ಸಾರಾಂಶ
2024-25ನೇ ಸಾಲಿನಲ್ಲಿ 351 ಕೋಟಿ ರುಪಾಯಿಗಳ ವಹಿವಾಟು, ಶೇ.98.5 ಸಾಲ ವಸೂಲಾತಿ, 30 ಕೋಟಿ ನಿರಖು ಠೇವಣಿ ಹೊಂದಿದ್ದು, ಒಟ್ಟು 20 ಸಿಬ್ಬಂದಿಯನ್ನು ಹೊಂದಿದೆ. ಈ ಸೊಸೈಟಿಯು ಈ ಬಾರಿ ಶೇ.8ರ ದರದಲ್ಲಿ ಪಾಲು ಮುನಾಪೆಯನ್ನು ಸದಸ್ಯರಿಗೆ ಹಂಚಿದ್ದು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ.
ಕನ್ನಡಪ್ರಭ ವಾರ್ತೆ ಮೂಲ್ಕಿ
ಹಳೆಯಂಗಡಿಯ ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿಯ 2024-25ನೇ ಸಾಲಿನ ಸಾಧನೆ ಮತ್ತು ಕಾರ್ಯ ವೈಖರಿ ಗುರುತಿಸಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ‘ವಿಶಿಷ್ಟ ಸಾಧನಾ ಪ್ರಶಸ್ತಿ’ ನೀಡಿದ್ದು, ಮಂಗಳೂರಿನ ಕೇಂದ್ರ ಕಚೇರಿಯಲ್ಲಿ ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷರು ಮತ್ತು ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಅವರನ್ನು ಗೌರವಿಸುವ ಮೂಲಕ ಕೇಂದ್ರ ಬ್ಯಾಂಕಿನ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಪ್ರಶಸ್ತಿ ಪ್ರದಾನ ಮಾಡಿದರು.2024-25ನೇ ಸಾಲಿನಲ್ಲಿ 351 ಕೋಟಿ ರುಪಾಯಿಗಳ ವಹಿವಾಟು, ಶೇ.98.5 ಸಾಲ ವಸೂಲಾತಿ, 30 ಕೋಟಿ ನಿರಖು ಠೇವಣಿ ಹೊಂದಿದ್ದು, ಒಟ್ಟು 20 ಸಿಬ್ಬಂದಿಯನ್ನು ಹೊಂದಿದೆ. ಈ ಸೊಸೈಟಿಯು ಈ ಬಾರಿ ಶೇ.8ರ ದರದಲ್ಲಿ ಪಾಲು ಮುನಾಪೆಯನ್ನು ಸದಸ್ಯರಿಗೆ ಹಂಚಿದ್ದು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ.
ಪ್ರಶಸ್ತಿಯನ್ನು ಸಂಘದ ಅಧ್ಯಕ್ಷರಾದ ಎಚ್. ವಸಂತ ಬರ್ನಾಡ್, ಮುಖ್ಯ ಕಾರ್ಯನಿರ್ಧಿಕಾರಿ ಸುದರ್ಶನ್ ಹಾಗೂ ನಿರ್ದೇಶಕರಾದ ಉಮಾನಾಥ ಜೆ. ಶೆಟ್ಟಿಗಾರ್ ಸ್ವೀಕರಿಸಿದರು.ಕಾರ್ಯಕ್ರಮದಲ್ಲಿ ಡಿಸಿಸಿ ಬ್ಯಾಂಕಿನ ಉಪಾಧ್ಯಕ್ಷರಾದ ವಿನಯಕುಮಾರ್ ಸೂರಿಂಜೆ, ನಿರ್ದೇಶಕರಾದ ಡಾ.ದೇವಿಪ್ರಸಾದ್ ಶೆಟ್ಟಿ, ಮೋನಪ್ಪ ಶೆಟ್ಟಿ ಎಕ್ಕಾರು, ಬಡಗಬೆಟ್ಟು ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷರಾದ ಇಂದ್ರಾಲಿ ಜಯಕರ್ ಶೆಟ್ಟಿ ಮತ್ತಿತರರಿದ್ದರು.