ಕನ್ನಡದ ಅಸ್ಮಿತೆಯನ್ನು ಉಳಿಸಲು ‘ಶಿವಾನುಭವ’ ಪತ್ರಿಕೆ ವಚನ ಸಾಹಿತ್ಯದ ಅಧ್ಯಯನ, ಸಂಶೋಧನೆ ಮತ್ತು ಪ್ರಸಾರಕ್ಕೆ ಪ್ರಮುಖ ವೇದಿಕೆಯಾಗಿ ಬೆಳೆದಿದ್ದು, ಫ.ಗು.ಹಳಕಟ್ಟಿಯವರ ಕೊಡುಗೆ ವಚನ ಸಾಹಿತ್ಯದ ಪುನರುಜ್ಜೀವನದಲ್ಲಿ ಮಹತ್ವದ ಅಧ್ಯಾಯವಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ನುಡಿದರು.
ಕನ್ನಡಪ್ರಭ ವಾರ್ತೆ ಬಸವಕಲ್ಯಾಣಕನ್ನಡದ ಅಸ್ಮಿತೆಯನ್ನು ಉಳಿಸಲು ‘ಶಿವಾನುಭವ’ ಪತ್ರಿಕೆ ವಚನ ಸಾಹಿತ್ಯದ ಅಧ್ಯಯನ, ಸಂಶೋಧನೆ ಮತ್ತು ಪ್ರಸಾರಕ್ಕೆ ಪ್ರಮುಖ ವೇದಿಕೆಯಾಗಿ ಬೆಳೆದಿದ್ದು, ಫ.ಗು.ಹಳಕಟ್ಟಿಯವರ ಕೊಡುಗೆ ವಚನ ಸಾಹಿತ್ಯದ ಪುನರುಜ್ಜೀವನದಲ್ಲಿ ಮಹತ್ವದ ಅಧ್ಯಾಯವಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ನುಡಿದರು.ಬಸವಕಲ್ಯಾಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗ್ರಂಥ ಲೋಕಾರ್ಪಣೆ ಮತ್ತು ಆಶಯ ನುಡಿಗಳನ್ನಾಡಿ ವಚನ ಸಾಹಿತ್ಯಕ್ಕಾಗಿ ವೈಯಕ್ತಿಕ ಸುಖ ಸಂಪತ್ತಿಗಿಂತ ಸಮಾಜದ ಜ್ಞಾನಸಂಪತ್ತಿಗೆ ಆದ್ಯತೆ ನೀಡಿದ ಹಳಕಟ್ಟಿಯವರ ಬದುಕು ಇಂದಿನ ಪೀಳಿಗೆಗೆ ಸಾಹಿತ್ಯ ನಿಷ್ಠೆ, ತ್ಯಾಗ, ಸಂಶೋಧನಾ ಮನೋಭಾವ ಮತ್ತು ಕನ್ನಡಾಭಿಮಾನದ ಪ್ರೇರಣೆಯಾಗಿದೆ ಎಂದರು.ವಿಧಾನ ಪರಿಷತ್ ಸದಸ್ಯ ಎಂ.ಜಿ.ಮೂಳೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಚನ ಸಾಹಿತ್ಯಕ್ಕಾಗಿ ಮನೆ ಮಾರಿ ‘ಶಿವಾನುಭವ’ ಪತ್ರಿಕೆ ನಡೆಸಿದ ಫ.ಗು.ಹಳಕಟ್ಟಿ ವಚನ ಸಾಹಿತ್ಯದ ಸಂರಕ್ಷಣೆ, ಸಂಗ್ರಹ ಮತ್ತು ಪ್ರಸಾರಕ್ಕಾಗಿ ತಮ್ಮ ವೈಯಕ್ತಿಕ ಸಂಪತ್ತನ್ನೇ ತ್ಯಾಗ ಮಾಡಿದ್ದ ಸೇವೆ ಕನ್ನಡ ಸಾಹಿತ್ಯ ಲೋಕದಲ್ಲಿ ವಿಶಿಷ್ಟವಾಗಿದೆ ಎಂದರು.ಬಸವರಾಜ ಧನ್ನೂರ ಮಾತನಾಡಿ, ವಚನ ಸಾಹಿತ್ಯದ ಸಂಗ್ರಹ ಪ್ರಚಾರಕ್ಕಾಗಿ ತಮ್ಮ ಮನೆಯನ್ನೇ ಮಾರಾಟ ಮಾಡಿ ಆರ್ಥಿಕ ಸಂಪನ್ಮೂಲ ಒದಗಿಸಿಕೊಂಡರು ಎಂಬುದು ಅವರ ಸಾಹಿತ್ಯ ನಿಷ್ಠೆ ಮತ್ತು ತ್ಯಾಗಕ್ಕೆ ಸಾಕ್ಷಿಯಾಗಿದೆ ಎಂದರು.
ಬಸವಕಲ್ಯಾಣ ಅನುಭವ ಮಂಟಪದ ಅಧ್ಯಕ್ಷರಾದ ಪೂಜ್ಯ ನಾಡೋಜ ಬಸವಲಿಂಗ ಪಟ್ಟದೇವರು ಸಾನ್ನಿಧ್ಯ ವಹಿಸಿ ಮಾತನಾಡಿ, ಶಿವಾನುಭವ’ ಪತ್ರಿಕೆ ವಚನ ಸಾಹಿತ್ಯದ ಅಧ್ಯಯನ, ಸಂಶೋಧನೆ ಮತ್ತು ಪ್ರಸಾರಕ್ಕೆ ಪ್ರಮುಖ ವೇದಿಕೆಯಾಗಿ ಬೆಳೆದಿದ್ದು, ಫ.ಗು.ಹಳಕಟ್ಟಿಯವರ ಕೊಡುಗೆ ವಚನ ಸಾಹಿತ್ಯದ ಪುನರುಜ್ಜೀ ವನದಲ್ಲಿ ಮಹತ್ವದ ಅಧ್ಯಾಯವಾಗಿದೆ ಎಂದರು.ಕಾರ್ಯಕ್ರಮದಲ್ಲಿ ಪೂಜ್ಯ ಶಿವಾನಂದ ಸ್ವಾಮಿ ಹುಲಸೂರು. ಪೂಜ್ಯ ಗುರುಬಸವ ಪಟ್ಟದೇವರು ಭಾಲ್ಕಿ ನೇತೃತ್ವ ವಹಿಸಿದರು. ಶಾಂತಗೌಡ ಬಿರಾದಾರ ತಹಸೀ ಲ್ದಾರರು ಬಿಕೆಡಿಬಿ, ಬಸವಕಲ್ಯಾಣ ಅಧ್ಯಕ್ಷತೆ ವಹಿಸಿದರು. ಮುಖ್ಯ ಅತಿಥಿಗಳಾಗಿ ವಿರೋಪಣ್ಣ ಕಲ್ಲೂರ, ಸಂತೋಷ ಹಾನಗಲ್ಲ, ಬಾಬು ವಾಲಿ, ಸುರೇಶ, ಚನ್ನಶೇಟ್ಟಿ, ಕುಪೇಂದ್ರ ಪಾಟೀಲ ಹೊಸಪೇಟೆಯ ಹಿರಿಯ ಸಂಶೋಧಕ, ಡಾ.ಕೆ.ರವೀಂದ್ರನಾಥ, ಡಾ.ಭೀಮಶಂಕರ ಬಿರಾದಾರ, ರಾಜು ಜುಬರೆ, ಅಶೋಕ ಕುಂಬಾರ ಇದ್ದರು.
--ಚಿತ್ರ 4ಬಿಡಿಆರ್58:ಬಸವಕಲ್ಯಾಣದ ಅನುಭವ ಮಂಟಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಗ್ರಂಥ ಬಿಡುಗಡೆ ಮಾಡಿದರು.