ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ತಾವರೆಗೆರೆ ಬಡಾವಣೆಯ ಹಳ್ಳಿಕಾರ್ ತಳಿಯ ಎತ್ತು ದಾಖಲೆ ಬೆಲೆಗೆ ತಮಿಳುನಾಡಿನ ಮೂಲದ ರೈತರಿಗೆ ಮಾರಾಟವಾಗುವುದರೊಂದಿಗೆ ಎಲ್ಲರನ್ನೂ ನಿಬ್ಬೆರಗಾಗಿಸಿದೆ. ತಾವರೆಗೆರೆಯ ಕಾಂತರಾಜು ಸಾಕಿದ್ದ ಹಳ್ಳಿಕಾರ್ ತಳಿಯ ಎತ್ತು ಟೈಗರ್ ಎಂದೇ ಖ್ಯಾತಿಯನ್ನು ಪಡೆದಿತ್ತು.ಹಲವಾರು ಎತ್ತಿನಗಾಡಿ ಓಟ ಸ್ಪರ್ಧೆಯಲ್ಲಿ ಪಾಲ್ಗೊಂಡು ಒಂದು ಬೈಕ್ ಸೇರಿದಂತೆ ಸುಮಾರು ೨೬ ಬಹುಮಾನ ಗೆದ್ದುಕೊಂಡಿತ್ತು. ಅಲ್ಲದೇ, ತಮಿಳುನಾಡಿನಲ್ಲೂ ಸಹ ಎರಡು ಬಹುಮಾನ ಪಡೆದಿತ್ತು. ತಮಿಳುನಾಡು ಮೂಲದ ಎಸ್.ವಿ.ರಾಜನ್ ಎಂಬುವರು ಮಂಡ್ಯಕ್ಕೆ ಆಗಮಿಸಿ ಕಾಂತರಾಜು ಅವರ ಬಳಿ ಇದ್ದ ಹಳ್ಳಿಕಾರ್ ಎತ್ತನ್ನು ೧೩.೦೫ ಲಕ್ಷ ರು. ಕೊಟ್ಟು ಖರೀದಿಸಿದರು.
ಇದೇ ಸಂದರ್ಭದಲ್ಲಿ ತಾವರೆಗೆರೆಯ ಲಾರಾ ಮಂಜು, ಚಿಕ್ಕಾಡೆ ಮಾಯಿ ಮತ್ತಿತರರು ಟೈಗರ್ ಖ್ಯಾತಿಯ ಎತ್ತಿಗೆ ಅದ್ಧೂರಿಯಾಗಿ ಬೀಳ್ಕೊಡುಗೆ ನೀಡಿದರು.ನಾಳೆ ಉದ್ಯೋಗ ಮೇಳ
ಕನ್ನಡಪ್ರಭ ವಾರ್ತೆ ಮಂಡ್ಯಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಹಾಗೂ ಮೆ.ಬೆಲ್ ಸ್ಟಾರ್ ಮೈಕ್ರೋ ಫೈನಾನ್ಸ್ ಲಿ, ಮೆ.ಬಂಧನ್ ಬ್ಯಾಂಕ್, ಮತ್ತು ಮೆ.ಎಲ್.ಐ.ಸಿ ಸಂಸ್ಥೆಯವರ ಸಹಯೋಗದಲ್ಲಿ ನ.29ರಂದು ಉದ್ಯೋಗ ಮೇಳ ಆಯೋಜಿಸಿದೆ. ತಮ್ಮ ಸಂಸ್ಥೆಯಲ್ಲಿ ಖಾಲಿಯಿರುವ ಹುದ್ದೆಗಳಿಗೆ ಎಸ್ಸೆಸ್ಸೆಲ್ಸಿ, ಪಿಯುಸಿ ಮತ್ತು ಯಾವುದೇ ಪದವಿ ಉತ್ತೀರ್ಣರಾದ 18 ರಿಂದ 32 ವರ್ಷದೊಳಗಿನ ಅಭ್ಯರ್ಥಿಗಳು ಅಂದು ಬೆಳಗ್ಗೆ 10.30 ಗಂಟೆಗೆ ಮೆ. ಬೆಲ್‌ಸ್ಟಾರ್ ಮೈಕ್ರೋ ಫೈನಾನ್ಸ್ ಇಲ್ಲಿ ನೇರ ಸಂದರ್ಶನಕ್ಕೆ ಹಾಜರಾಗತಕ್ಕದ್ದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ 08232-295124 ಮತ್ತು 9164642684, 8660061488, 8970646629 ಅನ್ನು ಸಂಪರ್ಕಿಸಬಹುದು ಮತ್ತು ಮೆ.ಆರ್‌ಸೆಟಿ (ಬ್ಯಾಂಕ್ ಆಫ್ ಬರೋಡಾ) ಇಲ್ಲಿ ಸ್ವಯಂ ಉದ್ಯೋಗ ಮಾಡಲು ನೀಡುವ ತರಬೇತಿಗಾಗಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಿದ್ದಾರೆ ಎಂದು ಉದ್ಯೋಗಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.