ಸಾರಾಂಶ
ಕನ್ನಡಪ್ರಭ ವಾರ್ತೆ ಔರಾದ್
ಪೂರ್ವ ಪ್ರಾಥಮಿಕ ಶಾಲೆಗೆ ಅನುಮತಿ ಪಡೆದು 6 ನೇ ತರಗತಿ ವರೆಗೆ ವಿಧ್ಯಾರ್ಥಿಗಳಿಗೆ ಅನಧಿಕೃತವಾಗಿ ಪಾಠ ಮಾಡ್ತಿದ್ದ ಗುರುನಾನಕ ಪಬ್ಲಿಕ್ ಶಾಲೆಯು ಕೊನೆಗೂ ಅನುಮತಿ ಪಡೆಯುವಲ್ಲಿ ಸಫಲರಾಗಿದ್ದು, ಶಿಕ್ಷಣ ಇಲಾಖೆಯು ಇದನ್ನು ಅಧಿಕೃತ ಶಾಲೆಯಾಗಿಸಿ ಆದೇಶ ನೀಡುವ ಮೂಲಕ ಪೋಷಕರಲ್ಲಿ ಉಂಟಾಗಿದ್ದ ಆತಂಕ ದೂರ ಮಾಡಿದ್ದಾರೆ.ಪಟ್ಟಣದ ಗಣೇಶಪೂರ್ ರಸ್ತೆಯಲ್ಲಿ ಹೊಸದಾಗಿ ನಿರ್ಮಾಣಗೊಂಡ ಕಟ್ಟಡದಲ್ಲಿ ಗುರುನಾನಕ ಹೆಸರಿನ ಅನಧಿಕೃತ ಶಾಲೆ ನಡೆಯುತ್ತಿರುವ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಾಲೆಯನ್ನು ಮುಚ್ಚುವಂತೆ ಶೋಕಾಸ್ ನೋಟಿಸ್ ಜಾರಿ ಮಾಡಿದ್ದರು. ಇದರ ಬೆನ್ನಲ್ಲಿಯೇ ಒಂದೆರಡು ದಿನ ಮಕ್ಕಳನ್ನು ಸಂಸ್ಥೆಯವರು ಜನವಾಡ ಶಾಲೆಯತ್ತ ಸಾಗಿಸಿದ್ದರು. ಮಂಗಳವಾರ ಕನ್ನಡ ಸೇನೆ ಅನಧಿಕೃತ ಶಾಲೆಯ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಮನವಿ ಮಾಡಿತ್ತು. ಈ ನಡುವೆ ಬುಧವಾರ ಶಾಲೆಯ ಕಟ್ಟಡದ ಉದ್ಘಾಟನೆ ಕೂಡ ಮಾಡಿದ್ದ ಆಡಳಿತ ಮಂಡಳಿ ಅನುಮತಿ ಇಲ್ಲದೆ ಶಾಲೆಯ ಚಟುವಟಿಗೆ ಮುಂದುವರೆಸಿದ್ದರಿಂದ ಬಿಇಒ ರಂಗೇಶ್ ಬಿ.ಜಿ ಅವರು ಅನುಮತಿ ತರುವಂತೆ ಒಂದು ವಾರದ ಗಡುವು ನೀಡಿ ವಾಪಸ್ಸಾಗಿದ್ದರು.
ಈ ಎಲ್ಲ ಬೆಳವಣಿಗೆಗಳ ಕುರಿತು ‘ಕನ್ನಡಪ್ರಭ’ ಸರಣಿ ವರದಿ ಪ್ರಕಟಿಸಿ ಪೋಷಕರ ಆತಂಕ, ಶಿಕ್ಷಣ ಇಲಾಖೆಯ ನಿಯಮಾವಳಿಗಳನ್ನು ಮೀರುತ್ತಿರುವುದನ್ನು ಎತ್ತಿ ತೋರಿಸುತ್ತ ಸಂಸ್ಥೆಯ ಕಣ್ತೆರೆಸುವಲ್ಲಿ ಮುಂದಾಗಿತ್ತು. ಇದರ ಬೆನ್ನಲ್ಲೆ ಶಾಲಾ ಶಿಕ್ಷಣ ಇಲಾಖೆ ಶುಕ್ರವಾರ ಷರತ್ತು ಬದ್ದ ಅನುಮತಿ ನೀಡಿರುವ ಆದೇಶ ಪ್ರತಿ ಕನ್ನಡಪ್ರಭಕ್ಕೆ ಲಭ್ಯವಾಗಿದ್ದು, ಈ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿ ಗಂಗೇಶ್ ಅವರೂ ಖಚಿತಪಡಿಸಿದ್ದಾರೆ.--ಬಾಕ್ಸ್--1
ಮಕ್ಕಳ ಭವಿಷ್ಯ ಈಗ ಭದ್ರಪ್ರಸಕ್ತ ಸಾಲಿಗೆ ಅನ್ವಯವಾಗುವಂತೆ 5ನೇ ತರಗತಿವರೆಗೆ ಆಂಗ್ಲ ಮಾಧ್ಯಮದ ಶಾಲೆ ನಡೆಸಲು ಉಪ ನಿರ್ದೇಶಕರು ಶಾಲಾ ಶಿಕ್ಷಣ ಇಲಾಖೆ ಅವರು ಆದೇಶ ಹೊರಡಿಸಿದ್ದು, ಗುರುನಾನಕ ಪಬ್ಲಿಕ್ ಶಾಲೆ ಯಲ್ಲಿ ದಾಖಲಾದ ವಿದ್ಯಾರ್ಥಿಗಳ ಪೋಷಕರು ನಿಟ್ಟುಸಿರು ಬಿಟ್ಟಂತಾಗಿದ್ದು, ಗುಣಮಟ್ಟದ ಶಿಕ್ಷಣದ ನಿರೀಕ್ಷೆಯಲ್ಲಿ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಗುರುನಾನಕ ಶಾಲೆಯ ಹೆಸರಿನಲ್ಲಿಯೇ ದಾಖಲಾತಿ ಮಾಡಿ ದ್ದೇವೆ ಆದ್ರೆ ಶಾಲೆಗೆ ಮಾನ್ಯತೆ ಇಲ್ಲ ಅಂತ ಗೊತ್ತಾದಾಗಿನಿಂದ ನಮಗೆ ಬಹಳ ಚಿಂತೆಯಾಗಿತ್ತು. ಕೊನೆಗೂ ಶಾಲೆಗೆ ಮಾನ್ಯತೆ ಸಿಕ್ಕಿದೆ ನಮ್ಮ ಮಕ್ಕಳ ಭವಿಷ್ಯ ಈಗ ಭದ್ರವಾಗಿದೆ ಎಂದು ಹೆಸರು ಹೆಳಲಿಚ್ಚಿಸದ ಫೋಷಕರು ‘ಕನ್ನಡಪ್ರಭ’ದ ಹರ್ಷ ವ್ಯಕ್ತಪಡಿಸಿದ್ದಾರೆ.
-----ಬಾಕ್ಸ್-- 2
ಕನ್ನಡ ಸೇನೆ ಶುಭ ಹಾರೈಕೆಮಕ್ಕಳ ಭವಿಷ್ಯ ಅಂಧಕಾರಕ್ಕೆ ನೂಕುವ ಯಾವ ಸಂಸ್ಥೆಯ ಬೇಜವಾಬ್ದಾರಿತನ ಸಹಿಸೋದಿಲ್ಲ. ನಮ್ಮ ಬೇಡಿಕೆಯಂತೆ ಮಾನ್ಯತೆ ಇಲ್ಲದೆ ಇರುವುದು ಶಾಲೆಯ ವಿರುದ್ಧವಾಗಿತ್ತು. ಗುರುನಾನಕ ಶಾಲೆಗೆ ಈಗ ಅನುಮತಿ ಸಿಕ್ಕಿರುವುದು ಸಂತೋಷ. ಈ ಶಾಲೆಯೂ ನಿಯಮಾನುಸಾರ ನಮ್ಮ ಮಕ್ಕಳ ಶೈಕ್ಷಣಿಕ ಗುಣಮಟ್ಟ ಸುಧಾರಣೆ ಮಾಡುವಲ್ಲಿ ಯಶಸ್ಸು ಕಾಣಲಿ ಅಂತ ಶುಭ ಹಾರೈಸುತ್ತೆನೆ ಎಂದು ಕನ್ನಡ ಸೇನೆ ತಾಲೂಕು ಅಧ್ಯಕ್ಷ ಶಿವಶಂಕರ ನಿಸ್ಪತೆ ಹೇಳಿದ್ದಾರೆ.
---ಕೋಟ್: 1
ಅನಧಿಕೃತವಾಗಿ ಮೂರು ವರ್ಷಗಳಿಂದ ನಡೆಯುತ್ತಿದ್ದ ಜಿಲ್ಲೆಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯ ಶಾಲೆಯ ಕುರಿತು ‘ಕನ್ನಡಪ್ರಭ’ ಸರಣಿ ವರದಿಗಳು ಇಲಾಖೆಯ ಗಮನಕ್ಕೆ ತಂದಿರುವ ಹಿನ್ನೆಲೆಯಲ್ಲಿ ಅನುಮತಿ ನೀಡಿರುವುದು ನಿಜಕ್ಕೂ ಶ್ಲಾಘನೀಯ.- ಅನೀಲ ಹೇಡೆ, ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ---ಕೋಟ್: 2ಶಾಲಾ ಶಿಕ್ಷಣ ಇಲಾಖೆಯು ಗುರುನಾನಕ ಪಬ್ಲಿಕ್ ಶಾಲೆಗೆ ಅನುಮತಿ ನೀಡಿದೆ ಇದರಿಂದ ಕಳೆದ ಹಲವು ದಿನಗಳಿಂದ ಅನಧಿಕೃತವಾಗಿದ್ದ ಶಾಲೆಯ ಪೋಷಕರು ನಿರಾಳವಾದಂತಾಗಿದೆ.
- ರಂಗೇಶ ಬಿ.ಜಿ., ಕ್ಷೇತ್ರ ಶಿಕ್ಷಣಾಧಿಕಾರಿ