ಜಿಮ್‌ಗಳಲ್ಲಿ ಲೇಡಿ ಟ್ರೇನರ್‌ಗಳಿಲ್ಲ. ಪುರುಷ ಟ್ರೇನರಗಳೇ ಮಹಿಳೆಯರಿಗೂ ತರಬೇತಿ ನೀಡುತ್ತಾರೆ. ಈ ವೇಳೆ ಬ್ಯಾಡ್‌ ಟಚ್‌ ಹೆಚ್ಚಾಗುತ್ತಿವೆ. ಲವ್‌ ಜಿಹಾದ್‌ನಂತಹ ಪ್ರಕರಣಗಳಿಗೂ ಜಿಮ್‌ಗಳೇ ನಾಂದಿ ಹಾಡುತ್ತಿವೆ ಎಂಬೆಲ್ಲ ಆರೋಪಗಳಿಂದಾಗಿ ಈ ರೀತಿ ಆಗ್ರಹ ಸಾರ್ವಜನಿಕ ವಲಯದಿಂದ ಕೇಳಿ ಬಂದಿದೆ.

ಶಿವಾನಂದ ಗೊಂಬಿ

ಹುಬ್ಬಳ್ಳಿ: ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ವ್ಯಾಪ್ತಿಗೆ ಜಿಮ್‌ಗಳು ಬರಲಿ. ಜಿಮ್‌ಗಳ ರೂಲ್ಸ್‌ ಆ್ಯಂಡ್‌ ರೆಗ್ಯುಲೇಷನ್‌ ಪರಿಶೀಲನೆ, ಕ್ರಮಕ್ಕೆ ಪ್ರತಿ ಜಿಲ್ಲೆಗೊಂದು ಇಲಾಖೆ ನೇತೃತ್ವದ ಕಮಿಟಿ ರಚನೆಯಾಗಲಿ...

ಜಿಮ್‌ಗಳಲ್ಲಿ ಲೇಡಿ ಟ್ರೇನರ್‌ಗಳಿಲ್ಲ. ಪುರುಷ ಟ್ರೇನರಗಳೇ ಮಹಿಳೆಯರಿಗೂ ತರಬೇತಿ ನೀಡುತ್ತಾರೆ. ಈ ವೇಳೆ ಬ್ಯಾಡ್‌ ಟಚ್‌ ಹೆಚ್ಚಾಗುತ್ತಿವೆ. ಲವ್‌ ಜಿಹಾದ್‌ನಂತಹ ಪ್ರಕರಣಗಳಿಗೂ ಜಿಮ್‌ಗಳೇ ನಾಂದಿ ಹಾಡುತ್ತಿವೆ ಎಂಬೆಲ್ಲ ಆರೋಪಗಳಿಂದಾಗಿ ಈ ರೀತಿ ಆಗ್ರಹ ಸಾರ್ವಜನಿಕ ವಲಯದಿಂದ ಕೇಳಿ ಬಂದಿದೆ.

ಯುವಜನ ಹಾಗೂ ಕ್ರೀಡಾ ಇಲಾಖೆಯೂ ಇದೀಗ ಕ್ರೀಡೆಗಳ ಬಗ್ಗೆ ಅಷ್ಟೇ ಗಮನಹರಿಸುತ್ತವೆ. ಅದು ಕೂಡ ಬರೀ ಕ್ರೀಡಾ ಶಾಲೆಗಳಲ್ಲಿ ಉಸ್ತುವಾರಿಗಳನ್ನು ನೋಡಿಕೊಳ್ಳುವುದಕ್ಕೆ ಸೀಮಿತವಾಗಿವೆ. ಜಿಮ್‌ಗಳು ದೇಹದಾರ್ಢ್ಯ ಬೆಳೆಸುವ, ದೇಹವನ್ನು ಹುರಿಗೊಳಿಸುವ, ದೇಹದ ಆರೋಗ್ಯ ಕಾಪಾಡಿಕೊಳ್ಳುವ ಕೆಲಸಕ್ಕೆ ಜಿಮ್‌ಗಳಲ್ಲಿ ಕಸರತ್ತು ನಡೆಯುತ್ತದೆ. ಜಿಮ್‌ಗಳಿಗೆ ಹೋಗುವವರ ಸಂಖ್ಯೆಯಲ್ಲಿ ಯುವ ಸಮೂಹವೇ ಬಹುಪಾಲು.

ಆದರೆ ಜಿಮ್‌ಗಳು ಸ್ಥಳೀಯ ಸಂಸ್ಥೆಯಿಂದ (ಪಾಲಿಕೆ, ಪುರಸಭೆ, ನಗರಸಭೆ) ಅನುಮತಿ, ಅಗ್ನಿಶಾಮಕ ದಳ ಹಾಗೂ ಪೊಲೀಸ್‌ ಇಲಾಖೆಯಿಂದ ಅನುಮತಿ ಪಡೆದರೆ ಮುಗಿಯಿತು. ಇವು ಸಾಮಾನ್ಯ ಪ್ರಕ್ರಿಯೆ. ಆದರೆ ಟ್ರೇನರ್‌ಗಳ ಅರ್ಹತೆಯೇನು? ಮಹಿಳಾ ಟ್ರೇನರ್‌ಗಳೆಷ್ಟು? ಪುರುಷ ಟ್ರೇನರ್‌ಗಳೆಷ್ಟು? ಅವರು ಅದಕ್ಕೆ ಅರ್ಹರಿದ್ದಾರೆಯೋ ಇಲ್ಲವೋ? ಅರ್ಹರಿದ್ದರೆ ಟ್ರೇನರ್‌ಗಳಾಗಲು ಯಾವ ಬಗೆಯ ತರಬೇತಿ ಪಡೆದಿದ್ದಾರೆ ಎಂಬುದನ್ನು ಈ ಯಾವ ಇಲಾಖೆಗಳು ಪರಿಶೀಲನೆ ಮಾಡುವುದಿಲ್ಲ. ಯಾವುದಾದರೂ ವಹಿವಾಟು ಆರಂಭಿಸುವ ಪಡೆಯುವಂತಹ ಅನುಮತಿಯನ್ನು ಸ್ಥಳೀಯ ಸಂಸ್ಥೆಗಳಿಂದ ಪಡೆಯುತ್ತವೆಯೇ ಹೊರತು ಟ್ರೇನರ್‌ಗಳ ಬಗ್ಗೆ ಯಾವುದೇ ಮಾಹಿತಿ ನೀಡುವುದಿಲ್ಲ.

ಜಿಮ್‌ ತೆರೆಯಲು ಯುವಜನ ಇಲಾಖೆಯ ಅನುಮತಿ ಪಡೆಯುವುದನ್ನು ಕಡ್ಡಾಯಗೊಳಿಸಬೇಕು. ಇದು ಟ್ರೇನರ್‌, ಅವರ ವಿದ್ಯಾಭ್ಯಾಸ, ಜಿಮ್‌ ಎಷ್ಟು ದೊಡ್ಡದಿದೆ, ಅಲ್ಲಿನ ನೀಡುವ ಸೌಲಭ್ಯಗಳನ್ನು ಪರಿಶೀಲಿಸಿದ ನಂತರವೇ ಕ್ರೀಡಾ ಇಲಾಖೆ ಅನುಮತಿ ನೀಡುವಂತಾಗಬೇಕು.

ಇದೀಗ ಜಿಮ್‌ ಚಟುವಟಿಕೆ, ಅಲ್ಲಿನ ಟ್ರೇನರ್‌ಗಳ ಬಗ್ಗೆ ಸಾಕಷ್ಟು ಅಪಸ್ವರ ಕೇಳಿ ಬರುತ್ತಿವೆ. ಆದಕಾರಣ ಯುವಜನರೇ ಹೆಚ್ಚಿನ ಸಂಖ್ಯೆಯಲ್ಲಿ ಹೋಗುವುದರಿಂದ ಯುವಜನ ಮತ್ತು ಕ್ರೀಡಾ ಇಲಾಖೆ ನೇತೃತ್ವದಲ್ಲಿ ಕಮಿಟಿ ರಚಿಸಬೇಕು. ಈ ಕಮಿಟಿ ಕನಿಷ್ಠ 2-3 ತಿಂಗಳಿಗೊಮ್ಮೆ ಜಿಮ್‌ ಮಾಲೀಕರ ಸಭೆ ನಡೆಸಿ, ಅಲ್ಲಿನ ಮಾಹಿತಿ ಪಡೆಯಬೇಕು. ಯಾವುದೇ ಅವ್ಯವಹಾರ, ಅಕ್ರಮವಾಗದಂತೆ ತಡೆಯಲು ಕಮಿಟಿ ಆಗಾಗ ಆಕಸ್ಮಿಕವಾಗಿ ಜಿಮ್‌ಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡುತ್ತಿರಬೇಕು ಎಂಬುದು ಸಾರ್ವಜನಿಕರ ಒಕ್ಕೊರಲಿನ ಆಗ್ರಹ.

ಈ ಬಗ್ಗೆ ಸರ್ಕಾರ, ಜಿಲ್ಲಾಡಳಿತ ಯಾವ ರೀತಿಯ ಕ್ರಮ ಕೈಗೊಳ್ಳುತ್ತದೆ ಎಂಬುದನ್ನು ಕಾಯ್ದು ನೋಡಬೇಕಷ್ಟೇ!ಅರ್ಹತೆ ತಿಳಿಯುತ್ತಿಲ್ಲ

ಜಿಮ್‌ಗಳ ಮೇಲೆ ಯಾರದ್ದೂ ಹಿಡಿತವಿಲ್ಲದಂತಾಗಿದೆ. ಅಲ್ಲಿನ ಟ್ರೇನರ್‌ಗಳಿಗೆ ಅರ್ಹತೆ ಇದೆಯೋ ಇಲ್ವೋ ಎಂಬುದು ತಿಳಿಯುತ್ತಿಲ್ಲ. ಹೀಗಾಗಿ ಯುವಜನ ಹಾಗೂ ಕ್ರೀಡಾ ಇಲಾಖೆ ವ್ಯಾಪ್ತಿಗೆ ಸೇರಿಸಬೇಕು. ಜತೆಗೆ ಕ್ರೀಡಾ ಇಲಾಖೆ ನೇತೃತ್ವದಲ್ಲಿ ಕಮಿಟಿ ರಚಿಸಿ ಎಲ್ಲ ಜಿಮ್‌ಗಳಲ್ಲಿನ ಪರಿಸ್ಥಿತಿ, ಸೌಲಭ್ಯ, ಟ್ರೇನರ್‌ಗಳ ಪೂರ್ವಾಪರ ಮಾಹಿತಿ ಪಡೆಯಬೇಕು ಎಂದು ಜಿಮ್‌ಗೆ ತೆರಳುವ ಯುವಕ ಕೃಷ್ಣ ಪಾಟೀಲ ಹೇಳುತ್ತಾರೆ.