ರಾಜ್ಯ ಸರ್ಕಾರದ ಪಂಚಗ್ಯಾರಂಟಿಗಳಲ್ಲಿ ಒಂದಾದ ಗೃಹಜ್ಯೋತಿ ಯೋಜನೆಯ ಫಲಾನುಭವಿಗಳ ಮರುಪರಿಶೀಲನಾ ಕಾರ್ಯದಲ್ಲಿ ಹಳಿಯಾಳ ಹೆಸ್ಕಾಂ ಉಪವಿಭಾಗ ಶೇ. 99.35 ಕಾರ್ಯ ಪೂರ್ಣಗೊಳಿಸುವ ಮೂಲಕ ಹೆಸ್ಕಾಂ ಕಂಪನಿಯಷ್ಟೇ ಅಲ್ಲ ರಾಜ್ಯದಲ್ಲಿಯೇ ಗರಿಷ್ಠ ಪರಿಶೀಲನೆ ಮಾಡಿದ ಹೆಗ್ಗಳಿಕೆಗೆ ಪಾತ್ರವಾಗಿದೆ.
ರಾಜ್ಯದಲ್ಲಿಯೇ ಗರಿಷ್ಠವೆಂಬ ಹೆಗ್ಗಳಿಕೆಗೆ ಪಾತ್ರ । 26931ರಲ್ಲಿ 26742 ಫಲಾನುಭವಿಗಳ ಪರಿಶೀಲನೆ ಪೂರ್ಣ
ಓರ್ವೆಲ್ಲ್ ಫರ್ನಾಂಡೀಸ್
ಕನ್ನಡಪ್ರಭ ವಾರ್ತೆ ಹಳಿಯಾಳರಾಜ್ಯ ಸರ್ಕಾರದ ಪಂಚಗ್ಯಾರಂಟಿಗಳಲ್ಲಿ ಒಂದಾದ ಗೃಹಜ್ಯೋತಿ ಯೋಜನೆಯ ಫಲಾನುಭವಿಗಳ ಮರುಪರಿಶೀಲನಾ ಕಾರ್ಯದಲ್ಲಿ ಹಳಿಯಾಳ ಹೆಸ್ಕಾಂ ಉಪವಿಭಾಗ ಶೇ. 99.35 ಕಾರ್ಯ ಪೂರ್ಣಗೊಳಿಸುವ ಮೂಲಕ ಹೆಸ್ಕಾಂ ಕಂಪನಿಯಷ್ಟೇ ಅಲ್ಲ ರಾಜ್ಯದಲ್ಲಿಯೇ ಗರಿಷ್ಠ ಪರಿಶೀಲನೆ ಮಾಡಿದ ಹೆಗ್ಗಳಿಕೆಗೆ ಪಾತ್ರವಾಗಿದೆ.
ತಾಲೂಕಿನಲ್ಲಿ ಗೃಹಜ್ಯೋತಿ ಯೋಜನೆಯಲ್ಲಿ 26931 ಫಲಾನುಭವಿಗಳಿದ್ದು, ಅದರಲ್ಲಿ ಈವರೆಗೆ 26742 ಫಲಾನುಭವಿಗಳ ಪರಿಶೀಲನೆ ಪೂರ್ಣಗೊಳಿಸಲಾಗಿದ್ದು, ಇನ್ನೂ ಬಾಕಿ ಉಳಿದಿರುವ ಫಲಾನುಭವಿಗಳ ಪರಿಶೀಲನೆಯನ್ನು ಅತೀ ಶೀಘ್ರ ಮುಕ್ತಾಯಗೊಳಿಸುವ ವಿಶ್ವಾಸವನ್ನು ಹಳಿಯಾಳ ಹೆಸ್ಕಾಂ ಉಪವಿಭಾಗ ವ್ಯಕ್ತಪಡಿಸಿದೆ.ಜು. 1ರಿಂದ ಮರುಪರಿಶೀಲನಾ ಕಾರ್ಯ ಆರಂಭವಾದಂತೆ ಹಳಿಯಾಳ ಹೆಸ್ಕಾಂ ಉಪವಿಭಾಗವು ತಾಲೂಕಿನೆಲ್ಲೆಡೆ ಮರುಪರಿಶೀಲನಾ ಕಾರ್ಯದ ಬಗ್ಗೆ ವ್ಯಾಪಕ ಪ್ರಚಾರ ಮಾಡಿತು. ಪರಿಶೀಲನೆ ಸಮಯದಲ್ಲಿ ಫಲಾನುಭವಿಗಳು ಸಲ್ಲಿಸಬೇಕಾದ ದಾಖಲೆಗಳ ಮಾಹಿತಿಯನ್ನು ಮುಂಚಿತವಾಗಿಯೇ ತಿಳಿಸಿದ್ದರಿಂದ, ಪರಿಶೀಲನಾ ಕಾರ್ಯವು ಸಮರೋಪಾದಿಯಲ್ಲಿ ನಡೆಯಿತು. ಆರಂಭದಿಂದಲೂ ಮೂಂಚೂಣಿಯಲ್ಲಿದ್ದ ಹಳಿಯಾಳ ಹೆಸ್ಕಾಂ ಉಪವಿಭಾಗವು, ತನ್ನ ಸ್ಥಾನವನ್ನು ಅಬಾಧಿತವಾಗಿ ಯಥಾಸ್ಥಿತಿಯಲ್ಲಿ ಕಾಯ್ದುಕೊಂಡಿತು.
ಮರುಪರಿಶೀಲನಾ ಕಾರ್ಯ ನಡೆಸಲು ಉಪವಿಭಾಗದಲ್ಲಿ ಸಿಬ್ಬಂದಿ ಕೊರತೆ ಇದ್ದರೂ, ಅದನ್ನು ಪರಿಗಣನೆಗೆ ತೆಗೆದುಕೊಳ್ಳದೇ ಇಡೀ ಉಪವಿಭಾಗವು ಈ ಪರಿಶೀಲನಾ ಕಾರ್ಯವನ್ನು ಜೊತೆಗೂಡಿ ನಿಭಾಯಿಸಿತು. ಇಲಾಖೆಯಲ್ಲಿನ ಕಂದಾಯ, ಅಕೌಂಟ್ ವಿಭಾಗ ಹಾಗೂ ಇಲಾಖೆಯ ಸೆಕ್ಯೂರಿಟಿ ಗಾರ್ಡ್‌ಗಳು, ವಾಹನ ಚಾಲಕರು, ಸ್ವಚ್ಛತಾ ಸಿಬ್ಬಂದಿಯನ್ನು ಸಹ ಕಾರ್ಯಕ್ಕೆ ಬಳಸಿಕೊಳ್ಳಲಾಯಿತು.---------
ಕೋಟ್ಸರ್ಕಾರದ ನಿರ್ದೇಶನದಂತೆ ಗೃಹಜ್ಯೋತಿ ಮರುಪರೀಲನಾ ಕಾರ್ಯವನ್ನು ನಮ್ಮ ಕಂಪನಿಯವರು ಎಲ್ಲರೂ ಅತ್ಯಂತ ಕಾಳಜಿಯಿಂದ ಉತ್ಸಾಹದಿಂದ ಮಾಡಿದ್ದಾರೆ. ಕಾಲಕಾಲಕ್ಕೆ ಬೇಕಾದ ಮಾರ್ಗದರ್ಶನ ಸಹಕಾರವನ್ನು ಹೆಸ್ಕಾಂ ನೀಡಿದೆ. ಈ ಕಾರ್ಯದಲ್ಲಿ ಹಳಿಯಾಳ ಹೆಸ್ಕಾಂ ಉಪವಿಭಾಗದ ಶ್ಲಾಘನೀಯ ಸಾಧನೆ ಮಾಡಿದೆ.
ಕಲ್ಕಪ್ಪಾ ಪಾಗಿ, ಅಧೀಕ್ಷಕ ಎಂಜಿನಿಯರ್, ಶಿರಸಿ ವೃತ್ತ------
ಹಳಿಯಾಳ ಹೆಸ್ಕಾಂ ಉಪವಿಭಾಗವು ಪರಿಶೀಲನಾ ಕಾರ್ಯದಲ್ಲಿ ಶೇ.99.35 ಸಾಧನೆ ಮಾಡುವ ಮೂಲಕ ರಾಜ್ಯದಲ್ಲಿಯೇ ಅತೀ ಹೆಚ್ಚು ಪರಿಶೀಲನಾ ಕಾರ್ಯ ಮಾಡಿದ ಸಾಧನೆ ಮಾಡಿದೆ. ಹಾಗೆಯೇ ದಾಂಡೇಲಿ ಹೆಸ್ಕಾಂ ವಿಭಾಗ (ಹಳಿಯಾಳ, ದಾಂಡೇಲಿ, ಜೋಯಿಡಾ ತಾಲೂಕ) ಶೇ. 94.35ಸಾಧನೆಯನ್ನು ಮಾಡಿದ್ದು ಇದು ಸಹ ರಾಜ್ಯದಲ್ಲಿಯೇ ಗರಿಷ್ಠ ಸಾಧನೆಯಾಗಿದೆ.ಪುರುಷೋತ್ತಮ ಮಲ್ಯ, ಕಾರ್ಯನಿರ್ವಾಹಕ ಎಂಜಿನಿಯರ್, ದಾಂಡೇಲಿ ವಿಭಾಗ
------ಉಪವಿಭಾಗದ ಸಿಬ್ಬಂದಿಗಳೆಲ್ಲರೂ ಸಂಘಟಿತರಾಗಿ ಪರಿಶೀಲನಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು. ದಿನಂಪತ್ರಿ ಪರಿಶೀಲನೆಯ ಅಂಕಿ-ಅಂಶಗಳನ್ನು ಆನ್-ಲೈನ್ ಎಂಟ್ರಿ ಮಾಡಿ, ಬಾಕಿಯಿರುವ ಫಲಾನುಭವಿಗಳ ಯಾದಿಯನ್ನು ಸಿದ್ಧಪಡಿಸಿ ನೀಡುವಾಗ ಸಮಯ ಮೀರಿದ್ದೂ ಗೊತ್ತಾಗುತ್ತಿರಲಿಲ್ಲ.
ಗಣಪತಿ ನಾರಾಯಣ ಹಳಿಯಾಳಕರ ಎಇಇ, ಹಳಿಯಾಳ ಹೆಸ್ಕಾಂ ಉಪವಿಭಾಗ