ಹಲಗೂರು ಹೋಬಳಿಯ ನಂಜಾಪುರ ಗ್ರಾಮದ ಮಹದೇವು ಅವರ ಜಮೀನಿನಲ್ಲಿ ಬುಧವಾರ ರಾತ್ರಿ ಸುಮಾರು 8 ಅಡಿ ಉದ್ದ, 30 ಕೆಜಿ ತೂಕದ ಹೆಬ್ಬಾವು ಪತ್ತೆಯಾಗಿದೆ.
ಹಲಗೂರು:
ನಂಜಾಪುರ ಗ್ರಾಮದ ಮಹದೇವು ಅವರ ಜಮೀನಿನಲ್ಲಿ ಬುಧವಾರ ರಾತ್ರಿ ಸುಮಾರು 8 ಅಡಿ ಉದ್ದ, 30 ಕೆಜಿ ತೂಕದ ಹೆಬ್ಬಾವು ಪತ್ತೆಯಾಗಿದೆ.ವಿಷಯ ತಿಳಿದು ಸ್ಥಳಕ್ಕೆ ಬಂದ ಉರಗ ತಜ್ಞರಾದ ಜಗದೀಶ್ ಮತ್ತು ಕೃಷ್ಣ ಹೆಬ್ಬಾವನ್ನು ಹಿಡಿದು ಸುರಕ್ಷಿತವಾಗಿ ಮುತ್ತತ್ತಿ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ.ಮಹಾದೇವ ಅವರು ತನ್ನ ಜಮೀನಿನಲ್ಲಿ ಬುಧವಾರ ರಾತ್ರಿ ಭಾರಿ ಗಾತ್ರದ ಹೆಬ್ಬಾವು ಕಾಣಿಸಿಕೊಂಡ ತಕ್ಷಣ ಅರಣ್ಯ ಇಲಾಖೆ ಮತ್ತು ಉರಗ ತಜ್ಞರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ತಕ್ಷಣ ಬಂದ ಉರಗರು ಸುರಕ್ಷಿತವಾಗಿ ಅದನ್ನು ಹಿಡಿದು ಮುತ್ತತ್ತಿ ಅರಣ್ಯಪ್ರದೇಶಕ್ಕೆ ಸುರಕ್ಷಿತವಾಗಿ ಬಿಟ್ಟಿದ್ದಾರೆ.
ಈ ವೇಳೆ ಜಗದೀಶ್ ಮಾತನಾಡಿ, ಹಲಗೂರು ಹೋಬಳಿ ವ್ಯಾಪ್ತಿಯಲ್ಲಿ ಇತ್ತೀಚೆಗೆ ಹೆಚ್ಚಾಗಿ ಹೆಬ್ಬಾವುಗಳು ಕಾಣಿಸಿಕೊಳ್ಳುತ್ತಿದ್ದು, ಅವುಗಳು ರೈತರು ಸಾಕಿದ ಆಡು, ಕುರಿ, ಮೇಕೆ ಮತ್ತು ಇತರೆ ಪ್ರಾಣಿಗಳನ್ನು ಮೊದಲು ಕಾಲನ್ನು ಹಿಡಿದು ನಂತರ ಅದನ್ನು ಸುತ್ತಿಕೊಂಡು ಅದರ ಪ್ರಾಣ ಹೋದ ನಂತರ ನುಂಗುತ್ತದೆ ಎಂದರು.ಆಹಾರದ ಕೊರತೆಯಿಂದ ಅವುಗಳು ಜಮೀನಿನ ಹತ್ತಿರ ಹೆಚ್ಚು ಓಡಾಡುತ್ತಿವೆ. ಇದುವರೆಗೂ 12 ರಿಂದ 13 ಹೆಬ್ಬಾವುಗಳನ್ನು ಸುರಕ್ಷಿತವಾಗಿ ಹಿಡಿದು ಅರಣ್ಯ ಇಲಾಖೆಯವರ ಸಮ್ಮುಖದಲ್ಲಿ ಅರಣ್ಯ ಪ್ರದೇಶಕ್ಕೆ ಬಿಟ್ಟಿರುತ್ತೇನೆ. ನಾಗರಹಾವು, ಕೇರೆ ಹಾವು ಅಥವಾ ಇನ್ಯಾವುದೇ ತರದ ಹಾವುಗಳು ಇದ್ದರೂ ಸಹ ಅವುಗಳನ್ನು ಸಾಯಿಸಬಾರದು. ನಮಗೆ ವಿಷಯ ತಿಳಿಸಿದ ತಕ್ಷಣ ನಾವು ಬಂದು ಯಾವುದೇ ಸಂಭಾವನೆ ಪಡೆಯದೆ ಸುರಕ್ಷಿತವಾಗಿ ಹಾವುಗಳನ್ನು ಹಿಡಿದು ಕಾಡಿಗೆ ಬಿಡುತ್ತೇವೆ. ದೂರವಾಣಿ ಸಂಖ್ಯೆ ಜಗದೀಶ್ - 8431500189, ಕೃಷ್ಣ - 9686955795 ಅವರಿಗೆ ಕರೆ ಮಾಡುವಂತೆ ಮನವಿ ಮಾಡಿದರು.
ಜಮೀನಿನ ಮಾಲೀಕರಾದ ಮಹಾದೇವ ಮಾತನಾಡಿ, ನಾವು ರಾತ್ರಿ ಹಗಲು ಎನ್ನದೆ ಜಮೀನಿನಲ್ಲಿ ನೀರು ಹಾಯಿಸಿ ವ್ಯವಸಾಯ ಮಾಡಿಕೊಂಡು ಜೀವನ ನಡೆಸುತಿದ್ದೇವೆ. ಎಂದಿನಂತೆ ಬುಧವಾರ ರಾತ್ರಿ ಜಮೀನಿಗೆ ನೀರು ಹಾಯಿಸಲು ಬಂದಾಗ ಹೆಬ್ಬಾವುಕಂಡು ತುಂಬಾ ಭಯಪಟ್ಟಿದ್ದೇನೆ. ಇತ್ತೀಚೆಗೆ ಚಿರತೆ ಹಾವಳಿಯು ಹೆಚ್ಚಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.