ಉಡುಪಿ ಧರ್ಮಪ್ರಾಂತದ ಮೂವರು ಉಪ ಯಾಜಕರಿಗೆ ಕಲ್ಯಾಣಪುರ ಮಿಲಾಗ್ರಿಸ್ ಕ್ಯಾಥೆಡ್ರಲ್‌ನಲ್ಲಿ ಗುರುದೀಕ್ಷೆ ಪ್ರದಾನಿಸಲಾಯಿತು.

ಕನ್ನಡಪ್ರಭ ವಾರ್ತೆ ಉಡುಪಿ

ಉಡುಪಿ ಧರ್ಮಪ್ರಾಂತದ ಮೂವರು ಉಪ ಯಾಜಕರಿಗೆ ಕಲ್ಯಾಣಪುರ ಮಿಲಾಗ್ರಿಸ್ ಕ್ಯಾಥೆಡ್ರಲ್‌ನಲ್ಲಿ ಗುರುದೀಕ್ಷೆ ಪ್ರದಾನಿಸಲಾಯಿತು.

ಪಡುಕೋಣೆಯ ಕೆವಿನ್ ಡಿಸೋಜಾ, ನಿಡ್ಪಳ್ಳಿಯ ಸ್ವೀವನ್ ಡಿಸೋಜಾ ಹಾಗೂ ಕೆಮ್ಮಣ್ಣುವಿನ ಶೊನ್ ಸಾವಿಯೋ ಅಂದ್ರಾದೆ ಅವರಿಗೆ ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಉಡುಪಿ ಧರ್ಮಪ್ರಾಂತ್ಯದ ಮೂವರು ಉಪಯಾಜಕರಿಗೆ ಗುರುದೀಕ್ಷೆ ನೂತನ ಧರ್ಮಗುರುಗಳಾಗಿ ಅಭಿಷಿಕ್ತಗೊಳಿಸಿದರು.

ಈ ಸಂಭ್ರಮದ ಬಲಿಪೂಜೆಯಲ್ಲಿ ಪವಿತ್ರಾತ್ಮನ ಆಗಮನಕ್ಕಾಗಿ ಧರ್ಮಾಧ್ಯಕ್ಷರ ಜೊತೆ ಸೇರಿದ ಎಲ್ಲ ಧರ್ಮಗುರುಗಳೂ ತಮ್ಮ ಕರಗಳನ್ನು ನವ ಧರ್ಮಗುರುಗಳ ಅಭ್ಯರ್ಥಿಯ ಶಿರದ ಮೇಲಿಟ್ಟು ಪ್ರಾರ್ಥಿಸಿದರು. ನಂತರ ಕ್ರೈಸ್ತ ಧಾರ್ಮಿಕ ವಿಧಿವಿಧಾನಗಳ ಪ್ರಕಾರ ನವ ಧರ್ಮಗುರುಗಳ ಕರಗಳನ್ನು ಪವಿತ್ರ ತೈಲಗಳಿಂದ ಅಭಿಷಿಕ್ತಗೊಳಿಸಿದರು.

ತಮ್ಮ ಸಂದೇಶದಲ್ಲಿ ಬಿಷಪ್ ಲೆಸ್ಲಿ ಡಿಸೋಜಾ ಮಾತನಾಡಿ, ದೇವಜನರ ಸೇವೆಗಾಗಿ ದೇವರ ಎದುರು ನಮ್ಮನ್ನು ನಾವು ವಿನಮ್ರಗೊಳಿಸುವುದೇ ಈ ದೀಕ್ಷೆ ಎಂದರು.

ದೀಕ್ಷೆ ಪಡೆದ ಉಪಯಾಜಕರು ಪ್ರಥಮ ಬಾರಿಗೆ ಬಲಿಪೀಠದ ಸೇವೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಭಕ್ತಾದಿಗಳಿಗೆ ದಿವ್ಯ ಪ್ರಸಾದ ವಿತರಿಸಿದರು.ಉಡುಪಿ ಧರ್ಮಪ್ರಾಂತ್ಯದ ಶ್ರೇಷ್ಠ ಗುರು ಮೊನ್ಸಿಂಜ್ಞೊರ್ ಫ್ರಾನ್ಸಿಸ್ ಎಫ್ ಲೂವಿಸ್, ಕುಲಪತಿ ಸ್ಟೀವನ್ ಡಿಸೋಜಾ, ಸಾರ್ವಜನಿಕ ಸಂಪರ್ಕಾಧಿಕಾರಿ ಡೆನಿಸ್ ಡೆಸಾ, ಶಿರ್ವ, ಕಾರ್ಕಳ, ಕುಂದಾಪುರ ವಲಯ ಪ್ರಧಾನ ಧರ್ಮಗುರುಗಳಾದ ಚಾರ್ಲ್ಸ್ ಮಿನೇಜಸ್, ಆಲ್ಬನ್ ಡಿಸೋಜಾ, ಪಾವ್ಲ್ ರೇಗೊ, ಮಂಗಳೂರು ಗುರುಮಠದ ರೆಕ್ಟರ್ ರಾಜೇಶ್ ರೊಸಾರಿಯೊ ವಿವಿಧ ಚರ್ಚುಗಳ ಧರ್ಮಗುರುಗಳು ಇದ್ದರು.

ವಿಲ್ಸನ್ ಡಿಸೋಜಾ ಗುರು ದೀಕ್ಷೆಯ ಧಾರ್ಮಿಕ ವಿಧಿ ವಿಧಾನ ನಿರೂಪಿಸಿದರು. ಸ್ಟೀಫನ್ ರೊಡ್ರಿಗಸ್ ನೂತನ ಧರ್ಮಗುರುಗಳ ಪರಿಚಯ ಮಾಡಿದರು. ಸ್ಟೀವನ್ ಡಿಸೋಜಾ ವಂದಿಸಿದರು