ಹಿಟ್ನೆ ಹೆಬ್ಬಾಗಿಲು ಗ್ರಾಪಂಗೆ ಸೀಗೂರು ವಿಜಯಕುಮಾರ್ ಅಧ್ಯಕ್ಷ

| Published : Jul 17 2025, 12:39 AM IST

ಸಾರಾಂಶ

18 ಜನ ಸದಸ್ಯ ಬಲ ಹೊಂದಿರುವ ಪಂಚಾಯಿತಿಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸೀಗೂರು ವಿಜಯಕುಮಾರ್ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಯಶೋದಮ್ಮ ಅವರು ಮಾತ್ರ ನಾಮಪತ್ರ

ಕನ್ನಡಪ್ರಭ ವಾರ್ತೆ ರಾವಂದೂರು

ಹೋಬಳಿ ಹಿಟ್ನೆ ಹೆಬ್ಬಾಗಿಲು ಗ್ರಾಪಂ ನೂತನ ಅಧ್ಯಕ್ಷರಾಗಿ ಸೀಗೂರು ವಿಜಯಕುಮಾರ್ ಮತ್ತು ಉಪಾಧ್ಯಕ್ಷರಾಗಿ ಯಶೋದಮ್ಮ ಅವಿರೋಧ ಆಯ್ಕೆಯಾಗಿದ್ದಾರೆ.

ಈ ಹಿಂದೆ ಇದ್ದ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸ್ಥಾನಗಳಿಗೆ ರಾಜೀನಾಮೆ ನೀಡಿದ ಕಾರಣ ಬುಧವಾರ ಚುನಾವಣೆ ನಡೆಯಿತು.

18 ಜನ ಸದಸ್ಯ ಬಲ ಹೊಂದಿರುವ ಪಂಚಾಯಿತಿಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸೀಗೂರು ವಿಜಯಕುಮಾರ್ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಯಶೋದಮ್ಮ ಅವರು ಮಾತ್ರ ನಾಮಪತ್ರ ಸಲ್ಲಿಸಿದರು.

ಚುನಾವಣಾಧಿಕಾರಿಯಾಗಿದ್ದ ಪಶು ಸಂಗೋಪನೆ ಇಲಾಖೆಯ ಸಹಾಯಕ ನಿರ್ದೇಶಕ ಸೋಮಯ್ಯ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಿ ಘೋಷಣೆ ಮಾಡಿದರು.

ಕೆಪಿಸಿಸಿ ಸದಸ್ಯ ಅನಿಲ್ ಕುಮಾರ್, ವನಜಾಕ್ಷಮ್ಮ, ವರ ನಂದಿ, ಕಾಮರಾಜು, ಸುಧಾ, ಮಹದೇವ, ಮೀನಾಕ್ಷಿ, ಕುಮಾರ, ರವಿಕುಮಾರ್, ಮಹದೇವ, ಶಿವಕುಮಾರ್, ಸರೋಜಾ, ಛಾಯಾಮಣಿ, ಮಂಜು ನಾಯ್ಕ, ಸುಮಾ ಭಾಗವಹಿಸಿದ್ದರು.

ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಲೋಕೇಶ್, ತಾಪಂ ಮಾಜಿ ಸದಸ್ಯ ಟಿ. ಈರಯ್ಯ, ಕೆಡಿಪಿ ಸದಸ್ಯ ಮಹದೇವ್, ಪಿಎಲ್.ಡಿ ಬ್ಯಾಂಕ್ ಅಧ್ಯಕ್ಷ ಹೊಲದಪ್ಪ, ನಿರ್ದೇಶಕ ರವಿ, ಮುಖಂಡರಾದ ಚಪ್ಪರದಳ್ಳಿ ರವಿ, ಶಿವಣ್ಣ ಭೂತನಳ್ಳಿ, ಪಿ.ಪಿ. ಮಹದೇವ್, ಪುಟ್ಟಯ್ಯ, ಶಿವಶಂಕರ್, ಹುಣಸೂರು ಡಿ. ಕುಮಾರ್, ನಾಗಣ್ಣ, ಪರಮೇಶ್, ಜಯಸ್ವಾಮಿ, ನರಸಿಂಹಮೂರ್ತಿ, ಬಸವರಾಜ್, ಅಣ್ಣಯ್ಯ, ನಾಗೇಗೌಡ, ಸಣ್ಣತಮ್ಮಯ್ಯ, ಸಿದ್ದರಾಮೇಗೌಡ, ವೀರಭದ್ರ ಸ್ವಾಮಿ, ಆರ್.ಸಿ. ಚಂದ್ರು, ನಾರಾಯಣ, ಸಣ್ಣಪ್ಪ ಗಿರಿಗೂರು, ಮಹದೇವ್ ಬೇಗೂರು, ಜಯಸ್ವಾಮಿ, ಕುಮಾರ್ ಇದ್ದರು.