ಹಳೇ ಉಂಡವಾಡಿ ನೀರು ಸರಬರಾಜು ಯೋಜನೆ ಕಾಮಗಾರಿ ಪರಿಶೀಲಿಸಿದ ವಿನಯ್ ಕುಲಕರ್ಣಿ

| Published : Feb 13 2024, 12:49 AM IST / Updated: Feb 13 2024, 04:35 PM IST

ಹಳೇ ಉಂಡವಾಡಿ ನೀರು ಸರಬರಾಜು ಯೋಜನೆ ಕಾಮಗಾರಿ ಪರಿಶೀಲಿಸಿದ ವಿನಯ್ ಕುಲಕರ್ಣಿ
Share this Article
  • FB
  • TW
  • Linkdin
  • Email

ಸಾರಾಂಶ

ಹಳೇ ಉಂಡವಾಡಿ ಸಮೀಪ ನಿರ್ಮಿಸುತಿರುವ ಮೂಲಸ್ಥಾವರ, ಮೇಗಳಾಪುರ ಸಮೀಪ ನಿರ್ಮಿಸುತ್ತಿರುವ 150 ಎಂಎಲ್ ಡಿ, ಜಲ ಶುಧ್ಧೀಕರಣ ಘಟಕ ಮತ್ತು ಕೊಳವೆ ಮಾರ್ಗ ಕಾಮಗಾರಿಗಳನ್ನು ಪರಿಶೀಲಿಸಿ, ಕಾಮಗಾರಿಗಳ ಪ್ರಗತಿ ಕುರಿತು ಅಧಿಕಾರಿಗಳೊಡನೆ ಚರ್ಚಿಸಿದರು.

ಕನ್ನಡಪ್ರಭ ವಾರ್ತೆ ಮೈಸೂರು

ಮೈಸೂರು ತಾಲೂಕು ಹಳೇ ಉಂಡವಾಡಿ ಗ್ರಾಮದ ಬಳಿ ಕಾವೇರಿ ನದಿ ಮೂಲದಿಂದ ಮೈಸೂರು ನಗರ, ಮೈಸೂರು ನಗರಾಭಿವೃದ್ದಿ ಪ್ರಾಧಿಕಾರ ಹಾಗೂ ಮೈಸೂರು ಸ್ಥಳೀಯ ಯೋಜನಾ ಪ್ರದೇಶದ ವ್ಯಾಪ್ತಿಯಲ್ಲಿ ಮತ್ತು ವ್ಯಾಪ್ತಿಯ ಹೊರಗೆ ಬರುವ ಗ್ರಾಮಗಳಿಗೆ ಕುಡಿಯುವ ಸಗಟು ನೀರು ಸರಬರಾಜು ಯೋಜನೆಯ ಕಾಮಗಾರಿಯನ್ನು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷರಾದ ಶಾಸಕ ವಿನಯ್ ಕುಲಕರ್ಣಿ ಪರಿಶೀಲಿಸಿದರು.

ಹಳೇ ಉಂಡವಾಡಿ ಸಮೀಪ ನಿರ್ಮಿಸುತಿರುವ ಮೂಲಸ್ಥಾವರ, ಮೇಗಳಾಪುರ ಸಮೀಪ ನಿರ್ಮಿಸುತ್ತಿರುವ 150 ಎಂಎಲ್ ಡಿ, ಜಲ ಶುಧ್ಧೀಕರಣ ಘಟಕ ಮತ್ತು ಕೊಳವೆ ಮಾರ್ಗ ಕಾಮಗಾರಿಗಳನ್ನು ಪರಿಶೀಲಿಸಿ, ಕಾಮಗಾರಿಗಳ ಪ್ರಗತಿ ಕುರಿತು ಅಧಿಕಾರಿಗಳೊಡನೆ ಚರ್ಚಿಸಿದರು.

ಪ್ರಗತಿಯಲ್ಲಿರುವ ಕಾಮಗಾರಿಗಳು ಬಹುತೇಕ ಪೂರ್ಣಗೊಂಡಿದ್ದು, ಯೋಜನೆ ಚಾಲನೆಗೊಳಿಸಲು ಅಗತ್ಯವಿರುವ 66 ಕೆ.ವಿ. ನಿರಂತರ ವಿದ್ಯುತ್ ಸರಬರಾಜು ಮಾರ್ಗ ಅಳವಡಿಸಲು ಇಲಾಖೆ ವತಿಯಂದ ಈಗಾಗಲೇ ಟೆಂಡರ್ ಕರೆಯಲಾಗಿದೆ. 

ಯೋಜನೆಯನ್ನು ಮುಂದಿನ ಒಂದು ವರ್ಷದ ಅವಧಿಯೊಳಗೆ ಎಲ್ಲಾ ರೀತಿಯಲ್ಲೂ ಪೂರ್ಣಗೊಳಿಸಿ ಯೋಜನೆಯ ಫಲಾನುಭವಿಗಳಾದ ನಗರ ಪಾಲಿಕೆ, ಎಂಡಿಎ, ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ ಹಾಗೂ ಕರ್ನಾಟಕ ಗೃಹ ಮಂಡಳಿ ವ್ಯಾಪ್ತಿಯ ಸಾರ್ವಜನಿಕ ಉಪಯೋಗಕ್ಕೆ ನೀಡುವುದಾಗಿ ಅವರು ತಿಳಿಸಿದರು.