ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿಹಾಳಾದ ಅರ್ಧ ಮೊಣಕಾಲಿನ ಸಂಧು ಮಾತ್ರ ಬದಲಾವಣೆ ಮಾಡುವಲ್ಲಿ ಕೆಎಲ್‌ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆಯ ಎಲಬು ಕೀಲು ತಜ್ಞವೈದ್ಯರು ಯಶಸ್ವಿಯಾಗಿದ್ದಾರೆ.ಕಳೆದ 7 ವರ್ಷಗಳಿಂದ ತೀವ್ರ ಮೊಣಕಾಲು ನೋವಿನಿಂದ ಬಳಲುತ್ತಿದ್ದ 77 ವರ್ಷದ ವ್ಯಕ್ತಿಯನ್ನು ತಪಾಸಣೆಗೊಳ್ಪಡಿಸಿದಾಗ ಮೊಣಕಾಲಿನ ಸಂಧು ಅಂಟೋಮೆಡಿಯಲ್ ಸಂಧಿವಾತದ ಪರಿಣಾಮ ಕೇವಲ ಅರ್ಧ ಭಾಗ ಮಾತ್ರ ಹಾಳಾಗಿರುವುದನ್ನು ಕಂಡು ಹಿಡಿದರು. ಮೊಣಕಾಲಿನ ಸಂಧು ಬದಲಾವಣೆ ಮಾಡಬೇಕಾದರೇ ಸಂಪೂರ್ಣವಾಗಿ ತೆಗೆದು ಹೊಸದಾಗಿ ಹಾಕಬೇಕು. ಆದರೆ ರೋಗಿಯ ಅರ್ಧ ಮೊಣಕಾಲಿನ ಸಂಧು ಮಾತ್ರ ಬದಲಾವಣೆ ಮಾಡಿದ್ದಾರೆ.ಅರ್ಥೈರೈಟಿಸ ಕಾರಣದಿಂದ ವೃದ್ಧನ ಮೊಣಕಾಲಿನ ಸಂಧು ಅರ್ಧ ಮಾತ್ರ ಹಾಳಾಗಿತ್ತು. ಹಲವು ಆಸ್ಪತ್ರೆಗಳಿಗೆ ತೆರಳಿದರೂ ಕೂಡ ಸಂಪೂರ್ಣ ಮೊಣಕಾಲು ಸಂದು ಜೋಡಣೆ ಮಾಡುವುದು ಅನಿವಾರ್ಯ ಎಂದು ಹೇಳಿದ್ದರು. ಇದರಿಂದ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವಲ್ಲಿ ಹಿಂಜರಿಯುತ್ತಿದ್ದರು. ನಂತರ ಕೆಎಲ್‌ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆಯ ವೈದ್ಯರನ್ನು ಭೇಟಿಯಾದಾಗ ಮೊಣಕಾಲಿನ ಸಂಧು ಅಂಟೋಮೆಡಿಯಲ್ ಸಂಧಿವಾತದ ಪರಿಣಾಮ ಕೇವಲ ಅರ್ಧ ಭಾಗ ಮಾತ್ರ ಹಾಳಾಗಿರುವುದನ್ನು ಕಂಡು ಹಿಡಿದು ಡಾ.ಎಸ್.ವಿ.ಉದಪುಡಿ ಮಾರ್ಗದರ್ಶನದಲ್ಲಿ ಯುವ ವೈದ್ಯ ಡಾ.ನಿಖಿಲ್ ಮಾನ್ವಿ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರ ತಂಡವನ್ನು ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಹಾಗೂ ಆಡಳಿತ ಮಂಡಳಿ ಸದಸ್ಯರು, ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಎಂ.ದಯಾನಂದ ಅಭಿನಂದಿಸಿದ್ದಾರೆ.
ಕ್ಲಿಷ್ಟಕರ ಮತ್ತು ದೀರ್ಘವಾದ ಶಸ್ತ್ರಚಿಕಿತ್ಸೆ:4ನೇ ಹಂತದ ಸಂಧಿವಾತ ಹೊಂದಿರುವ ರೋಗಿಗಳಲ್ಲಿ ಕೇವಲ ಅರ್ಧಭಾಗ ಮಾತ್ರ ಸಂಧು ಹಾಳಾಗಿರುವುದು ಸಾಮಾನ್ಯವಾಗಿ ಕಂಡು ಬರುತ್ತದೆ. ಅಂತಹ ರೋಗಿಗಳಲ್ಲಿ ಪೂರ್ಣಪ್ರಮಾಣದಲ್ಲಿ ಮೊಣಕಾಲ ಸಂಧು ಬದಲಾವಣೆ ಮಾಡಬೇಕಾಗುತ್ತದೆ. ಆದರೆ, ಇಲ್ಲಿ ಹಾಳಾದ ಅರ್ಧ ಸಂಧು ತೆಗೆದು ಜೋಡಣೆ ಮಾಡಲಾಗಿದೆ. ಅತ್ಯಂತ ಕ್ಲಿಷ್ಟಕರ ಮತ್ತು ದೀರ್ಘವಾದ ಶಸ್ತ್ರಚಿಕಿತ್ಸೆಯಾಗಿದ್ದು, ಚಿಕ್ಕರಂದ್ರದ ಮೂಲಕ ನೆರವೇರಿಸಲಾಗಿದೆ. ಇದರಿಂದ ರೋಗಿಯು ವೇಗವಾಗಿ ಗುಣಮುಖಗೊಂಡು ನಡೆದಾಡಲು ಪ್ರಾರಂಭಿಸಿದರು.