ರಾಜೂರು ಗ್ರಾಮಸ್ಥರು ಗುರು ಮಹಾಂತೇಶ ಮಠದಿಂದ ಮಣ್ಣಿನ ಗುರ್ಜಿ ಮೂರ್ತಿಯನ್ನು ಹೊತ್ತು ಗ್ರಾಮದ ಮನೆ, ಮನೆಗೆ ತೆರಳಿ ಗುರ್ಜಿ ಮೂರ್ತಿಗೆ ನೀರು ಹಾಕಿದ ಜನರ ಬಳಿ ಜೋಳ, ಕಡಲೆ ಸೇರಿ ಇತರ ದವಸ ಧಾನ್ಯಗಳನ್ನು ಜೋಳಿಗೆ ಸಂಗ್ರಹಿಸಿದರು.

ಗಜೇಂದ್ರಗಡ: ತಾಲೂಕಿನಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮುಂಗಾರು ಮಳೆಯಾಗದ ಹಿನ್ನೆಲೆ ಸಮೀಪದ ರಾಜೂರು ಗ್ರಾಮದಲ್ಲಿ ಶುಕ್ರವಾರ ಜನರು ಗುರ್ಜಿ ಪೂಜೆ ನೆರವೇರಿಸಿದರು.

ತಾಲೂನ ರಾಜೂರು, ಕಾಲಕಾಲೇಶ್ವರ, ದಿಂಡೂರು, ಭೈರಾಪುರ, ರಾಮಾಪುರ, ಕೊಡಗಾನೂರ, ಗೋಗೇರಿ ಸೇರಿ ಅನೇಕ ಗ್ರಾಮಗಳಲ್ಲಿ ಮುಂಗಾರು ಮಳೆಯನ್ನು ನಂಬಿ ಬಿತ್ತನೆ ಮಾಡಿರುವ ರೈತರು ಮಳೆಯಾಗದ ಹಿನ್ನೆಲೆ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಹೀಗಾಗಿ ಸಂಕಷ್ಟದಲ್ಲಿದ್ದಾಗ ದೇವರ ಆರಾಧನೆ ಮಾಡಿದರೆ ಭಗವಂತ ಕಷ್ಟಗಳನ್ನು ದೂರ ಮಾಡುತ್ತಾನೆ ಎನ್ನುವ ಆಶಾಭಾವನೆಯಲ್ಲಿ ತಾಲೂಕಿನ ಅನೇಕ ಗ್ರಾಮಗಳಲ್ಲಿ ಈಗಾಗಲೇ ದೇವರಿಗೆ ಪೂಜೆ ಮಾಡಿಸಿ ಮಳೆಗಾಗಿ ಬೇಡಿಕೊಳ್ಳುತ್ತಿದ್ದಾರೆ.

ರಾಜೂರು ಗ್ರಾಮಸ್ಥರು ಗುರು ಮಹಾಂತೇಶ ಮಠದಿಂದ ಮಣ್ಣಿನ ಗುರ್ಜಿ ಮೂರ್ತಿಯನ್ನು ಹೊತ್ತು ಗ್ರಾಮದ ಮನೆ, ಮನೆಗೆ ತೆರಳಿ ಗುರ್ಜಿ ಮೂರ್ತಿಗೆ ನೀರು ಹಾಕಿದ ಜನರ ಬಳಿ ಜೋಳ, ಕಡಲೆ ಸೇರಿ ಇತರ ದವಸ ಧಾನ್ಯಗಳನ್ನು ಜೋಳಿಗೆ ಸಂಗ್ರಹಿಸಿದರು.

ಈ ವೇಳೆ ಶರಣಪ್ಪ ಜಿಗಳೂರ, ಮಹೇಶ ಮಕ್ತಾಲಿ, ದೇವಪ್ಪ ವ್ಯಾಪಾರಿ, ಶರಣಪ್ಪ ರಾಠೋಡ, ಚಂದ್ರಗೌಡ ಪಾಟೀಲ, ಸುರೇಶಗೌಡ ಪಾಟೀಲ, ಬಸಪ್ಪ ಗುಳಗುಳಿ, ವೀರಣ್ಣ ಕೋರಿ, ಶರಣಪ್ಪ ಹಾದಿಮನಿ, ಬಸನಗೌಡ ಪಾಟೀಲ ಇತರರು ಇದ್ದರು.ಎಣ್ಣೆಕಾಳು ಸಂಸ್ಕರಣಾ ಘಟಕಗಳ ಸ್ಥಾಪನೆಗೆ ಅರ್ಜಿ

ಗದಗ: ಎಣ್ಣೆಕಾಳು ಬೆಳೆಗಳಲ್ಲಿ ಮೌಲ್ಯವರ್ಧನೆ ಉತ್ತೇಜಿಸಲು ಹಾಗೂ ರೈತರ ಆದಾಯವನ್ನು ಹೆಚ್ಚಿಸುವ ಉದ್ದೇಶದಿಂದ ಜಿಲ್ಲೆಯ ಅರ್ಹ ಫಲಾನುಭವಿಗಳಿಂದ 10 ಟನ್ ಸಾಮರ್ಥ್ಯದ ಎಣ್ಣೆಕಾಳು ಸಂಸ್ಕರಣಾ ಘಟಕಗಳ ಸ್ಥಾಪನೆಗೆ ಅರ್ಜಿ ಆಹ್ವಾನಿಸಲಾಗಿದೆ.ಅರ್ಜಿ ಸಲ್ಲಿಸಲು ಜು. 31 ಕೊನೆಯ ದಿನವಾಗಿದೆ. ಆಸಕ್ತ ರೈತರು, ರೈತ ಉತ್ಪಾದಕ ಸಂಸ್ಥೆಗಳು, ಪ್ರಾಥಮಿಕ ಕೃಷಿ ಷತ್ತಿನ ಸಂಘಗಳು, ನೋಂದಾಯಿತ ಸಂಸ್ಥೆಗಳು ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ. ಕೇಂದ್ರ ಮತ್ತು ರಾಜ್ಯದ ಪಾಲಿನ ಶೇ. 60:40 ಅನುಪಾತದಲ್ಲಿ, ಯೋಜನಾ ವೆಚ್ಚದ ಶೇ. 33(ಗರಿಷ್ಠ ₹9.90 ಲಕ್ಷ) ರಷ್ಟು ಸಹಾಯಧನ ನೀಡಲು ಅವಕಾಶವಿದೆ. ಯೋಜನೆಯಡಿ ಸ್ವಂತ ಬಂಡವಾಳ ಹೂಡುವ ಸಾಮರ್ಥ್ಯವಿರಬೇಕು. ಹೆಚ್ಚಿನ ಮಾಹಿತಿಗಾಗಿ ಸಮೀಪದ ರೈತ ಸಂಪರ್ಕ ಕೇಂದ್ರ ಹಾಗೂ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಸಂಪರ್ಕಿಸಬಹುದು ಎಂದು ಜಂಟಿ ಕೃಷಿ ನಿರ್ದೇಶಕಿ ಚೇತನಾ ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.