ವರದರಾಜಸ್ವಾಮಿಗೆ ಪೊಲೀಸ್ ಇಲಾಖೆಯಿಂದ ಗೌರವ ವಂದನೆ

| Published : Oct 05 2025, 01:00 AM IST

ಸಾರಾಂಶ

ಮೈಸೂರು ಸಂಸ್ಥಾನದಲ್ಲಿ ಅನಾದಿ ಕಾಲದಿಂದಲೂ ದಸರಾ

ಕನ್ನಡಪ್ರಭ ವಾರ್ತೆ ಎಚ್.ಡಿ. ಕೋಟೆ ಪಟ್ಟಣದ ವರದರಾಜ ದೇವಾಲಯದ ಆವರಣದಲ್ಲಿ ವಿಜಯದಶಮಿಯ ಪ್ರಯುಕ್ತ ವರದರಾಜಸ್ವಾಮಿಗೆ ಪೊಲೀಸ್ ಇಲಾಖೆಯಿಂದ ಗೌರವ ವಂದನೆ ಸಲ್ಲಿಸಲಾಯಿತು.ವರದರಾಜಸ್ವಾಮಿ ದೇವಾಲಯದ ಪ್ರಧಾನ ಅರ್ಚಕ ತಿರುಮಲಾಚಾರ್ ಮಾತನಾಡಿ, ಮೈಸೂರು ಸಂಸ್ಥಾನದಲ್ಲಿ ಅನಾದಿ ಕಾಲದಿಂದಲೂ ದಸರಾ ನಡೆಯುತ್ತಿದೆ. ಚಾಮುಂಡೇಶ್ವರಿಗೆ ಪೊಲೀಸ್ ವಂದನೆ ಮಾಡುತ್ತಾ ಬರಲಾಗಿದೆ. ಮೈಸೂರಿನಲ್ಲಿ ಚಾಮುಂಡೇಶ್ವರಿ ದೇವಿಗೆ ಬಿಟ್ಟರೆ ಪಟ್ಟಣದ ವರದರಾಜಸ್ವಾಮಿಗೆ ಪೊಲೀಸ್ ವಂದನೆ ನಡೆಯುತ್ತದೆ, ಅದರಂತೆ ಗುರುವಾರ ವರದರಾಜಸ್ವಾಮಿಗೆ ಪೊಲೀಸ್ ವಂದನೆ ನಡೆದಿದೆ. ಇದನ್ನು ಪೊಲೀಸ್ ಪೂಜೆ ಎಂದೇ ಹಮ್ಮಿಕೊಂಡು ನಡೆಸಲಾಗುತ್ತಿದೆ ಎಂದರು.ಎಚ್.ಡಿ. ಕೋಟೆ ದಸರಾ ಆರಂಭ ದಿನದಿಂದ ಇಲ್ಲಿಯವರೆಗೂ ಪೊಲೀಸ್ ಪೂಜೆ ನಿರಂತರವಾಗಿ ನಡೆದುಕೊಂಡು ಬರುತ್ತಿರುವುದು ಇಲ್ಲಿನ ವಿಶೇಷ ಎಂದರು.ವರದರಾಜಸ್ವಾಮಿ ದೇವಾಲಯದಲ್ಲಿ ವಿಗ್ರಹ ಕಳುವಾಗಿದ್ದಾಗ ವಿಗ್ರಹ ಸಿಗುವವರೆಗೆ ಅಂದರೆ ಐದು ವರ್ಷಗಳ ಕಾಲ ದಸರಾ ನಡೆದಿರಲಿಲ್ಲ, ಆಗ ಹೊರತುಪಡಿಸಿ ಉಳಿದೆಲ್ಲ ದಸರಾಗಳಲ್ಲಿ ಪೊಲೀಸ್ ಪೂಜೆ ಯಶಸ್ವಿಯಾಗಿ ನಡೆಯುತ್ತಾ ಬಂದಿದೆ ಎಂದರು.ಪೊಲೀಸ್ ಪೂಜೆ ನಂತರ ಸಿಪಿಐ ಗಂಗಾಧರ್ ಮಾತನಾಡಿ, ರಾಜ್ಯದಲ್ಲಿ ದಸರಾ ವೇಳೆ ಮೈಸೂರಿನಲ್ಕಿ ಚಾಮುಂಡೇಶ್ವರಿ ಬಳಿಕ ವರಸರಾಜಸ್ವಾಮಿಗೆ ಪೊಲೀಸ್ ವಂದನೆ ಸಲ್ಲಿಸಲಾಗುತ್ತಿದೆ. ನಮ್ಮ ತಾಲೂಕು ಕೇಂದ್ರದಲ್ಲಿ ನಡೆಯುತ್ತಿರುವುದು ಸಂತಸದ ವಿಚಾರ, ನಮ್ಮ ಸಿಬ್ಬಂದಿಗಳು ಈ ಪೂಜಾ ಕಾರ್ಯಕ್ರಮಕ್ಕೆ ಉತ್ಸುಕತೆ ಭಾಗವಹಿಸಿ ಕೋಟೆ ದಸರಾವನ್ನು ಯಶಸ್ವಿಗೊಳಿಸಿದ್ದಾರೆ ಎಂದರು.ಕಳೆದ ಒಂಬತ್ತು ದಿನಗಳಿಂದ ಪಟ್ಟಣದಲ್ಲಿ ದಸರಾ ಮಾದರಿಯಲ್ಲೇ ಅನೇಕ ಉತ್ಸವಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ವಿಶೇಷ ಪೂಜಾ ಕೈಂಕರ್ಯಗಳು, ಹೋಮಗಳು ನಡೆದವು, ಮುಂದಿನ ನಾಲ್ಕು ದಿನಗಳ ಕಾಲವು ಸಹ ಅನೇಕ ಪೂಜಾ ಕಾರ್ಯಕ್ರಮಗಳು ಜರುಗಲಿವೆ ಎಂದು ದೇವಾಲಯ ದಸರಾ ಆಚರಣಾ ಸಮಿತಿ ಅಧ್ಯಕ್ಷ ಶ್ರೀಕಾಂತ್ ತಿಳಿಸಿದರು.ಪೊಲೀಸ್ ವಂದನೆಯನ್ನು ಎಸ್ಐ ಸುರೇಶ್ ನಾಯಕ, ಚಿಕ್ಕನಾಯಕ, ಎಎಸ್ಐ ಶಿವಕುಮಾರ್, ಲೀಲಾವತಿ, ಸಿಬ್ಬಂದಿ ಸಲ್ಲಿಸಿದರು.ಆಗಮಿಕರಾದ ರಾಮಪ್ರಿಯ, ಶ್ರೀನಿಧಿ, ಪುರಸಭಾ ಅಧ್ಯಕ್ಷ ಶಿವಮ್ಮ ಚಾಕಳ್ಳಿ ಕೃಷ್ಷ, ಮುಖಂಡರಾದ ಎಂ.ಸಿ. ದೊಡ್ಡ ನಾಯಕ, ನಾಗರಾಜು, ಪ್ರಸಾದ್, ವೈ.ಟಿ. ಮಹೇಶ್, ಶ್ರೀಕಾಂತ್, ಜಯಂತ್, ದೇವರಾಜು, ಸ್ವಾಮಿನಾಯಕ, ದೇವನಾಯಕ, ಚಿಕ್ಕನಾಯಕ, ಕೆಂಡಗಣ್ಣಸ್ವಾಮಿ, ರಾಜೇಂದ್ರ, ವೆಂಕಟೇಶ್, ಸತೀಶ್, ಮಂಜು, ಮನು, ಸಂತೋಷ್, ವೆಂಕಟೇಶ್, ನಿಂಗರಾಜು ಇದ್ದರು.