ಎಚ್.ಮಲ್ಲಿಗೆರೆಯ ಬಿಎಲ್‌ಎಸ್ ಪ್ರೌಢ ಶಾಲಾ ವಾರ್ಷಿಕೋತ್ಸವ

| Published : Feb 02 2025, 11:48 PM IST

ಎಚ್.ಮಲ್ಲಿಗೆರೆಯ ಬಿಎಲ್‌ಎಸ್ ಪ್ರೌಢ ಶಾಲಾ ವಾರ್ಷಿಕೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ಶಾಲಾ ವಿದ್ಯಾರ್ಥಿಗಳಲ್ಲಿ ಪ್ರತಿಭೆ ಇದ್ದು ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಪ್ರತಿಭಾ ಕಾರಂಜಿ ಕ್ರೀಡಾಕೂಟ ಸೇರಿದಂತೆ ಹಲವು ಕಾರ್ಯಕ್ರಮದಲ್ಲಿ ಆನಾವರಣ ಗೊಂಡಿದೆ. ಮನಸ್ಸು ಉಲ್ಲಾಸವಾಗಿದ್ದು ಓದಲು ಪೂರಕ ವಾತಾವರಣ ನಿರ್ಮಾಣವಾಗುವುದು. ಪರೀಕ್ಷೆಗೂ ಕೂಡ ಉತ್ತಮ ತಯಾರಿ ನಡೆಸಿ.

ಕನ್ನಡಪ್ರಭ ವಾರ್ತೆ ಮಂಡ್ಯ

ತಾಲೂಕಿನ ಎಚ್.ಮಲ್ಲಿಗೆರೆ ಗ್ರಾಮದ ಬಿ.ಎಲ್.ಎಸ್.ಪ್ರೌಢ ಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ಶನಿವಾರ ಸಂಜೆ ಜರುಗಿತು.

ಕಾರ್ಯಕ್ರಮ ಉದ್ಘಾಟನೆ ಮಾಡಿದ ಮಂಡ್ಯ ಉತ್ತರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಟಿ.ಸೌಭಾಗ್ಯ ಮಾತನಾಡಿ, ಶಾಲಾ ವಿದ್ಯಾರ್ಥಿಗಳಲ್ಲಿ ಪ್ರತಿಭೆ ಇದ್ದು ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಪ್ರತಿಭಾ ಕಾರಂಜಿ ಕ್ರೀಡಾಕೂಟ ಸೇರಿದಂತೆ ಹಲವು ಕಾರ್ಯಕ್ರಮದಲ್ಲಿ ಆನಾವರಣ ಗೊಂಡಿದೆ. ಮನಸ್ಸು ಉಲ್ಲಾಸವಾಗಿದ್ದು ಓದಲು ಪೂರಕ ವಾತಾವರಣ ನಿರ್ಮಾಣವಾಗುವುದು. ಪರೀಕ್ಷೆಗೂ ಕೂಡ ಉತ್ತಮ ತಯಾರಿ ನಡೆಸಿ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಕಾರ್ತಿಕ್ ಎಂ.ಎಸ್ ವಹಿಸಿದ್ದರು. ಇದೇ ಸಂದರ್ಭದಲ್ಲಿ ಸಂಸ್ಥಾಪಕ ಅಧ್ಯಕ್ಷರ ಆಶಯದಂತೆ ಇಬ್ಬರು ವೃದ್ಧ ಕೃಷಿಕರು, ಕಳೆದ ಎರಡು ವರ್ಷಗಳ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ವರ್ಷ, ಚೈತ್ರ ಹಾಗೂ ಹಿರಿಯ ವಿದ್ಯಾರ್ಥಿ ಅಜಯ್ ರನ್ನು ಸನ್ಮಾನಿಸಲಾಯಿತು,

ಮುಖ್ಯ ಅತಿಥಿಗಳಾಗಿ ದೊಡ್ಡಬೋಗೆಗೌಡ, ಸಂಸ್ಥೆ ಕಾರ್ಯದರ್ಶಿ ಎಂ.ಎಸ್. ಚಿರಂಜೀವಿ, ಮಲ್ಲಿಗೆರೆ ಗ್ರಾಮದ ನಾಗರಾಜು, ಕೃಷ್ಣಪ್ಪ, ಅರುಣ ಆರಾಧ್ಯ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಸಂಘಟನಾ ಕಾರ್ಯದರ್ಶಿ ಕೆ.ಆರ್.ಶಶಿಧರ ಈಚಗೆರೆ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಕಾರ್ಯದರ್ಶಿ ಗೋವಿಂದ ಕೆ.ಸಿ, ಉಪಾಧ್ಯಕ್ಷ ಜೆ.ಯತಿರಾಜ್, ಖಜಾಂಚಿ ರಾಮಕೃಷ್ಣ, ಸಂಘಟನಾ ಕಾರ್ಯದರ್ಶಿ ಎನ್.ಜಿ. ಅಶೋಕ್, ಮುಖ್ಯ ಶಿಕ್ಷಕರ ಸಂಘದ ಉಪಾಧ್ಯಕ್ಷ ರವೀಂದ್ರ ಸಿಂಗ್, ಖಜಾಂಚಿ ಜಯಚಂದ್ರ, ಶಿಕ್ಷಣ ಸಂಯೋಜಕರಾದ ಎ.ಎನ್.ಚಂದ್ರಪ್ಪ, ಶಶಿಧರ, ಎಚ್ ಮಲ್ಲಿಗೆರೆ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಶಿವರಾಮು, ಪರಿಸರ ಮಿತ್ರ ಜಯಶಂಕರ್, ಸುತ್ತಮುತ್ತಲಿನ ಗ್ರಾಮಸ್ಥರು, ಶಾಲಾ ಶಿಕ್ಷಕ ವೃಂದ, ಪೋಷಕರುಗಳು ಭಾಗವಹಿಸಿದ್ದರು.

ಸ್ವಾಗತವನ್ನು ಶಾಲೆಯ ಮುಖ್ಯ ಶಿಕ್ಷಕರಾದ ಎಂ.ಲಿಂಗರಾಜು, ನಿರೂಪಣೆಯನ್ನು ಶಾಲೆಯ ವಿಜ್ಞಾನ ಶಿಕ್ಷಕರಾದ ಎನ್ . ಗೋಪಿನಾಥ್, 10ನೇ ತರಗತಿ ವಿದ್ಯಾರ್ಥಿನಿಯರಾದ ಕುಮಾರಿ ಪ್ರಾರ್ಥನಾ, ಕುಮಾರಿ ಕವನ ನಡೆಸಿಕೊಟ್ಟರು, ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.

ಮಾಚಿದೇವ ಸಮಾಜದ ಶ್ರೇಷ್ಠ ವಜನಾಕಾರರಲ್ಲಿ ಒಬ್ಬರು: ಚೈತ್ರ

ಶ್ರೀರಂಗಪಟ್ಟಣ

ಮಾಚಿದೇವ ಸಮಾಜದ ಶ್ರೇಷ್ಠ ವಚನಕಾರರಲ್ಲಿ ಮಡಿವಾಳ ಮಾಚಿದೇವರು ಒಬ್ಬರು ಎಂದು ಉಪ ತಹಸೀಲ್ದಾರ್ ಚೈತ್ರ ಸ್ಮರಿಸಿದರು.

ಪಟ್ಟಣದ ತಾಲೂಕು ಕಚೇರಿ ಸಭಾಂಗಣಲ್ಲಿ ತಾಲೂಕು ಆಡಳಿತ ವತಿಯಿಂದ ಏರ್ಪಡಿಸಿದ್ದ ಮಡಿವಾಳ ಮಾಚಿದೇವರ ಜಯಂತಿಯಲ್ಲಿ ಮಡಿವಾಳ ಮಾಚಿದೇವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.

12ನೇ ಶತಮಾನದ ಮಡಿವಾಳ ಮಾಚಿದೇವ ಆದ್ಯ ವಚನಕಾರರು. ಅವರೊಬ್ಬ ವಚನಗಳ ಸಂರಕ್ಷಕ. ಇಂತಹ ಮಹಾನ್ ವ್ಯಕ್ತಿಗಳ ತತ್ವಾದರ್ಶಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಪುರಸಭಾ ಸದಸ್ಯ ಎಸ್.ಪ್ರಕಾಶ್ ಸೇರಿದಂತೆ ಸಮುದಾಯದ ಮುಖಂಡರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.