ಬದುಕಿನಲ್ಲಿ ನೆಮ್ಮದಿಗೆ ಗುರುಗಳ ಅನುಗ್ರಹ ಅಗತ್ಯ: ಮಂಕಾಳ್ ಎಸ್ ವೈದ್ಯ

| Published : Sep 04 2025, 01:01 AM IST

ಬದುಕಿನಲ್ಲಿ ನೆಮ್ಮದಿಗೆ ಗುರುಗಳ ಅನುಗ್ರಹ ಅಗತ್ಯ: ಮಂಕಾಳ್ ಎಸ್ ವೈದ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ಯಾಡಿ ಶ್ರೀ ರಾಮ ಕ್ಷೇತ್ರ ಮಹಾಸಂಸ್ಥಾನದ ಜಗದ್ಗುರು ಪೀಠದ ಪೀಠಾಧೀಶರಾದ ಮಹಾಮಂಡಲೇಶ್ವರ 1008 ಶ್ರೀ ಸ್ವಾಮಿ ಸದ್ಗುರು ಬ್ರಹ್ಮಾನಂದ ಸರಸ್ವತಿ ಮಹಾರಾಜರವರ ಪಟ್ಟಾಭಿಷೇಕ 17ನೇ ವರ್ಧಂತ್ಯುತ್ಸವ ಸಮಾರಂಭ ನಡೆಯಿತು.

ಬ್ರಹ್ಮಾನಂದ ಸರಸ್ವತಿ ಮಹಾರಾಜರವರ ಪಟ್ಟಾಭಿಷೇಕ 17ನೇ ವರ್ಧಂತ್ಯುತ್ಸವ ಸಮಾರಂಭ

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ಪ್ರತಿಯೊಬ್ಬರ ಬದುಕಿನಲ್ಲಿ ನೆಮ್ಮದಿ ಸಿಗಬೇಕಾದರೆ ಗುರುಗಳ ಅನುಗ್ರಹ ಅಗತ್ಯ. ಕನ್ಯಾಡಿ ಶ್ರೀಗಳು ಸಮಸ್ತ ಭಕ್ತರ ನೆಮ್ಮದಿಯನ್ನು ಬಯಸುವುದಲ್ಲದೆ ದೇಶದುದ್ದಕ್ಕು ಶಾಖಾ ಮಠಗಳನ್ನು ಪ್ರಾರಂಭಿಸಿ ಅಲ್ಲಿ ನಿತ್ಯ ಅನ್ನದಾಸೋಹ ಮಾಡಬೇಕು. ಮಠಗಳ ಮೂಲಕ ಭಕ್ತರು ಪುಣ್ಯಕ್ಷೇತ್ರಗಳನ್ಬು ಭೇಟಿ ಮಾಡಬೇಕು ಎನ್ನುವ ಸಂಕಲ್ಪ ಮಾಡಿದ್ದು ಅದಕ್ಕಾಗಿ ಶಾಖಾಮಠಗಳ ನಿರ್ಮಾಣದಲ್ಲಿ ಭಕ್ತರು ಕೈಜೋಡಿಸಬೇಕು ಎಂದು ಬಂದರು ಮತ್ತು ಮೀನುಗಾರಿಕಾ ಸಚಿವ ಮಂಕಾಳ್ ಎಸ್ ವೈದ್ಯ ಹೇಳಿದರು.

ಅವರು ಬುಧವಾರ ಕನ್ಯಾಡಿ ಶ್ರೀ ರಾಮ ಕ್ಷೇತ್ರ ಮಹಾಸಂಸ್ಥಾನದ ಜಗದ್ಗುರು ಪೀಠದ ಪೀಠಾಧೀಶರಾದ ಮಹಾಮಂಡಲೇಶ್ವರ 1008 ಶ್ರೀ ಸ್ವಾಮಿ ಸದ್ಗುರು ಬ್ರಹ್ಮಾನಂದ ಸರಸ್ವತಿ ಮಹಾರಾಜರವರ ಪಟ್ಟಾಭಿಷೇಕ 17ನೇ ವರ್ಧಂತ್ಯುತ್ಸವ ಸಮಾರಂಭದಲ್ಲಿ ಮಾತನಾಡಿದರು.

ಈಗಾಗಲೆ ಅಯೋಧ್ಯೆಯಲ್ಲಿ ಮಠ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿದ್ದು ಕೆಲವೇ ದಿನಗಳಲ್ಲಿ ನಿರ್ಮಾಣದ ಕೆಲಸ ಪ್ರಾರಂಭವಾಗುತ್ತದೆ. ಮುಂದೆ ತಿರುಪತಿ, ದೆಹಲಿ, ಬೆಂಗಳೂರು ಕಡೆಗಳಲ್ಲಿ ಶಾಖಾಮಠದ ನಿರ್ಮಾಣಕ್ಕೆ ಸ್ವಾಮಿಗಳು ಸಂಕಲ್ಪ ಮಾಡಿದ್ದು ಇದು ಕೂಡ ದೇವರ ಅನುಗ್ರಹದಿಂದ ನಿರ್ಮಾಣವಾಗಲಿದ್ದು ಎಲ್ಲರು ಕೈಜೋಡಿಸಬೇಕು ಎಂದರು.

ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಮಾತನಾಡಿ ಸನಾತನ ಪರಂಪರೆಯಲ್ಲಿ ಗುರುಗಳಿಗೆ ಪ್ರಥಮ ಸ್ಥಾನವಿದ್ದು ಪ್ರತಿಯೊಬ್ಬರ ಬದುಕಿನಲ್ಲಿ ಬೆಳಕನ್ನು ಕರುಣಿಸುವವರು ಗುರುಗಳು. ಕನ್ಯಾಡಿ ಶ್ರಿಗಳು ನಮ್ಮೆಲ್ಲರ ಪಾಲಿಗೆ ಬೆಳಕು ನೀಡುವ ಗುರುಗಳಾಗಿದ್ದಾರೆ ಎಂದರು.

ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಮಾತನಾಡಿ ಕನ್ಯಾಡಿ ಶ್ರಿಗಳ ಸೇವಾಕಾರ್ಯ ಇಡೀ ದೇಶದಾದ್ಯಂತ ನಡೆಯುತ್ತಿದ್ದು ಬೇರೆ ಬೇರೆ ಕಡೆಗಳಲ್ಲಿ ಚಾತುರ್ಮ್ಯಾಸ್ಯ ವ್ರತಾಚರಣೆ ಮೂಲಕ ಭಕ್ತರಿಗೆ ಅನುಗ್ರಹಿಸುತ್ತಾರೆ. ಮುಂದಿನ ವರ್ಷ ಉಡುಪಿಯಲ್ಲಿ ಚಾತುರ್ಮ್ಯಾಸ್ಯ ಕಾರ್ಯಕ್ರಮ ಮಾಡಲು ಗುರುಗಳು ಒಪ್ಪಿಗೆ ನೀಡಬೇಕು ಎಂದರು.

ಕಂಕನಾಡಿ ಗರೋಡಿ ಅಧ್ಯಕ್ಷ, ಶ್ರಿ ಗುರುದೇವ ಮಠದ ಟ್ರಸ್ಟಿ ಚಿತ್ತರಂಜನ್ ಗರೋಡಿ ಅದ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಕಿಯೋನಿಕ್ಸ್ ಮಾಜಿ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಸೂರಜ್ ಸೋನಿ, ಶ್ರೀ ರಾಮ ಕ್ಷೇತ್ರ ಸಮಿತಿ ಸಂಚಾಲಕ ಜಯಂತ ಕೋಟ್ಯಾನ್, ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಜಯವಿಕ್ರಮ ಕಲ್ಲಾಪು, ಶ್ರಿ ಗುರುದೇವ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಭಗೀರಥ ಜಿ. ವಿಶೇಷಾಧಿಕಾರಿ ಮೋನಪ್ಪ ಪೂಜಾರಿ, ಕುಮುಟಾ ಶ್ರೀ ರಾಮ ಕ್ಷೇತ್ರದ ಅಧ್ಯಕ್ಷ ಹೆಚ್. ಆರ್. ನಾಯ್ಕ್, ಕುಮುಟಾ ನಾಮಧಾರಿ ಆರ್ಯ ಈಡಿಗ ಸಂಘದ ಅಧ್ಯಕ್ಷ ಮಂಜುನಾಥ್ ನಾಯ್ಕ್, ಹೊನ್ನಾವರ ಶ್ರೀ ರಾಮ ಕ್ಷೇತ್ರ ಸಮಿತಿ ಅಧ್ಯಕ್ಷ ವಾಮನ ನಾಯ್ಕ್, ಹೊನ್ನಾವರ ನಾಮಧಾರಿ ಸಂಘದ ಅಧ್ಯಕ್ಷ ಟಿ. ಟಿ. ನಾಯ್ಕ್, ಶಿರಾಲಿ ಹನುಮಂತ ದೇವಸ್ಥಾನದ ಅಧ್ಯಕ್ಷ ಆರ್. ಕೆ. ನಾಯ್ಕ್, ಶಿರಾಲಿ ದೇವಸ್ಥಾನದ ಮೊಕ್ತೇಸರ ಸುಬ್ರಾಯ ನಾಯ್ಕ್, ಭಟ್ಕಳ ನಿಚ್ಚಲಮಕ್ಕಿ ವೆಂಕಟ್ರಮಣ ದೇವಸ್ಥಾನದ ಅಧ್ಯಕ್ಷ ಅರುಣಾ ನಾಯ್ಕ್, ಭಟ್ಕಳ ಶ್ರೀ ರಾಮ ಕ್ಷೇತ್ರ ಸಮಿತಿ ಅಧ್ಯಕ್ಷ ಶ್ರೀಧರ ನಾಯ್ಕ್, ಬೆಳ್ತಂಗಡಿ ಶ್ರೀ ರಾಮ ಕ್ಷೇತ್ರ ಸೇವಾ ಸಮಿತಿ ಅಧ್ಯಕ್ಷ ಸದಾನಂದ ಉಂಗಿಲ ಬೈಲು, ಬೆಳ್ತಂಗಡಿ ಬಿಲ್ಲವ ಮಹಿಳಾ ವೇದಿಕೆಯ ಅಧ್ಯಕ್ಷೆ ಸುಮತಿ ಪ್ರಮೋದ್, ಬೆಳ್ತಂಗಡಿ ಯುವ ಬಿಲ್ಲವ ವೇದಿಕೆಯ ಅಧ್ಯಕ್ಷ ಎಂ. ಕೆ. ಪ್ರಸಾದ್, ಬೆಳ್ತಂಗಡಿ ಯುವವಾಹಿನಿ ಅಧ್ಯಕ್ಷ ಗುರುರಾಜ ಗುರಿಪಳ್ಳ, ಚಿಕ್ಕಮಗಳೂರು ಶ್ರೀ ರಾಮ ಕ್ಷೇತ್ರ ಸೇವಾ ಸಮಿತಿ ಸಂಚಾಲಕ ಅಶೋಕ ಸಾಲಿಯಾನ್, ಬೆಳ್ತಂಗಡಿ ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘದ ಮಾಜಿ ಅಧ್ಯಕ್ಷ ಪಿ. ಕೆ. ರಾಜು ಪೂಜಾರಿ, ಬೆಂಗಳೂರು ಶ್ರೀ ರಾಮ ಕ್ಷೇತ್ರ ಸೇವೆ ಸಮಿತಿ ಅಧ್ಯಕ್ಷ ಆಟೋ ಗಂಗಾಧರ್, ಉಡುಪಿ ಬಾರ್ಕು ರು ಆತ್ಮಾ ನಂದ ಐ ಟಿ ಐ ಅಧ್ಯಕ್ಷ ಓಬು ಪೂಜಾರಿ, ಶಿವಮೊಗ್ಗ ಶ್ರೀ ರಾಮ ಕ್ಷೇತ್ರ ಸೇವಾ ಸಮಿತಿ ಅಧ್ಯಕ್ಷ ಹರೀಶ್, ಮಂಗಳ ನಾಯ್ಕ್ ಸಿರ್ಸಿ, ಈಶ್ವರ ನಾಯ್ಕ್ ಮಂಕಿ, ತಿಮ್ಮಪ್ಪ ಗೌಡ ಬೆಳಾಲು, ಧರ್ಮಸ್ಥಳ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಶ್ರೀನಿವಾಸ ರಾವ್, ಬೆಳ್ತಂಗಡಿ ಗುರುನಾಯಯಣ ಸ್ವಾಮಿ ಸೇವಾ ಸಂಘದ ಉಪಾಧ್ಯಕ್ಷ ಸುಂದರ ಪೂಜಾರಿ, ಪ್ರಧಾನ ಕಾರ್ಯದರ್ಶಿ ನಿತೀಶ್ ಹೆಚ್. ವಿವಿಧ ಶ್ರೀ ರಾಮ ಕ್ಷೇತ್ರ ಸೇವಾ ಸಮಿತಿ ಪದಾಧಿಕಾರಿಗಳು, ಸದಸ್ಯರು, ಸ್ವಾಮೀಜಿಯವರ ಶಿಷ್ಯ ವೃಂದದವರು ಉಪಸ್ಥಿತರಿದ್ದರು.

ಉಪನ್ಯಾಸಕ ಕೇಶವ ಗೇರುಕಟ್ಟೆ ಪ್ರಸ್ತಾವನೆ ಗೈದರು. ಟ್ರಷ್ಟಿ ತುಕಾರಾಮ್ ಸಾಲಿಯಾನ್ ಸ್ವಾಗತಿಸಿದರು.

--------------------------

ಸಮಾಜದಲ್ಲಿ ಧಾರ್ಮಿಕ ಪ್ರಜ್ಞೆ ಬೆಳೆಸಬೇಕು , ಸನಾತನ ಸಂಸ್ಕೃತಿಯನ್ನು ಬೆಳೆಸಬೇಕು , ರಾಷ್ಟ್ರೀಯತೆ ಎಂಬುದೇ ನನ್ನ ಉದ್ದೇಶವಾಗಿದೆ. ಪ್ರತಿಯೊಬ್ಬರ ಹೃದಯದಲ್ಲಿ ಶಿವನನ್ನು ಕಾಣಬೇಕಾದರೆ ಮದ , ಮತ್ಸರ , ಅಹಂ ಭಾವವನ್ನು ಬಿಡಬೇಕು. ಮನೆ ಮನೆಗಳಲ್ಲಿ ಸಂಸ್ಕಾರ ಬೆಳೆಯಬೇಕು. ಪ್ರತಿಯೊಬ್ಬ ಪೋಷಕರು ಸಂಸ್ಕಾರವಂತರಾಗಿ ಮಕ್ಕಳಿಗೆ ಸಂಸ್ಕಾರವನ್ನು ಕಲಿಸಬೇಕು.

ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ