ಸಾರಾಂಶ
ಕನ್ನಡಪ್ರಭ ವಾರ್ತೆ ಪಾಂಡವಪುರ
ತಾಲೂಕಿನ ಹಳೇಬೀಡು ಗ್ರಾಮದ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಎಚ್.ಲಿಂಗರಾಜು ಅವಿರೋಧವಾಗಿ ಆಯ್ಕೆಯಾದರು.ಹಿಂದಿನ ಅಧ್ಯಕ್ಷ ಎಚ್.ಕೆ.ಕುಳ್ಳೇಗೌಡರ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಮಂಗಳವಾರ ಚುನಾವಣೆ ನಡೆದು ಅಧ್ಯಕ್ಷ ಸ್ಥಾನಕ್ಕೆ ಎಚ್.ಲಿಂಗರಾಜು ಹೊರತುಪಡಿಸಿ ಉಳಿದ ಯಾವ ನಿರ್ದೇಶಕರು ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಸಂಘದ ನೂತನ ಅಧ್ಯಕ್ಷರಾಗಿ ಎಚ್.ಲಿಂಗರಾಜು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಚುನಾವಣಾಧಿಕಾರಿ ಆನಂದ ನಾಯ್ಕ ಘೋಷಿಸಿದರು.
ಎಚ್.ಲಿಂಗರಾಜು ಆಯ್ಕೆಯಾಗುತ್ತಿದ್ದಂತೆಯೇ ಬೆಂಬಲಿಗರು ಸಹಿಹಂಚಿ ಸಂಭ್ರಮಿಸಿದರು. ಎಲ್ಲಾ ನಿರ್ದೇಶಕರು, ಮುಖಂಡರು ನೂತನ ಅಧ್ಯಕ್ಷರನ್ನು ಅಭಿನಂದಿಸಿದರು. ಅಧ್ಯಕ್ಷ ಎಚ್.ಲಿಂಗರಾಜು ಮಾತನಾಡಿ, ಸಂಘದ ಎಲ್ಲಾ ನಿರ್ದೇಶಕರ ಸಹಕಾರ, ಮುಖಂಡರ ಬೆಂಬಲದೊಂದಿಗೆ ಸಂಘದ ಅಭಿವೃದ್ಧಿ, ಸರ್ಕಾರದಿಂದ ದೊರೆಯುವ ಸಾಲ ಸೌಲಭ್ಯ, ರಸಗೊಬ್ಬರವನ್ನು ಸಮರ್ಪಕವಾಗಿ ಪೂರೈಕೆ ಮಾಡುವ ಮೂಲಕ ರೈತರ ಪ್ರಗತಿಗೆ ಶ್ರಮಿಸುತ್ತೇನೆ ಎಂದರು.ಈ ವೇಳೆ ಉಪಾಧ್ಯಕ್ಷ ಎಂ.ಪಿ.ಗುರುಮೂರ್ತಿ, ನಿರ್ದೇಶಕರಾದ ಎಚ್.ಸಿ.ಪುಟ್ಟಸ್ವಾಮೀಗೌಡ, ಎಚ್.ಕೆ.ಕುಳ್ಳೇಗೌಡ, ಎಚ್.ಆರ್.ತಿಮ್ಮೇಗೌಡ, ಎಚ್.ವಿ.ಕುಮಾರ್, ಎಚ್.ಸಿ.ಅರವಿಂದ್, ಎಚ್.ಎಂ.ರಮೇಶ್, ಪುಟ್ಟಲಕ್ಷ್ಮಮ್ಮ, ನಾಗಮ್ಮ, ಪುಟ್ಟರಾಮಯ್ಯ, ಗ್ರಾಪಂ ಅಧ್ಯಕ್ಷ ಎಚ್.ಸಿ.ಧನಂಜಯ, ಮುಖಂಡರಾದ ಪಟೇಲ್ ರಾಜು, ಮರೀಗೌಡ, ಯೋಗರಾಜು, ಕಾರ್‍ಯದರ್ಶಿ ಎಚ್.ಆರ್.ಮಹದೇವು, ಸಿಬ್ಬಂದಿ ಭವಾನಿ, ನಾಗೇಶ್ ಸೇರಿದಂತೆ ಹಲವರು ಇದ್ದರು.
ರೋಟರಿ ಸಂಸ್ಥೆಯಿಂದ ಶಾಲೆಗೆ ಉಚಿತ 15 ಡೆಸ್ಕ್ ವಿತರಣೆಮದ್ದೂರು:
ರೋಟರಿ ಮದ್ದೂರು ಮತ್ತು ರೋಟರಿ ಬೆಂಗಳೂರು ಸೆಂಟ್ರಲ್ ಸಹಯೋಗದಲ್ಲಿ ತಾಲೂಕಿನ ಕೆ.ಹೊನ್ನಲಗೆರೆಯ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಗೆ 15 ಡೆಸ್ಕ್ ಗಳನ್ನು ಉಚಿತವಾಗಿ ವಿತರಿಸಲಾಯಿತು.ಮದ್ದೂರು ರೋಟರಿ ಅಧ್ಯಕ್ಷ ಚನ್ನಂಕೇಗೌಡ ಮಾತನಾಡಿ, ರೋಟರಿ ಸಂಸ್ಥೆಯು ಗ್ರಾಮೀಣ ಪ್ರದೇಶದ ಶಾಲೆಗಳ ಮೂಲ ಸೌಕರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಗ್ರಾಮೀಣ ಶಾಲೆಗಳಲ್ಲಿ ಮಕ್ಕಳ ಕಲಿಕಾ ಮಟ್ಟವನ್ನು ಹೆಚ್ಚಿಸಲು ಇಂಗ್ಲಿಷ್ ಕಲಿಕಾ ತರಬೇತಿಗಳು, ಮಕ್ಕಳಲ್ಲಿ ನಾಯಕತ್ವ ಗುಣ ಹೆಚ್ಚಿಸುವ ತರಬೇತಿಗಳನ್ನು ಪ್ರತಿ ವರ್ಷ ಶಾಲೆಗಳಲ್ಲಿ ಹಮ್ಮಿಕೊಂಡು ಬಂದಿದೆ ಎಂದರು.
ಈ ವೇಳೆ ರೋಟರಿ ಬೆಂಗಳೂರು ಸೆಂಟ್ರಲ್ ಅಧ್ಯಕ್ಷ ಲಿಂಗರಾಜು, ಮಾಜಿ ಅಧ್ಯಕ್ಷ ಸುರೇಶ್ ಹುಲಿ, ಮದ್ದೂರು ಕಾರ್ಯದರ್ಶಿ ಲೋಕೇಶ್, ಮಾಜಿ ಅಧ್ಯಕ್ಷ ಶಶಿಗೌಡ, ಸದಸ್ಯರಾದ ಶಿವಕುಮಾರ್, ಪ್ರವೀಣ್, ಶಾಲಾ ಎಸ್ ಡಿಎಂಸಿ ಅಧ್ಯಕ್ಷ ಸ್ವಾಮಿ, ಮುಖ್ಯ ಶಿಕ್ಷಕ ವೆಂಕಟೇಶ್, ಎಸ್ ಡಿಎಂಸಿ ಸದಸ್ಯರು ಹಾಗೂ ಶಾಲಾ ಶಿಕ್ಷಕರು ಭಾಗವಹಿಸಿದ್ದರು.