ಪೇಠಾಆಲೂರು ಹಾಲೇಶ್ವರ ಜಾತ್ರಾ ಮಹೋತ್ಸವ

| Published : Apr 11 2025, 12:36 AM IST

ಸಾರಾಂಶ

ಹೋಬಳಿಯ ಪೇಠಾಆಲೂರ ಗ್ರಾಮದ ಹಾಲೇಶ್ವರ ೪೭ನೇ ಜಾತ್ರಾ ಮಹೋತ್ಸವ ನಿಮಿತ್ತ ಏ.11ರಂದು ಮುಂಜಾನೆ 6 ಗಂಟೆಗೆ ಮಲ್ಲಯ್ಯ ಶಿವಯ್ಯ ಹಿರೇಮಠ ಅವರಿಂದ ಹಾಲೇಶ್ವರ ಕತೃಗದ್ದುಗೆಗೆ ಹಾಗೂ ದುರ್ಗಾದೇವಿಯ ಮೂರ್ತಿಗೆ ರುದ್ರಾಭಿಷೇಕ ಜರುಗುವುದು.

ಡಂಬಳ: ಹೋಬಳಿಯ ಪೇಠಾಆಲೂರ ಗ್ರಾಮದ ಹಾಲೇಶ್ವರ ೪೭ನೇ ಜಾತ್ರಾ ಮಹೋತ್ಸವ ನಿಮಿತ್ತ ಏ.11ರಂದು ಮುಂಜಾನೆ 6 ಗಂಟೆಗೆ ಮಲ್ಲಯ್ಯ ಶಿವಯ್ಯ ಹಿರೇಮಠ ಅವರಿಂದ ಹಾಲೇಶ್ವರ ಕತೃಗದ್ದುಗೆಗೆ ಹಾಗೂ ದುರ್ಗಾದೇವಿಯ ಮೂರ್ತಿಗೆ ರುದ್ರಾಭಿಷೇಕ ಜರುಗುವುದು.

ಮಧ್ಯಾಹ್ನ 12.29 ಗಂಟೆಗೆ ಸಾಮೂಹಿಕ ವಿವಾಹಗಳು ಹಾಗೂ ಅನ್ನಸಂತರ್ಪಣೆ ಜರುಗಲಿದೆ. ರಾತ್ರಿ 10.35ಕ್ಕೆ ಶ್ರೀ ಹಾಲಶಿವಯೋಗಿಶ್ವರ ಅಡ್ಡಪಲ್ಲಕ್ಕಿ ಹಾಗೂ ಮುಳ್ಳುಗದ್ದುಗೆ ಉತ್ಸವ ಹಾಲೇಶ್ವರ ಶಿವಶರಣರಿಂದ ಜರುಗಲಿದೆ. ಏ.೧೨ರಂದು ಗ್ರಾಮದೇವತೆಗೆ ಉಡಿತುಂಬುವುದು. ಸಂಜೆ ೫.೩೦ಕ್ಕೆ ಹಾಲೇಶ್ವರ ಮಹಾರಥೋತ್ಸವ ಹಾಗೂ ಧರ್ಮಸಭೆ ಜರುಗಲಿದೆ. ರಾತ್ರಿ 7.30ಕ್ಕೆ ಮನೋಹರ ಮಲ್ಲಪ್ಪ ಕಡ್ಲಿಕೊಪ್ಪ ಹಾಗೂ ಈರಪ್ಪ ಮಹಾದೇವಪ್ಪ ಹೂಗಾರ ಬಂಧುಗಳಿಂದ ಹಾಲೇಶ್ವರ ಶರಣರಿಗೆ ನಾಣ್ಯಗಳ ತುಲಾಭಾರ ಜರುಗಲಿದೆ.

ಉಪನ್ಯಾಸವ ಪ್ರಾಚಾರ್ಯ ಎಸ್.ವಾಯ್. ಬಿಳಗಿ, ಡಾ.ಎಸ್.ಎಂ. ಮಠ ಅವರಿಂದ ಜರುಗಲಿದೆ. ಹಾಲಸೋಮೇಶ್ವರ ಹಿರಿಯ ಕನ್ನಡ ಪ್ರಾಥಮಿಕ ಶಾಲೆಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ. ಏ.13ರಂದು 1981ರಿಂದ 1992ರ ಸಾಲಿನ ಹಳೆಯ ವಿದ್ಯಾರ್ಥಿಗಳಿಂದ ಗುರುವಂದನಾ ಕಾರ್ಯಕ್ರಮ ಜರುಗಲಿದೆ. ಸಂಜೆ 6 ಗಂಟೆಗೆ ಲಘು ರಥೋತ್ಸವ ಜರುಗಲಿದೆ. ನಂತರ ಹುಬ್ಬಳ್ಳಿ ಕಲಾವಿದರಿಂದ ಮನರಂಜನೆ. ರೇವಣಸಿದ್ಧೇಶ್ವರ ನಾಟ್ಯ ಸಂಘದಿಂದ ಪೌರಾಣಿಕ ಬಯಲಾಟವಾದ ಐರಾವಣ ಮೈರಾವಣ ಬಯಲಾಟ ಜರುಗಲಿದೆ. ಎ.14ರಂದು ಗ್ರಾಮದೇವತೆಯನ್ನು ಚೌತಿಕಟ್ಟೆಯಿಂದ ಪೇಠಾಆಲೂರ ವೆಂಕಟಾಪೂರ, ಯಕ್ಲಾಸಾಪೂರ ಸುತ್ತಮುತ್ತಲಿನ ಭಕ್ತರ ಮೂಲಕ ಕಳಸ ಕನ್ನಡಿ ವಾದ್ಯಗಳ ಮೂಲಕ ದೇವಾಲಯದಲ್ಲಿ ಪ್ರತಿಷ್ಠಾಪಿಸಲಾಗುವುದು. ಜಾತ್ರಾ ಸಮಿತಿ ಅಧ್ಯಕ್ಷ, ಉಪಾಧ್ಯಕ್ಷ, ಸರ್ವಸದಸ್ಯರು, ಗ್ರಾಮ ಪಂಚಾಯತ ಅಧ್ಯಕ್ಷ, ಉಪಾಧ್ಯಕ್ಷ ಸರ್ವಸದಸ್ಯರಿಗೆ ಸನ್ಮಾನ ಜರಗುವುದು. ಸ್ತ್ರೀ ಶಕ್ತಿ ಸಂಘಗಳು, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಸರ್ವಸದಸ್ಯರು, ಕಾರ್ಮಿಕ ಸಮಿತಿ, ಭಜನಾ ಸಂಘ, ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಪಾಲ್ಗೊಳ್ಳಲಿದ್ದಾರೆ ಎಂದು ಜಾತ್ರಾ ಸಮಿತಿ ಪತ್ರಿಕಾ ಪ್ರಕಟಣೆ ತಿಳಿಸಿದೆ.