ಯಶಸ್ಸು ಸಾಧಿಸಲು ಗುರುಗಳ ಮಾರ್ಗದರ್ಶನ ಅವಶ್ಯ: ಶಿವಸಿದ್ದೇಶ್ವರ ಸ್ವಾಮೀಜಿ

| Published : Aug 06 2024, 12:37 AM IST

ಯಶಸ್ಸು ಸಾಧಿಸಲು ಗುರುಗಳ ಮಾರ್ಗದರ್ಶನ ಅವಶ್ಯ: ಶಿವಸಿದ್ದೇಶ್ವರ ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ಜೀವನದಲ್ಲಿ ಗುರಿ ಮತ್ತು ಗುರುವಿನ ಮಾರ್ಗದರ್ಶನ ಇಲ್ಲದಿದ್ದರೆ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯವಿಲ್ಲ ಎಂದು ತುಮಕೂರು ಸಿದ್ದಗಂಗಾ ಮಠದ ಕಿರಿಯ ಸ್ವಾಮೀಜಿಗಳಾದ ಶಿವಸಿದ್ದೇಶ್ವರ ಸ್ವಾಮೀಜಿ ಹೇಳಿದರು. ಮಾಗಡಿಯಲ್ಲಿ ನಿವೃತ್ತಿ ಹೊಂದಿದ ಟಿ.ಎಚ್.ರಂಗಯ್ಯ ದಂಪತಿಗಳನ್ನು ಸನ್ಮಾನಿಸಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಮಾಗಡಿ

ಜೀವನದಲ್ಲಿ ಗುರಿ ಮತ್ತು ಗುರುವಿನ ಮಾರ್ಗದರ್ಶನ ಇಲ್ಲದಿದ್ದರೆ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯವಿಲ್ಲ ಎಂದು ತುಮಕೂರು ಸಿದ್ದಗಂಗಾ ಮಠದ ಕಿರಿಯ ಸ್ವಾಮೀಜಿಗಳಾದ ಶಿವಸಿದ್ದೇಶ್ವರ ಸ್ವಾಮೀಜಿ ಹೇಳಿದರು.

ತಾಲೂಕಿನ ಗುಡೇಮಾರನಹಳ್ಳಿ ಹ್ಯಾಂಡ್ ಪೋಸ್ಟ್ ಸಿದ್ದಗಂಗಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾಗಿ ನಿವೃತ್ತಿ ಹೊಂದಿದ ಟಿ.ಎಚ್.ರಂಗಯ್ಯ ದಂಪತಿಗಳನ್ನು ಸನ್ಮಾನಿಸಿ ಮಾತನಾಡಿದ ಅವರು, ಗುರುವಿಗೆ ತನ್ನದೇ ಆದ ಸ್ಥಾನ ಸಮಾಜದಲ್ಲಿ ಇದ್ದು ಗುರುವೂ ಕೂಡ ವಿದ್ಯಾರ್ಥಿಗಳಿಗೆ ತಮ್ಮ ಜ್ಞಾನವನ್ನು ಹಂಚಿಕೊಳ್ಳುವ ಮೂಲಕ ವಿದ್ಯಾರ್ಥಿಗಳನ್ನು ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ರೂಪಿಸುವ ನಿಟ್ಟಿನಲ್ಲಿ ಶಿಕ್ಷಕರು ಸಾಕಷ್ಟು ಶ್ರಮ ಹಾಕುತ್ತಾರೆ ಅದೇ ರೀತಿ ವಿದ್ಯಾರ್ಥಿಗಳು ಶಿಕ್ಷಕರು ನೀಡುವ ಮಾರ್ಗದರ್ಶನವನ್ನು ಸರಿಯಾಗಿ ಪಾಲನೆ ಮಾಡುವ ಮೂಲಕ ಜೀವನದಲ್ಲಿ ಉನ್ನತ ಸ್ಥಾನಕ್ಕೆ ಬರುವ ಮೂಲಕ ಶಿಕ್ಷಕರಿಗೆ ಮತ್ತು ಸಮಾಜಕ್ಕೆ ಗೌರವ ತರುವ ಕೆಲಸವನ್ನು ಮಾಡಬೇಕು ಶಿಕ್ಷಕರು ಹೇಳುವ ಮಾತು ಸತ್ಯ ಎಂದು ನಂಬುವ ವಿದ್ಯಾಥಿಗಳಿಗೆ ಶಿಕ್ಷಕರು ಹೆಚ್ಚಿನ ಶ್ರಮ ಮತ್ತು ಜ್ಞಾನವನ್ನು ತಾವು ಪಡೆದು ನಂತರ ಮಕ್ಕಳಿಗೆ ಬೋಧನೆ ಮಾಡಿದರೆ ಉತ್ತಮ ಪ್ರಜೆಗಳನ್ನು ಹೊರತುರಬಹುದು ಟಿ. ಎಚ್. ರಂಗಯ್ಯನವರು ತಮ್ಮ ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆ ಮಾಡಿದ್ದು ಮುಂದೆ ನಿವೃತ್ತಿಯಾದ ನಂತರ ಅವರ ಜೀವನ ಮತ್ತಷ್ಟು ಸುಖಕರವಾಗಿರಲಿ ಅವರ ಜ್ಞಾನವನ್ನು ವಿದ್ಯಾಥರ್ಿಗಳಿಗೆ ಮತ್ತು ಸಮಾಜಕ್ಕೆ ಹೆಚ್ಚಾಗಿ ಮುಂದೆಯೂ ಕೂಡ ಹಂಚಿಕೊಳ್ಳುವಂತಾಗಲಿ ಎಂದು ಹಾರೈಸಿದರು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ಪ್ರಾಂಶುಪಾಲ ಟಿ. ಎಚ್.ರಂಗಯ್ಯ, ಸ್ಪಧರ್ಾತ್ಮಕ ಜಗತ್ತಿನಲ್ಲಿ ಓದಿಗೆ ಹೆಚ್ಚಿನ ಪ್ರಾಮುಖ್ಯತೆ ಇದ್ದು ವಿದ್ಯಾಥರ್ಿಗಳು ಕೂಡ ಸ್ಪಧರ್ಾತ್ಮಕ ಜಗತ್ತಿಗೆ ಅನುಗುಣವಾಗಿ ಹೊಂದಿಕೊಳ್ಳುವ ಮನೋಭಾವ ಬೆಳೆಸಿಕೊಳ್ಳಬೇಕು ಜ್ಞಾನ ಇದ್ದರೆ ಯಾವ ರಂಗದಲ್ಲಾದರೂ ಏಳಿಗೆ ಸಾಧಿಸಬಹುದು ನನಗೆ ಸಹಕಾರ ನೀಡಿದ ಎಲ್ಲಾ ಅಧ್ಯಾಪಕರಿಗೆ ಕಾಲೇಜು ಸಿಬ್ಬಂದಿಗಳಿಗೆ ವಿದ್ಯಾಥರ್ಿಗಳಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ ತಾ.ಪಂ.ಮಾಜಿ ಸದಸ್ಯ ಶಂಕಪ್ಪ, ಹಳೆ ವಿದ್ಯಾಥರ್ಿಗಳಾದ ಮಂಜುಳಾಬಾಯಿ, ಸಂತೋಷ್, ಲಕ್ಕೇನಹಳ್ಳಿ ನಾರಾಯಣ, ಮಂಜುನಾಥ್, ಶ್ರೀಧರ್, ಮೋಹನ್, ರಂಗಯ್ಯ, ಕೃಷ್ಣಪ್ಪ ಸೇರಿದಂತೆ ಕಾಲೇಜು ಉಪಾಧ್ಯಾಯರು ವಿದ್ಯಾಥರ್ಿಗಳು ಭಾಗವಹಿಸಿದ್ದರು.