ಸಾರಾಂಶ
ಬದುಕಿನಲ್ಲಿ ಯಾವುದೇ ಸಾಧನೆಯ ಹಿಂದೆ ಗುರುಗಳ ಮಾರ್ಗದರ್ಶನ ಜೀವನದುದ್ದಕ್ಕೂ ಅಗತ್ಯ. ಅದರಲ್ಲಿಯೂ ಬದುಕಿನ ಆರಂಭದ ಮೆಟ್ಟಿಲುಗಳನ್ನು ಕಲಿಸುವ ಶಿಕ್ಷಕರನ್ನು ಮೆರೆಯಲು ಅಸಾಧ್ಯವೆಂದು ಬನಹಟ್ಟಿ ಹಿರೇಮಠದ ಶರಣಬಸವ ಶಿವಚಾರ್ಯರು ಹೇಳಿದರು.
ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಬದುಕಿನಲ್ಲಿ ಯಾವುದೇ ಸಾಧನೆಯ ಹಿಂದೆ ಗುರುಗಳ ಮಾರ್ಗದರ್ಶನ ಜೀವನದುದ್ದಕ್ಕೂ ಅಗತ್ಯ. ಅದರಲ್ಲಿಯೂ ಬದುಕಿನ ಆರಂಭದ ಮೆಟ್ಟಿಲುಗಳನ್ನು ಕಲಿಸುವ ಶಿಕ್ಷಕರನ್ನು ಮೆರೆಯಲು ಅಸಾಧ್ಯವೆಂದು ಬನಹಟ್ಟಿ ಹಿರೇಮಠದ ಶರಣಬಸವ ಶಿವಚಾರ್ಯರು ಹೇಳಿದರು.ಬನಹಟ್ಟಿಯ ನೀಲಕಂಠೇಶ್ವರ ಸಮುದಾಯ ಭವನದಲ್ಲಿ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ರಬಕವಿ-ಬನಹಟ್ಟಿ ಸಾಹಿತ್ಯದ ತವರೂರು, ಬ.ಗಿ. ಯಲ್ಲಟ್ಟಿ, ಈಶ್ವರ ಸಣಕಾಲ, ದು.ನಿಂ. ಬೆಳಗಲಿಯವರಂಥ ಬದುಕು ಸಾಗಿಸಿ ಅವಳಿ ನಗರದ ಕೀರ್ತಿ ಹೆಚ್ಚಿಸುವಲ್ಲಿ ಕಾರಣರಾದವರು. ಗುರುವಿನ ಮಾರ್ಗದರ್ಶನದಿಂದಲೇ ಎಲ್ಲವೂ ಸಾಧ್ಯವೆಂದು ಶರಣರು ತಿಳಿಸಿದರು.
ಆರ್.ಟಿ. ನಡುವಿನಮನಿ ಮಾತನಾಡಿ, ಶಿಷ್ಯ ಗುರುವಿನ ಮೀರಿಸುವಷ್ಟು ದೊಡ್ಡವರದಾಗ ಅದರಲ್ಲಿನ ಖುಷಿ ಮತ್ತೆಲ್ಲಿಯೂ ದೊರಕುವದಿಲ್ಲ. ಸಮಾಜದಲ್ಲಿ ಹಾಗೂ ಗುರುವಿಗೆ ಪ್ರಾತಿನಿಧ್ಯ ನೀಡಿದ ಏಕೈಕ ದೇಶ ಭಾರತ. ಅದಕ್ಕಾಗಿ ಗುರು ಪರಂಪರೆ ರಾಷ್ಟ್ರ ಭಾರತವೆಂದರು.ವೇದಿಕೆ ಮೇಲೆ ಬಿ.ಎ. ದೇಶಪಾಂಡೆ, ಬಿ.ಎಸ್. ಬಲತಿ, ಬಿ.ಎಸ್. ರಾಮತೀರ್ಥ, ಬಿ.ಎಸ್. ಮಿಳ್ಳಿ, ಎಂ.ಡಿ. ಪತ್ರಿ, ಕೆ.ಜಿ. ಉಮದಿ, ಆರ್.ಜಿ. ನಾವಿ, ಎಂ.ಆರ್. ವಾವಳ, ರಾಜು ಬಡಿಗೇರ, ಗುರು ಪೂಜಾರಿ, ಕಲ್ಯಾಣಿ ರಾವಳ, ದೀಪಕ ಜವಳಗಿ, ಅನೀಲ ಹುಲ್ಲೂರ, ಬಸವರಾಜ ಕೊಟ್ಟೂರ, ಭೀಮಶಿ ಹಂದಿಗುಂದ, ಮಲ್ಲಪ್ಪ ಗೌಡಪ್ಪನವರ, ದಾನಮ್ಮ ಗೊಬ್ಬಾಣಿ, ಶೈಲಾ ಸುಂಕದ, ರೂಪಶ್ರೀ ಕೋಪರ್ಡೆ, ಶಕುಂತಲಾ ಬಾವಲತ್ತಿ ಸೇರಿದಂತೆ ಇತರರಿದ್ದರು.