.ಬಳ್ಳಾರಿಯಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿದ ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ, ಗಾಂಜಾ ಪೆಡ್ಲರ್ ಜೊತೆಗೆ ಕಾಂಗ್ರೆಸ್ ಶಾಸಕ ಭರತ್ ರೆಡ್ಡಿ ಇದ್ದಾರೆ ಎಂದು ಗಂಭೀರ ಆರೋಪ ಮಾಡಿದರು. 

ಈ ವೇಳೆ ಗಾಂಜಾ ಪೆಡ್ಲರ್ ಜೊತೆ ಭರತ್ ರೆಡ್ಡಿ ಇರುವ ವಿಡಿಯೋ ಪ್ರದರ್ಶಿಸಿದ ಜನಾರ್ದನ ರೆಡ್ಡಿ, ಭರತ್ ರೆಡ್ಡಿ ಗಾಂಜಾ ಪೆಡ್ಲರ್ ದೌಲಾ ಎಂಬಾತನ ಜೊತೆ ಇದ್ದ ಎಂದು ಆರೋಪಿಸಿದರು. ವಿಡಿಯೋದಲ್ಲಿ, ಶಾಸಕ ನಾರಾ ಭರತ್ ರೆಡ್ಡಿ ಗಾಂಜಾ ಪೆಡ್ಲರ್ ದೌಲಾ ಜೊತೆಗೆ ಕಾಲ ಮೇಲೆ ಕಾಲು ಹಾಕಿಕೊಂಡು ಕುಳಿತಿರುವ ದೃಶ್ಯಗಳು ಇವೆ. ಇದನ್ನು ಆಧಾರವಾಗಿಟ್ಟುಕೊಂಡು ಜನಾರ್ದನ ರೆಡ್ಡಿ ಕಾಂಗ್ರೆಸ್ ಶಾಸಕನ ಮೇಲೆ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ದೌಲಾ ಮೇಲೆ 50 ಕೆಜಿ ಗಾಂಜಾ ಪೆಡ್ಲಿಂಗ್ ಸೇರಿದಂತೆ 18 ಪ್ರಕರಣಗಳು ದಾಖಲಾಗಿವೆ ಎಂದು ಅವರು ತಿಳಿಸಿದ್ದಾರೆ.

ಬಳ್ಳಾರಿ ಫೈರಿಂಗ್ ವಿಚಾರದಲ್ಲಿ ಮೃತ ಕಾಂಗ್ರೆಸ್ ಕಾರ್ಯಕರ್ತನಿಗೆ ನ್ಯಾಯ ಸಿಗಬೇಕಾದರೆ ತಪ್ಪಿತಸ್ಥರಾದ ಸತೀಶ್ ರೆಡ್ಡಿ ಮತ್ತು ಅವರ ಅಂಗರಕ್ಷಕರನ್ನು ತಕ್ಷಣ ಬಂಧಿಸಬೇಕು ಎಂದು ಆಗ್ರಹಿಸಿದರು. 

ಬ್ಯಾನರ್ ಗಲಾಟೆ: 

ರೇವಣ್ಣ ನಿಯೋಗ ಬಳ್ಳಾರಿಗೆ ಭೇಟಿ:ಇಲ್ಲಿನ ಜನಾರ್ದನ ರೆಡ್ಡಿ ಮನೆಯ ಮುಂಭಾಗ ಗುರುವಾರ ರಾತ್ರಿ ನಡೆದ ಬ್ಯಾನರ್ ಗಲಾಟೆ ಪ್ರಕರಣದ ಸತ್ಯಾಸತ್ಯತೆಯನ್ನು ಅವಲೋಕಿಸಲು ಕಾಂಗ್ರೆಸ್‌ನ ಹಿರಿಯ ಮುಖಂಡ ಹಾಗೂ ರಾಜ್ಯ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ.ರೇವಣ್ಣ ನೇತೃತ್ವದ ನಿಯೋಗ ಬಳ್ಳಾರಿಗೆ ಶನಿವಾರ ಭೇಟಿ ನೀಡಿತು.

ಇಲ್ಲಿನ ಸರ್ಕಾರಿ ಅತಿಥಿ ಗೃಹದಲ್ಲಿ ವಿವಿಧ ಸಮುದಾಯಗಳ ಮುಖಂಡರ ಜೊತೆ ಚರ್ಚೆ ನಡೆಸಿ, ಬ್ಯಾನರ್ ಗಲಾಟೆ ಕುರಿತು ಮಾಹಿತಿ ಸಂಗ್ರಹಿಸಿತು. ನಿಯೋಗದ ಸದಸ್ಯರು ನಗರ ಶಾಸಕ ನಾರಾ ಭರತ್ ರೆಡ್ಡಿ, ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಖಾನ್ ಹಾಗೂ ಕಂಪ್ಲಿ ಶಾಸಕ ಗಣೇಶ್ ಜತೆ ಪ್ರತ್ಯೇಕವಾಗಿ ಚರ್ಚೆ ನಡೆಸಿದರು. ಇದೇ ವೇಳೆ ಜಿಲ್ಲಾಧಿಕಾರಿ, ಸಹಾಯಕ ಆಯುಕ್ತ, ತಹಸೀಲ್ದಾರ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ನಿಯೋಗ ಚರ್ಚೆ ನಡೆಸಿ, ಮಾಹಿತಿ ಪಡೆದುಕೊಂಡಿತು.

ಬೆಳಗ್ಗೆ 11 ಗಂಟೆಗೆ ಶುರುವಾದ ಸಭೆ ಸಂಜೆ 4 ಗಂಟೆವರೆಗೆ ನಡೆಯಿತು. ಬಳಿಕ ಘಟನಾ ಸ್ಥಳಕ್ಕೆ ತೆರಳಿದ ನಿಯೋಗ, ಸ್ಥಳದ ವೀಕ್ಷಣೆ ನಡೆಸಿತು. ಅಲ್ಲಿಂದ ಹುಸೇನ್ ನಗರಕ್ಕೆ ತೆರಳಿದ ನಿಯೋಗದ ಸದಸ್ಯರು ಬ್ಯಾನರ್ ಗಲಾಟೆಯಲ್ಲಿ ಮೃತಪಟ್ಟ ರಾಜಶೇಖರ ರೆಡ್ಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು. 

ಈ ವೇಳೆ, ಸುದ್ದಿಗಾರರ ಜೊತೆ ಮಾತನಾಡಿದ ಎಚ್.ಎಂ.ರೇವಣ್ಣ, ಬ್ಯಾನರ್ ಗಲಭೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೂಚನೆ ಹಿನ್ನೆಲೆಯಲ್ಲಿ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದೇವೆ. ಚುನಾಯಿತ ಪ್ರತಿನಿಧಿಗಳು, ಪ್ರತ್ಯಕ್ಷದರ್ಶಿಗಳು ಹಾಗೂ ಅಧಿಕಾರಿಗಳಿಂದ ಘಟನೆ ಕುರಿತು ಮಾಹಿತಿ ಸಂಗ್ರಹಿಸಿದ್ದೇವೆ. ಈ ಸಂಬಂಧದ ವರದಿಯನ್ನು ಮೂರು ದಿನದೊಳಗೆ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದರು. 

ಬಳ್ಳಾರಿ ಎಸ್ಪಿ ಆತ್ಮ*ತ್ಯೆ ಯತ್ನ ಸುದ್ದಿಯೇ ಸುಳ್ಳು: 

ಪರಂ ಸ್ಪಷ್ಟನೆಬಳ್ಳಾರಿ ಎಸ್ಪಿ ಪವನ್ ನಜ್ಜೂರ್ ಆತ್ಮ*ತ್ಯೆಗೆ ಯತ್ನಿಸಿದ್ದಾರೆ ಎಂಬ ಸುದ್ದಿಯೇ ಸುಳ್ಳಾಗಿದ್ದು ಅವರು ಸಂಪೂರ್ಣವಾಗಿ ಆರೋಗ್ಯದಿಂದ ಇದ್ದಾರೆ ಎಂದು ಗೃಹ ಸಚಿವ ಡಾ। ಜಿ.ಪರಮೇಶ್ವರ್‌ ಹೇಳಿದರು.ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನನಗೆ ಗೊತ್ತಿರುವ ಹಾಗೆ ಅವರು ಆರಾಮಾಗಿದ್ದಾರೆ. ನಾನು ಅವರ ಜೊತೆ ಮಾತನಾಡಿಲ್ಲ. ಆದರೆ ಹಿರಿಯ ಅಧಿಕಾರಿಗಳ ಜೊತೆ ಮಾತನಾಡಿದ್ದೇನೆ. ಅವರ ಪ್ರಕಾರ ಅಮಾನತು ಆಗಿರುವುದಕ್ಕೆ ಸಹಜವಾಗಿ ಸ್ವಲ್ಪ ಮಾನಸಿಕವಾಗಿ ಕುಗ್ಗಿದ್ದಾರಷ್ಟೇ ಎಂಬ ಮಾಹಿತಿಯಿದೆ. ಇದು ಸಹಜವಾಗಿ ನಡೆಯುವಂತದ್ದು. ಅದರಲ್ಲಿ ವಿಶೇಷ ಏನು ಇಲ್ಲ ಎಂದರು. 

ಆತ್ಮ*ತ್ಯೆ ಯತ್ನ ವದಂತಿ:

ಈ ಮಧ್ಯೆ ಬಳ್ಳಾರಿ ಪೊಲೀಸ್ ವರಿಷ್ಠಾಧಿಕಾರಿ ಪವನ್ ನಜ್ಜೂರ್ ಅವರು ಅಮಾನತುಗೊಂಡ ಹಿನ್ನೆಲೆಯಲ್ಲಿ ಶಿರಾ ತಾಲೂಕು ಬರಗೂರಿನ ಸ್ನೇಹಿತರ ಫಾರಂ ಹೌಸ್‌ನಲ್ಲಿ ಮಾತ್ರೆ ಸೇವಿಸಿ ಆತ್ಮ*ತ್ಯೆಗೆ ಯತ್ನಿಸಿದ್ದರು ಎಂಬ ವದಂತಿ ಹಬ್ಬಿತ್ತು. ಆದರೆ ಪೊಲೀಸರು ಈ ವಿಷಯವನ್ನು ದೃಢಪಡಿಸಿಲ್ಲ. ಪವನ್ ನಜ್ಜೂರ್ ಅವರ ತಂದೆ ತುಮಕೂರಿನಲ್ಲಿ ಆಹಾರ ಇಲಾಖೆಯಲ್ಲಿ ಜಂಟಿ ನಿರ್ದೇಶಕರಾಗಿ ಕೆಲಸ ನಿರ್ವಹಿಸಿ ನಿವೃತ್ತಿಯಾಗಿದ್ದರು. ಹೀಗಾಗಿ ಅವರ ಕುಟುಂಬ ತುಮಕೂರಿನಲ್ಲಿ ನೆಲೆಸಿತ್ತು.