ಸಮಾಜಕ್ಕೆ ಹಳಕಟ್ಟಿಯವರ ಕೊಡುಗೆ ಅಪಾರ: ದೇಸಾಯಿ

| Published : Jul 03 2024, 12:19 AM IST

ಸಾರಾಂಶ

ಸಿಂಧನೂರಿನ ಮಿನಿ ವಿಧಾನಸೌಧ ಕಚೇರಿಯಲ್ಲಿ ತಾಲೂಕಾಡಳಿತ ವತಿಯಿಂದ ಮಂಗಳವಾರ ಡಾ.ಫ.ಗು. ಹಳಕಟ್ಟಿಯವರ ಜಯಂತಿ ಆಚರಣೆಯಲ್ಲಿ ತಹಸೀಲ್ದಾರ್ ಅರುಣ್ ಎಚ್.ದೇಸಾಯಿ ಮಾತನಾಡಿದರು.

ಸಿಂಧನೂರು: ಫಕೀರಪ್ಪ ಹಳಕಟ್ಟಿಯವರು ವಚನಗಳ ಸಂಗ್ರಹ ಮತ್ತು ಸಮಾಜಕ್ಕೆ ನೀಡಿದ ಕೊಡುಗೆಗಳು ಅಪಾರ. ಸಿದ್ದೇಶ್ವರ ಬ್ಯಾಂಕ್ ಸ್ಥಾಪನೆ, ನಗರಸಭಾ ಅಧ್ಯಕ್ಷರಾಗಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ್ದಾರೆ ಎಂದು ತಹಸೀಲ್ದಾರ್ ಅರುಣ್ ಎಚ್.ದೇಸಾಯಿ ಹೇಳಿದರು.

ನಗರದ ಮಿನಿವಿಧಾನಸೌಧ ಕಚೇರಿಯಲ್ಲಿ ತಾಲೂಕಾಡಳಿತ ವತಿಯಿಂದ ಮಂಗಳವಾರ ಡಾ.ಫ.ಗು. ಹಳಕಟ್ಟಿಯವರ ಜಯಂತಿ ಆಚರಣೆಯ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಆಚರಿಸಲಾಯಿತು. ಈ ವೇಳೆ ಅವರು ಮಾತನಾಡಿದರು.

ಬಸವಕೇಂದ್ರದ ಜಿಲ್ಲಾ ಘಟಕದ ಅಧ್ಯಕ್ಷ ಪಿ.ವೀರಭದ್ರಪ್ಪ ಕುರಕುಂದಿ, ತಾಲೂಕು ಘಟಕದ ಅಧ್ಯಕ್ಷ ಕರೇಗೌಡ ಕುರಕುಂದಿ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪಂಪಯ್ಯಸ್ವಾಮಿ ಸಾಲಿಮಠ, ನಿರುಪಾದೆಪ್ಪ ಗುಡಿಹಾಳ ವಕೀಲ, ನಗರಸಭೆ ಮಾಜಿ ಅಧ್ಯಕ್ಷ ಶರಣಪ್ಪ ತೆಂಗಿನಕಾಯಿ, ಹಿರಿಯ ಉಪನೋಂದಣಾಧಿಕಾರಿ ಶ್ರೀನಿವಾಸ ಭಂಗಿ, ಕಂದಾಯ ನಿರೀಕ್ಷಕ ಲಿಂಗರಾಜ ಇದ್ದರು.