ಗುರು ಸಿದ್ದೇಶ್ವರ ಸಂಘಕ್ಕೆ ೬೮.೯೯ ಲಕ್ಷ ಲಾಭ

| Published : Sep 13 2025, 02:06 AM IST

ಸಾರಾಂಶ

ಪ್ರಸಕ್ತ ೨೦೨೪-೨೫ ನೇ ಸಾಲಿನಲ್ಲಿ ಗುರು ಸಿದ್ದೇಶ್ವರ ಪತ್ತಿನ ಸಹಕಾರ ಸಂಘವು ೬೮.೯೯ ಲಕ್ಷ ನಿವ್ವಳ ಲಾಭ ಗಳಿಸಿದೆ

ಕನ್ನಡಪ್ರಭ ವಾರ್ತೆ ಬೀಳಗಿ

ಜನರು ಸಹಕಾರಿ ಸಂಘಗಳ ಮೇಲೆ ವಿಶ್ವಾಸವಿಟ್ಟು ವ್ಯವಹರಿಸಿದರೆ ಸಹಕಾರ ಕ್ಷೇತ್ರದ ಅಭಿವೃದ್ಧಿ ಜೊತೆಗೆ ಸಂಘದಲ್ಲಿ ಪ್ರಾಮಾಣಿಕತೆ ಹೆಚ್ಚಾಗಿ ಸಂಘದ ಬೆಳವಣಿಗೆ ಹೆಚ್ಚಾಗಲಿದೆ ಎಂದು ಗಿರಿಸಾಗರ ಕಲ್ಯಾಣ ಹಿರೇಮಠದ ರುದ್ರಮುನಿ ಶಿವಾಚಾರ್ಯ ಮಹಾಸ್ವಾಮೀಜಿ ತಿಳಿಸಿದರು.

ಇಲ್ಲಿನ ಶ್ರೀ ಕಲ್ಮಠದಲ್ಲಿ ಪಟ್ಟಣದ ಪ್ರತಿಷ್ಠಿತ ಗುರುಸಿದ್ದೇಶ್ವರ ಪತ್ತಿನ ಸಹಕಾರಿ ಸಂಘದ ೨೦ನೇ ವಾರ್ಷಿಕ ಸರ್ವ ಸಾಧಾರಣ ಸಭೆಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಸಂಘಗಳಿಗೆ ಜನರು ಆರ್ಥಿಕ ಸಹಾಯ ಕೇಳುವುದು, ಸಂಘಗಳು ಜನರಿಗೆ ಆರ್ಥಿಕ ಸಹಾಯ ಮಾಡಿ ಸಮಾಜದ ಅಭಿವೃದ್ಧಿಗೆ ದುಡಿಯುವುದೇ ಸಹಕಾರ, ಸಾಲ ಪಡೆದವರು ಸರಿಯಾದ ಸಮಯಕ್ಕೆ ಮರು ಪಾವತಿ ಮಾಡಿದರೆ ಆಗ ಸಂಘಕ್ಕೂ ಮತ್ತು ಸಹಕಾರ ವ್ಯವಸ್ಥೆ ಬೆಳೆಯಲು ಸಾಧ್ಯವೆಂದ ಅವರು, ಹೀಗೆ ಸಂಘ ಇನ್ನೂ ಹೆಚ್ಚಿನ ಸಮಾಜ ಸುಧಾರಣೆ ಕೆಲಸ ಮಾಡಲಿ ಎಂದು ಆಶೀರ್ವಾದಿಸಿದರು.

ಸಂಘದ ನಿರ್ದೇಶಕ ಎಸ್.ಎಚ್.ಯಾಳವಾರಮಠ ಮಾತನಾಡಿ, ಕಳೆದ ೨೦ ವರ್ಷಗಳ ಹಿಂದೆ ಸಂಘ ಸ್ಥಾಪನೆ ಯಾವ ಉದ್ದೇಶದಿಂದ ಆರಂಭವಾಗಿತ್ತು. ಆ ಉದ್ದೇಶದಿಂದಲೇ ಸಾಗುತ್ತಿದೆ, ಸಂಘವು ತಾಲೂಕಿನ ಎಲ್ಲ ಗ್ರಾಮಗಳಲ್ಲಿನ ಸಮಾಜ ಬಾಂಧವರ ಮನೆ-ಮನೆಗೆ ಸಾಗಿ ಸಂಘದ ಸದಸ್ಯತ್ವ ಅಭಿಯಾನ ಆರಂಭ ಮಾಡುವುದರ ಜೊತೆಗೆ ಸಮಾಜದ ಪದವಿವರಿಗಿನ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಅವರನ್ನು ಗೌರವಿಸುವ ಕೆಲಸ ಮಾಡಲಾಗುವುದು ಎಂದರು.₹೬೮.೯೯ ಲಕ್ಷ ನಿವ್ವಳ ಲಾಭ:

ಪ್ರಸಕ್ತ ೨೦೨೪-೨೫ ನೇ ಸಾಲಿನಲ್ಲಿ ಗುರು ಸಿದ್ದೇಶ್ವರ ಪತ್ತಿನ ಸಹಕಾರ ಸಂಘವು ₹೬೮.೯೯ ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷರಾದ ಶ್ರೀಶೈಲ ಯಂಕಂಚಿಮಠ ತಿಳಿಸಿದರು. ಒಟ್ಟು ೩೮೭೬ ಸದಸ್ಯರನ್ನು ಹೊಂದಿದ್ದು, ₹೮೦.೫೦ ಕೋಟಿ ದುಡಿಯುವ ಬಂಡವಾಳ ಹೊಂದಿದೆ. ಸದಸ್ಯರಿಗೆ ಶೇ.೧೫ರಷ್ಟು ಡಿವಿಡೆಂಡ್ ನೀಡುವ ಯೋಜನೆ ಹಾಕಿದ್ದು, ಬರುವ ದಿನಗಳಲ್ಲಿ ಕೆರೂರ, ಲೋಕಾಪುರ, ಕೊಲಾರ ಪಟ್ಟಣದಲ್ಲಿ ಸಂಘದ ನೂತನ ಶಾಖೆ ಆರಂಭಿಸುವ ಯೋಜನೆ ಹಾಕಿಕೊಂಡಿದೆ. ಈಗಾಗಲೇ ಬಾಗಲಕೋಟೆ, ಗಲಗಲಿ ಮತ್ತು ಮುಧೋಳ ಪಟ್ಟಣದಲ್ಲಿ ಸಂಘದ ಶಾಖೆಗಳು ಉತ್ತಮ ಕಾರ್ಯ ಮಾಡುತ್ತಿವೆ ಎಂದರು.

ಸಮಾರಂಭದ ದಿವ್ಯ ಸಾನ್ನಿಧ್ಯವನ್ನು ಶ್ರೀ ಕಲ್ಮಠದ ಗುರುಪಾದ ಶಿವಾಚಾರ್ಯರರು ವಹಿಸಿದ್ದರು. ಬೀಳಗಿ ಪಟ್ಟಣ ಸಹಕಾರಿ ಬ್ಯಾಂಕ್‌ ನಿವೃತ ಪ್ರದಾನ ವ್ಯವಸ್ಥಾಪಕರಾದ ಎಲ್.ಬಿ.ಕುರ್ತಕೋಟಿ ವಿಶೇಷ ಉಪನ್ಯಾಸ ನೀಡಿದರು. ಸಂಘದ ಉಪಾಧ್ಯಕ್ಷ ಕೆಂಪಯ್ಯ ವಿರಕ್ತಮಠ, ನಿರ್ದೇಶಕ ಎಂ.ಪಿ.ಕಾಶಿ, ಐ.ಎಸ್ ಬಂಗಾರಿಮಠ, ಎಸ್.ಐ.ಗೋಠೆ, ರೇವಣಯ್ಯ ನಿಂಗೊಳ್ಳಿ, ಎಸ್.ಎಸ್.ಘಂಟಿಮಠ, ಅಕ್ಷತಾ ವಸ್ತ್ರದ, ನಿರಂಜನ ಹಿರೇಮಠ, ಯು.ಎಂ.ಕಣಬೂರ, ಹಿರಿಯರಾದ ಈರಯ್ಯ ಗೋಠೆ, ನಗರ ಘಟಕ ಅಧ್ಯಕ್ಷ ಮುತ್ತು ವಸ್ತ್ರದ, ಎಂ.ಎಸ್.ಹಿರೇಮಠ, ಮುಖ್ಯ ಕಾರ್ಯ ನಿರ್ವಾಹಕ ಪಂಚಾಕ್ಷರಿ ಹಿರೇಮಠ, ಎಸ್.ಎಂ.ಭಜಂತ್ರಿ, ಎಸ್.ಸಿ.ಅವಟಿ ಸೇರಿದಂತೆ ಇತರರು ಇದ್ದರು.