ಕನ್ನಡಪ್ರಭ ವಾರ್ತೆ ಹಳಿಯಾಳ

ಛತ್ತಿಸಗಡ ರಾಜ್ಯದ ಅಂಬಿಕಾಪುರದಲ್ಲಿ ನಡೆದ ಆಖಿಲ ಭಾರತ ಪ್ರಥಮ ಖೇಲೋ ಇಂಡಿಯಾ ಟ್ರೈಬಲ್ಸ್ ಗೇಮ್ಸ್ 2026 ಕುಸ್ತಿ ಪಂದ್ಯಾವಳಿಯಲ್ಲಿ ರಾಜ್ಯವನ್ನು ಪ್ರತಿನಿಧಿಸಿದ ಹಳಿಯಾಳದ ಕುಸ್ತಿ ಕ್ರೀಡಾ ವಸತಿ ಶಾಲೆಯ ಫೈಲ್ವಾನರು ಅತ್ಯುತ್ತಮ ಸಾಧನೆ ಮಾಡಿದ್ದು, ಮೂರು ಚಿನ್ನ, ಒಂದು ಬೆಳ್ಳಿ ಹಾಗೂ ಒಂದು ಕಂಚಿನ ಪದಕವನ್ನು ಬಾಚಿದ್ದಾರೆ.

ಮಾರ್ಚ್ 27ರಿಂದ 31ರ ವರೆಗೆ ಮೂರು ದಿನಗಳ ವರೆಗೆ ಈ ಕುಸ್ತಿ ಪಂದ್ಯಾವಳಿ ಜರುಗಿತು. ಕ್ರೀಡಾ ವಸತಿ ನಿಲಯದ ಕುಸ್ತಿ ಪಟುಗಳಾದ ರೋಹನ್ ದೊಡ್ಡಮನಿ (60ಕೆಜಿ ವಿಭಾಗದಲ್ಲಿ ) ಚಿನ್ನದ ಪದಕ, ಮನೀಷಾ ಸಿದ್ದಿ (76 ಕೆ.ಜಿ. ವಿಭಾಗದಲ್ಲಿ) ಚಿನ್ನದ ಪದಕ ಹಾಗೂ ಪ್ರಿನ್ಸಿಟಾ ಸಿದ್ಧಿ ಫರ್ನಾಂಡೀಸ್ (68 ಕೆಜಿ ವಿಭಾಗದಲ್ಲಿ ) ಚಿನ್ನದ ಪದಕವನ್ನು, ಶಾಲಿನಾ ಸಿದ್ದಿ (57 ಕೆಜಿ ವಿಭಾಗದಲ್ಲಿ) ಬೆಳ್ಳಿ ಪದಕವನ್ನು, ಅಮೃತ ದುರ್ಘನ್ನವರ (74 ಕೆ.ಜಿ ವಿಭಾಗದಲ್ಲಿ) ಕಂಚಿನ ಪದಕವನ್ನು ಪಡೆದರು. ಈ ತಂಡದೊಂದಿಗೆ ಖೇಲೋ ಇಂಡಿಯಾ ಕುಸ್ತಿ ತರಬೇತುದಾರ ಅಂತಾರಾಷ್ಟ್ರೀಯ ಕುಸ್ತಿ ಪಟು ಮಮತಾ ಕೇಳೋಜಿ ತೆರಳಿದ್ದರು. ವಿಜೇತ ತಂಡವನ್ನು ಹಳಿಯಾಳ ಕ್ಷೇತ್ರದ ಹಿರಿಯ ಶಾಸಕ ಆರ್.ವಿ. ದೇಶಪಾಡೆ ಅಭಿನಂದಿಸಿದ್ದಾರೆ ಎಂದು ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕಾರವಾರದ ಸಹಾಯಕ ನಿರ್ದೇಶಕ ರವಿ ನಾಯಕ ತಿಳಿಸಿದ್ದಾರೆ.