ಸಾರಾಂಶ
ದೊಡ್ಡಬಳ್ಳಾಪುರ: ತಾಲೂಕಾದ್ಯಂತ ಭಾನುವಾರ ಜನರು ಗುರುಪೂರ್ಣಿಮೆಯನ್ನು ಧಾರ್ಮಿಕ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.
ದೊಡ್ಡಬಳ್ಳಾಪುರ: ತಾಲೂಕಾದ್ಯಂತ ಭಾನುವಾರ ಜನರು ಗುರುಪೂರ್ಣಿಮೆಯನ್ನು ಧಾರ್ಮಿಕ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.
ಗುರು ಪೂರ್ಣಿಮೆಯ ಅಂಗವಾಗಿ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ, ಪ್ರಾರ್ಥನೆಗಳನ್ನು ಏರ್ಪಡಿಸಲಾಗಿತ್ತು. ಬೆಳಗ್ಗಿನಿಂದಲೂ ಸಹಸ್ರಾರು ಭಕ್ತರು ಭೇಟಿ ನೀಡಿ ದರ್ಶನ ಪಡೆದರು.ಘಾಟಿ ಸುಬ್ರಹ್ಮಣ್ಯ ಬಳಿಯ ದೇಗುಲದಲ್ಲಿ ಸಂಭ್ರಮ:
ತಾಲೂಕಿನ ಎಸ್‌ಎಸ್ ಘಾಟಿ ರಸ್ತೆಯಲ್ಲಿರುವ ಸಾಯಿಬಾಬಾ ಮಂದಿರದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಗುರುಪೂರ್ಣಿಮೆಯನ್ನು ವೈಭವದಿಂದ ಆಚರಣೆ ಮಾಡಲಾಯಿತು. ಗುರುಪೂರ್ಣಿಮೆಗೂ ಮುನ್ನ ಮೂರು ದಿನ ಮುಂಚಿತವಾಗಿಯೇ ಸಿದ್ಧತೆ ಮಾಡಿದ್ದು, ಮಂದಿರ ವಿವಿಧ ಪುಷ್ಪ, ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿತ್ತು. ಭಾನುವಾರ ಬೆಳಗ್ಗೆ ವಿವಿಧ ಪೂಜೆ. ಅಭಿಷೇಕ, ಭಜನೆ, ಪ್ರಸಾದ ಸೇರಿದಂತೆ ಸಕಲ ವ್ಯವಸ್ಥೆ ಮಾಡಲಾಗಿತ್ತು. ಶಿರಡಿ ಸಾಯಿಬಾಬಾ ಮಂದಿರ ಭಕ್ತರ ಆರಾಧನೆಯ ಕೇಂದ್ರವಾಗಿತ್ತು. ಸಾವಿರಾರು ಭಕ್ತರು ಶಿರಡಿ ಸಾಯಿಬಾಬಾ ದರ್ಶನ ಪಡೆದರು.ಆಚಾರ್ಯ ವಿನಯ್ ವಿನೇಕರ್ ಪ್ರವಚನ:
ಶ್ರೀ ಸಾಯಿವಿನಯ ವಿಶ್ವಧಾಮದಲ್ಲಿರುವ ಶ್ರೀ ಶಿರಡಿ ಸಾಯಿಬಾಬಾ ದೇವಾಲಯದಲ್ಲಿ ಗುರುಪೂರ್ಣಿಮಾ ಅಂಗವಾಗಿ ಭಾನುವಾರ ವಿಶೇಷ ಹೋಮ, ಹವನಗಳು ನಡೆದವು. ಆಚಾರ್ಯ ವಿನಯ್ ವಿನೇಕರ್ ಭಾಗವಹಿಸಿ ಭಕ್ತಾದಿಗಳಿಗೆ ಪ್ರವಚನ ನೀಡಿದರು.ದೊಡ್ಡಬಳ್ಳಾಪುರದಲ್ಲಿ ಸಂಭ್ರಮ:
ದೊಡ್ಡಬಳ್ಳಾಪುರದ ರಂಗಪ್ಪ ವೃತ್ತದ ಬಳಿ ಇರುವ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಭಾನುವಾರ ಗುರುಪೂರ್ಣಿಮೆಯ ಅಂಗವಾಗಿ ವಿಶೇಷ ಪೂಜಾರತಿಗಳು ಜರುಗಿದವು. ಶಿರಡಿ ಸಾಯಿಬಾಬಾ ಮೂರ್ತಿ ಹಾಗೂ ಮಂದಿರಕ್ಕೆ ಆಕರ್ಷಕ ಹೂವಿನ ಅಲಂಕಾರ ಮಾಡಲಾಗಿತ್ತು. ನಸುಕಿನಿಂದಲೂ ಸಹಸ್ರಾರು ಭಕ್ತಾದಿಗಳು ಭೇಟಿ ನೀಡಿ ಸಾಯಿಬಾಬಾ ದರ್ಶನ ಪಡೆದರು. ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.ವಿವಿಧ ದೇಗುಲಗಳಲ್ಲಿ ಆಚರಣೆ:
ದೊಡ್ಡಬಳ್ಳಾಪುರದ ಬ್ರಾಹ್ಮಣರ ಬೀದಿಯಲ್ಲಿರುವ ಶ್ರೀಗುರುರಾಘವೇಂದ್ರ ಸ್ವಾಮಿ ಮಠ, ಸ್ಕೌಟ್ ಕ್ಯಾಂಪ್ ರಸ್ತೆಯಲ್ಲಿರುವ ಶಿರಡಿ ಸಾಯಿಬಾಬಾ ಮಂದಿರ, ಲಕ್ಕಸಂದ್ರದ ಗುರುರಾಘವೇಂದ್ರಸ್ವಾಮಿ ಮಠ, ದರ್ಗಾಪುರದ ರಥಸಪ್ತಮಿ ಶನೇಶ್ವರ ದೇವಾಲಯ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ಭಾನುವಾರ ಗುರುಪೂರ್ಣಿಮೆ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ಯೋಗ ಶಾಲೆಗಳು, ಸಂಗೀತ ವಿದ್ಯಾಲಯಗಳಲ್ಲೂ ಗುರುಪೂರ್ಣಿಮೆ ಆಚರಿಸಲಾಯಿತು.(ಚೆಂದದ ಒಂದು ಫೋಟೋ ಸುದ್ದಿ ಜೊತೆಗೆ, ಮತ್ತೊಂದು ಪ್ಯಾನಲ್‌ಗೆ ಬಳಸಿ, ಉಳಿದದ್ದು ಪಕ್ಕಕ್ಕಿಡಿ. ಸುದ್ದಿಗಳು ಕಡಿಮೆ ಇದ್ದರೆ ಬ್ರೀಫನಲ್ಲಿ ಬಳಸೋಣ)
21ಕೆಡಿಬಿಪಿ4- ದೊಡ್ಡಬಳ್ಳಾಪುರ ತಾಲೂಕಿನ ಘಾಟಿ ಸುಬ್ರಹ್ಮಣ್ಯ ರಸ್ತೆಯಲ್ಲಿರುವ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಗುರುಪೂರ್ಣಿಮೆ ಅಂಗವಾಗಿ ವಿಶೇಷಾಲಂಕಾರ ಮಾಡಲಾಗಿತ್ತು.21ಕೆಡಿಬಿಪಿ5-
ದೊಡ್ಡಬಳ್ಳಾಪುರದ ಘಾಟಿ ಬಳಿಯ ಶ್ರೀ ಸಾಯಿವಿನಯ ವಿಶ್ವಧಾಮದಲ್ಲಿ ಗುರುಪೂರ್ಣಿಮಾ ಅಂಗವಾಗಿ ಭಾನುವಾರ ವಿಶೇಷ ಹೋಮ ಹವನಗಳು ನಡೆದವು. ಆಚಾರ್ಯ ವಿನಯ್ ವಿನೇಕರ್ ಭಾಗಿಯಾದರು.21ಕೆಡಿಬಿಪಿ6-
ದೊಡ್ಡಬಳ್ಳಾಪುರದ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಗುರುಪೂರ್ಣಿಮೆಯ ಅಂಗವಾಗಿ ವಿಶೇಷ ಪೂಜೆ, ಉತ್ಸವ ನಡೆಯಿತು.21ಕೆಡಿಬಿಪಿ7-
ಗುರುಪೂರ್ಣಿಮೆ ಅಂಗವಾಗಿ ದೊಡ್ಡಬಳ್ಳಾಪುರದ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಆಕರ್ಷಕ ಅಲಂಕಾರ ಮಾಡಲಾಗಿತ್ತು.21ಕೆಡಿಬಿಪಿ8-
ದೊಡ್ಡಬಳ್ಳಾಪುರದ ರಥಸಪ್ತಮಿ ಶನೇಶ್ವರ ದೇವಾಲಯದಲ್ಲಿ ಗುರುಪೂರ್ಣಿಮೆ.21ಕೆಡಿಬಿಪಿ9-
ದೊಡ್ಡಬಳ್ಳಾಪುರದ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಗುರುಪೂರ್ಣಿಮೆ ಸಂಭ್ರಮ.