ಸಾರಾಂಶ
ಗುತ್ತಲ: ದಸರಾ ಅಂಗವಾಗಿ ಪಟ್ಟಣದ ಎಲೆ ಪೇಟೆಯಲ್ಲಿನ ಚೌತಕಟ್ಟೆಯಲ್ಲಿ ಪ್ರತಿವರ್ಷ ಪ್ರತಿಷ್ಠಾಪಿಸಲ್ಪಡುವ ಶ್ರೀದುರ್ಗಾ ದೇವಿಯ ಭವ್ಯ ಮೆರವಣಿಗೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋದಾ ವಂಟಗೋಡಿ ಅವರು ಸೋಮವಾರ ಸಂಜೆ 5ಕ್ಕೆ ಪೊಲೀಸ್ ಠಾಣೆಯ ಆವರಣದಲ್ಲಿ ಚಾಲನೆ ನೀಡುವರು.
ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ವಿವಿಧ ಸಂಪ್ರದಾಯ ವಾದ್ಯಗಳೊಂದಿಗೆ ಸಂಚರಿಸಿ ನಂತರ ಎಲೆ ಪೇಟೆಯಲ್ಲಿರುವ ಚೌತ ಕಟ್ಟಿಯಲ್ಲಿ ಪ್ರತಿಷ್ಠಾಪನೆಯಾಗುವುದು.ಕಾರ್ಯಕ್ರಮದ ಸಾನ್ನಿಧ್ಯವನ್ನು ಗುತ್ತಲ ಕಲ್ಮಠದ ಗುರುಸಿದ್ದ ಸ್ವಾಮೀಜಿ ವಹಿಸುವರು. ಅಧ್ಯಕ್ಷತೆಯನ್ನು ಗುತ್ತಲ ದಸರಾ ಉತ್ಸವ ಸಮಿತಿ ಅಧ್ಯಕ್ಷ ಚನ್ನಪ್ಪ ಕಲಾಲ ವಹಿಸುವರು.
ಕಾರ್ಯಕ್ರಮದಲ್ಲಿ ಪಿಎಸ್‌ಐ ಬಸವರಾಜ ಬಿರಾದಾರ, ಗುತ್ತಲ ಪಪಂ ಸದಸ್ಯರು, ವಿವಿಧ ಗ್ರಾಮಗಳ ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ವಿವಿಧ ಸಂಘಟನೆಯ ಸದಸ್ಯರು, ದಸರಾ ಉತ್ಸವ ಸಮಿತಿಯ ಸದಸ್ಯರು ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರೆಂದು ದಸರಾ ಉತ್ಸವ ಸಮಿತಿಯ ಕಾರ್ಯದರ್ಶಿ ಪ್ರದೀಪ ಸಾಲಗೇರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಇಂದಿನಿಂದ ದೇವರಗುಡ್ಡದಲ್ಲಿ ಧಾರ್ಮಿಕ ಕಾರ್ಯಕ್ರಮರಾಣಿಬೆನ್ನೂರು: ತಾಲೂಕಿನ ದೇವರಗುಡ್ಡ ಮಾಲತೇಶ ಸ್ವಾಮಿ ದೇವಸ್ಥಾನದಲ್ಲಿ ದಸರಾ ಹಬ್ಬದ ಅಂಗವಾಗಿ ಸೆ. 22ರಿಂದ ಅ. 15ರ ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ದೇವಸ್ಥಾನ ಸಮಿತಿಯ ಅಧ್ಯಕ್ಷ ಗವಿಸಿದ್ದಪ್ಪ ದ್ಯಾಮಣ್ಣನವರ ತಿಳಿಸಿದರು.ದೇವಸ್ಥಾನದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸೆ. 22ರಂದು ಘಟ ಸ್ಥಾಪನೆಯಾಗಲಿದೆ. ಸೆ. 30ರಂದು ದುರ್ಗಾಷ್ಟಮಿ, ಅ. 1ರಂದು ಮಹಾನವಮಿ ಅಂಗವಾಗಿ ಸಂಜೆ 6ಕ್ಕೆ ಕಾರ್ಣಿಕೋತ್ಸವ ನಡೆಯಲಿದೆ.
ಅ. 2ರಂದು ವಿಜಯದಶಮಿ ಅಂಗವಾಗಿ ಸಂಜೆ 4ಕ್ಕೆ ಕಂಚವೀರರಿಂದ ಶಸ್ತ್ರ ಪವಾಡಗಳು, ಗೊರವಯ್ಯನವರಿಂದ ಸರಪಳಿ ಪವಾಡಗಳು, ನಂತರ ಸಂಜೆ 6ಕ್ಕೆ ಬನ್ನಿ ಮುಡಿಯುವ ಕಾರ್ಯಕ್ರಮವಿದೆ. ಅ. 7ರಂದು ಶೀಗೆ ಹುಣ್ಣಿಮೆ, ಅ. 15ರಂದು ಕುದರಿ ಹಬ್ಬ ಆಚರಿಸಲಾಗುವುದು ಎಂದರು.ಮೂಲ ಸೌಲಭ್ಯಕ್ಕೆ ಹೆಚ್ಚಿನ ಒತ್ತು: ದೇವಸ್ಥಾನಕ್ಕೆ ನೂತನ ಆಡಳಿತ ಮಂಡಳಿ ರಚನೆಯಾಗಿದ್ದು, ಮೂಲ ಸೌಲಭ್ಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಶೌಚಾಲಯ, ಕುಡಿಯವ ನೀರು, ಭಕ್ತರಿಗೆ ವಸತಿ ವ್ಯವಸ್ಥೆಯ ಜತೆಗೆ ಶುಚಿತ್ವ ಕಾಪಾಡಲಾಗುವುದು ಎಂದರು.ಮುಂದಿನ ದಿನಗಳಲ್ಲಿ ಗೋಶಾಲೆಯ ಜತೆಗೆ ಪಾಠಶಾಲೆಯ ತೆರೆಯುವ ಚಿಂತನೆಯಿದ್ದು, ದೇವಸ್ಥಾನ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.
ಧಾರವಾಡದ ವಕೀಲ ಶರಣಬಸವ ಅಂಗಡಿ, ಸ್ಥಳೀಯ ಚೇರ‍್ಮನ್ ಭರಮಪ್ಪ ಉರ್ಮಿ, ಸದಸ್ಯ ಸುರೇಶ ತೆಳಗೇರಿ, ಪ್ರಕಾಶ ಬಳ್ಳಾರಿ, ಪವನ ಪಾಟೀಲ, ವಕೀಲ ಸುಭಾಷ ಕೆಂಗಲ್ ಸೇರಿದಂತೆ ಇತರರಿದ್ದರು.