ಕಿಡದಾಳ ಹಾಗೂ ಸುತ್ತಮುತ್ತಲ ಗ್ರಾಮದ ರೈತರು ಕಾರ್ಖಾನೆಗೆ ಭೂಮಿ ನೀಡಿದ್ದಾರೆ. ಕಾರ್ಖಾನೆ ಸ್ಥಾಪನೆಯಾದರೆ ಉದ್ಯೋಗಗಳು ಸೃಷ್ಠಿಯಾಗುತ್ತವೆ
ಕೊಪ್ಪಳ: ಬಿಎಸ್‌ಪಿಎಲ್‌ಕಾರ್ಖಾನೆ ಸ್ಥಾಪನೆ ಬೆಂಬಲಿಸಿ ಕೊಪ್ಪಳ ತಹಸೀಲ್ದಾರ್ ಕಚೇರಿ ಮುಂದೆ ಕಾರ್ಖಾನೆಗೆ ಭೂಮಿ ಕಳೆದುಕೊಂಡ ರೈತರ ಒಕ್ಕೂಟದಿಂದ ನಡೆಯುತ್ತಿರುವ ಅನಿರ್ಧಿಷ್ಠಾವಧಿ ಧರಣಿ ಸತ್ಯಾಗ್ರಹ ಮುಂದುವರೆದಿದೆ.
ಅನಿರ್ಧಿಷ್ಠಾವಧಿ ಧರಣಿ ಸತ್ಯಾಗ್ರಹದ ೧೩ನೇ ದಿನವಾದ ಬುಧವಾರ ಒಕ್ಕೂಟದ ಕಾರ್ಯಕರ್ತರು ಅರೆಬೆತ್ತಲೆ ಧರಣಿ ಸತ್ಯಾಗ್ರಹ ನಡೆಸುವ ಮೂಲಕ ಉದ್ದೇಶಿತ ಬಿಎಸ್‌ಪಿಎಲ್‌ಕಾರ್ಖಾನೆ ಸ್ಥಾಪಿಸಿ ಇಲ್ಲವೆ ಸರ್ಕಾರಿ ನೌಕರಿ ಕೊಡಿ ಎಂದು ಘೋಷಣೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.ಅರೆಬೆತ್ತಲೆ ಧರಣಿ ಸತ್ಯಾಗ್ರಹದಲ್ಲಿ ಮಾತನಾಡಿದ ಒಕ್ಕೂಟದ ಹನುಮಂತಪ್ಪ ಕೌದಿ, ಕೊಪ್ಪಳ, ಹಾಲವರ್ತಿ, ಕಿಡದಾಳ ಹಾಗೂ ಸುತ್ತಮುತ್ತಲ ಗ್ರಾಮದ ರೈತರು ಕಾರ್ಖಾನೆಗೆ ಭೂಮಿ ನೀಡಿದ್ದಾರೆ. ಕಾರ್ಖಾನೆ ಸ್ಥಾಪನೆಯಾದರೆ ಉದ್ಯೋಗಗಳು ಸೃಷ್ಠಿಯಾಗುತ್ತವೆ. ಭೂಮಿ ಕಳೆದುಕೊಂಡ ರೈತರ ಕುಟುಂಬಕ್ಕೆ ಉದ್ಯೋಗ ಸಿಗುತ್ತವೆ ಎಂಬ ಆಶಯದೊಂದಿಗೆ ಕಾರ್ಖಾನೆಗೆ ಭೂಮಿ ನೀಡಿದ್ದಾರೆ. ಈಗ ಬಿಎಸ್‌ಪಿಎಲ್ ಕೈಗಾರಿಕೆ ಸ್ಥಾಪನೆ ಮಾಡಲು ಮುಂದಾಗಿದ್ದು ಇದಕ್ಕೆ ಹಲವು ರೀತಿಯಲ್ಲಿ ವಿರೋಧ ವ್ಯಕ್ತವಾಗುತ್ತಿದೆ. ಆದರೆ ಕಾರ್ಖಾನೆಗೆ ಭೂಮಿ ಕಳೆದುಕೊಂಡು ಅತಂತ್ರ ಸ್ಥಿತಿಯಲ್ಲಿರುವ ರೈತರ ಕುಟುಂಬಗಳ ಪರಸ್ಥಿತಿ ಏನು? ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎಂಎಸ್‌ಪಿಎಲ್ ಹಾಗೂ ಬಿಎಸ್‌ಪಿಎಲ್‌ಕಾರ್ಖಾನೆಗೆ ಸುಮಾರು ೩೫೯ರೈತರು ಭೂಮಿ ಕಳೆದುಕೊಂಡಿದ್ದಾರೆ. ಕಾರ್ಖಾನೆಗೆ ಬಂದರೆ ಉದ್ಯೋಗ ಸೃಷ್ಠಿಯಾಗುತ್ತವೆ ಎಂಬ ಆಶಯದಿಂದ ರೈತರು ಭೂಮಿ ನೀಡಿದ್ದಾರೆ.೨೦ ವರ್ಷದ ಹಿಂದೆ ನಮ್ಮ ಭೂಮಿಯನ್ನು ಸರ್ಕಾರ ತೆಗೆದುಕೊಂಡಿದೆ. ಈ ಮೂಲಕ ನಮ್ಮ ಹಕ್ಕನ್ನು ಕಸಿದುಕೊಂಡಿದೆ. ಭೂಮಿ ಕಳೆದುಕೊಂಡಿರುವ ರೈತರಿಗೆ ಉದ್ಯೋಗ ಸಿಗಬೇಕಾದರೆ ಬಿಎಸ್‌ಪಿಎಲ್‌ಕಾರ್ಖಾನೆ ಸ್ಥಾಪಿಸಬೇಕು. ಈಗಾಗಲೇ ಭೂಮಿ ಕಳೆದುಕೊಂಡಿರುವ ರೈತರ ಮಕ್ಕಳು ಐಟಿಐ, ಡಿಪ್ಲೋಮಾ ಸೇರಿದಂತೆ ವಿವಿಧ ಕೋರ್ಸ್‌ಗಳ ಅಭ್ಯಾಸ ಮಾಡಿದ್ದಾರೆ. ಅವರಿಗೆ ಈಗ ಕೆಲಸವಿಲ್ಲ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ತ್ವರಿತಗತಿಯಲ್ಲಿ ಬಿಎಸ್ಪಿಎಲ್‌ಕೈಗಾರಿಕೆ ಸ್ಥಾಪನೆಗೆ ಅನುಮತಿ ನೀಡಬೇಕು. ಕಾರ್ಖಾನೆ ಸ್ಥಾಪಿಸದಿದ್ದರೆ ಸರ್ಕಾರಿ ನೌಕರಿ ಕೊಡಬೇಕು ಎಂದು ಒತ್ತಾಯಿಸಿದರು.ರೈತ ಮುಖಂಡರಾದ ಹನುಮೇಶ ಹಾಲವರ್ತಿ, ಪ್ರಾಣೇಶ ಹಾಲವರ್ತಿ, ಮನೋಜ ಹಾಲವರ್ತಿ, ಸ್ವಾಮಿ ಹಾಲವರ್ತಿ, ಹನುಮಂತ ಕೌದಿ, ದುರುಗಮ್ಮ ಬಾವಿಮನಿ, ಈರಪ್ಪ ಓಜನಹಳ್ಳಿ, ಬಸವರಾಜ ಹೊಸಮನಿ, ಕೇಮಪ್ಪ ಇಟಗಿ, ಕಾಮಣ್ಣ ಕಂಬಳಿ, ಗೋಣಿಬಸಪ್ಪ ಬಡಿಗೇರ್‌ಸೇರಿದಂತೆ ಮೊದಲಾದವರು ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು.