ಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳ ತೃತೀಯ ಪುಣ್ಯಸ್ಮರಣೆಯ ಅಂಗವಾಗಿ ನಗರದ ಆರ್‌ಕೆಎಂ ಆಯುರ್ವೇದ ವೈದ್ಯಕೀಯ ಕಾಲೇಜಿನಲ್ಲಿ ಗುರುನಮನ ಕಾರ್ಯಕ್ರಮ ಆಚರಿಸಲಾಯಿತು.

ಕನ್ನಡಪ್ರಭ ವಾರ್ತೆ ವಿಜಯಪುರ

ಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳ ತೃತೀಯ ಪುಣ್ಯಸ್ಮರಣೆಯ ಅಂಗವಾಗಿ ನಗರದ ಆರ್‌ಕೆಎಂ ಆಯುರ್ವೇದ ವೈದ್ಯಕೀಯ ಕಾಲೇಜಿನಲ್ಲಿ ಗುರುನಮನ ಕಾರ್ಯಕ್ರಮ ಆಚರಿಸಲಾಯಿತು.

ಅಧ್ಯಕ್ಷತೆ ವಹಿಸಿದ್ದ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಶಂಭುಲಿಂಗಯ್ಯ ಕರ್ಪೂರಮಠ ಸಿದ್ಧೇಶ್ವರ ಸ್ವಾಮೀಜಿಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿ, ಸ್ವಾಮೀಜಿಗಳು ತೋರಿದ ಆದರ್ಶಗಳು, ಮೌಲ್ಯಗಳು ಮತ್ತು ಧರ್ಮಮಾರ್ಗದಲ್ಲಿ ಜೀವನ ನಡೆಸಬೇಕು. ಸರಳತೆ, ಶಿಸ್ತು ಹಾಗೂ ಸೇವಾಭಾವನೆಗಳ ಮೂಲಕ ಸಮಾಜವನ್ನು ಮುನ್ನಡೆಸಿದ ಸ್ವಾಮೀಜಿಗಳ ಉಪದೇಶಗಳು ಸದಾ ಪ್ರೇರಣೆಯಾಗಿವೆ. ಪ್ರಕೃತಿಯಲ್ಲಿ ನನ್ನನ್ನು ಕಾಣಿರಿ ಎಂದು ತಿಳಿಸಿ ತಮ್ಮ ಪರಿಸರ ಕಾಳಜಿಯನ್ನು ಮೆರೆದಿದ್ದು, ನಾವೆಲ್ಲರೂ ಅದನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳೋಣ ಎಂದರು.

ಪ್ರಭಾರ ಪ್ರಾಂಶುಪಾಲ ಡಾ.ಎಸ್.ಆರ್.ಸರಶೆಟ್ಟಿ, ಉಪಪ್ರಾಂಶುಪಾಲ ಡಾ.ಎಸ್.ಬಿ.ಹಿರೇಮಠ, ಶೈಕ್ಷಣಿಕ ಡೀನ್ ಡಾ.ಎಂ.ಎನ್.ರುದ್ರಗೌಡರ, ಅಧ್ಯಾಪಕರು, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಇದ್ದರು. ಡಾ.ತೇಜಶ್ವಿನಿ ಜನಗೊಂಡ ನಿರೂಪಿಸಿದರು.