ರೈತರ ಸಮಸ್ಯೆ ಬಗೆಹರಿಸದಿದ್ದರೆ ಸಿಎಂ ನಿವಾಸ ಎದುರು ರೈತರ ನಿರಂತರ ಧರಣಿ

| Published : Sep 20 2024, 01:51 AM IST

ರೈತರ ಸಮಸ್ಯೆ ಬಗೆಹರಿಸದಿದ್ದರೆ ಸಿಎಂ ನಿವಾಸ ಎದುರು ರೈತರ ನಿರಂತರ ಧರಣಿ
Share this Article
  • FB
  • TW
  • Linkdin
  • Email

ಸಾರಾಂಶ

ಕೃಷಿ ಪಂಪ್ ಸೆಟ್ ಗಳಿಗೆ ಹೊಸ ಸಂಪರ್ಕ ಪಡೆಯಲು ಅಕ್ರಮ ಸಕ್ರಮ ಯೋಜನೆಯನ್ನು ಮರು ಜಾರಿ ಮಾಡಬೇಕು.

ಕನ್ನಡಪ್ರಭ ವಾರ್ತೆ ಮೈಸೂರು

ರೈತರ ಸಮಸ್ಯೆಯನ್ನು ಸೆ.30ರ ಒಳಗೆ ಬಗೆಹರಿಸದಿದ್ದರೆ ಮುಖ್ಯಮಂತ್ರಿಗಳ ನಿವಾಸದ ಮುಂದೆ ರೈತರ ನಿರಂತರ ಧರಣಿ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರ ಸಂಘದ ರಾಜ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ತಿಳಿಸಿದರು.

ಮೈಸೂರಿನ ಗನ್ ಹೌಸ್ ಬಳಿಯ ವಿಶ್ವಮಾನವ ಉದ್ಯಾನವನದಲ್ಲಿ ಗುರುವಾರ ನಡೆದ ರೈತರ ಸಭೆಯಲ್ಲಿ ಮಾತನಾಡಿದ ಅವರು, ಕಬ್ಬಿನ ಬಾಕಿ ಪ್ರತಿ ಟನ್ ಕಬ್ಬಿಗೆ ಸರ್ಕಾರದ ಹೆಚ್ಚುವರಿ 150 ರೂ. ಆದೇಶದ ಪ್ರಕಾರ 950 ಕೋಟಿ ರೂ. ರೈತರಿಗೆ ಕಾರ್ಖಾನೆಗಳಿಂದ ಕೊಡಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಪ್ರಸಕ್ತ ಸಾಲಿಗೆ ಪ್ರತಿ ಟನ್ ಕಬ್ಬಿಗೆ 4000 ರೂ. ನಿಗದಿ. ಕಾರ್ಖಾನೆಯ ಮುಂಭಾಗ ಎಪಿಎಂಸಿಯ ಮುಖಾಂತರ ತೂಕದ ಯಂತ್ರ ಅಳವಡಿಕೆ, ಕಟಾವು ಸಾಗಾಣಿಕೆ ವೆಚ್ಚದ ಮಾನದಂಡ ಇಲ್ಲದಿರುವುದು ಇಳುವರಿಯಲ್ಲಿ ಕಾರ್ಖಾನೆಗಳಿಂದ ಮೋಸ ಆಗುತ್ತಿದ್ದರು ಸರ್ಕಾರ ಕಣ್ಣು ಮುಚ್ಚಿ ಕುಳಿತಿದೆ ಎಂದು ಅವರು ಆರೋಪಿಸಿದರು.

ಕೃಷಿ ಪಂಪ್ ಸೆಟ್ ಗಳಿಗೆ ಹೊಸ ಸಂಪರ್ಕ ಪಡೆಯಲು ಅಕ್ರಮ ಸಕ್ರಮ ಯೋಜನೆಯನ್ನು ಮರು ಜಾರಿ ಮಾಡಬೇಕು. ಪಂಪ್ ಸೆಟ್ ಗಳ ಆರ್.ಆರ್ ನಂಬರ್ ಗೆ ಆಧಾರ್ ಲಿಂಕ್ ಕೈಬಿಡಬೇಕು ಎಂದು ಅವರು ಒತ್ತಾಯಿಸಿದರು.

ಸರ್ಕಾರ ಕ್ರಮ ಕೈಗೊಳ್ಳದ ಕಾರಣ ಮುಖ್ಯಮಂತ್ರಿಗಳ ನಿವಾಸದ ಮುಂದೆ ನಿರಂತರ ಧರಣಿ ನಡೆಸಲು, ಮುಖ್ಯಮಂತ್ರಿಗಳು ಮೈಸೂರಿಗೆ ಬಂದಾಗ ಭೇಟಿ ಮಾಡಿ ಸಮಸ್ಯೆ ಬಗೆಹರಿಸಲು ಕೋರುತ್ತೇವೆ. ಇಲ್ಲವಾದರೆ ನಿರಂತರ ಹೋರಾಟದ ದಾರಿ ಹಿಡಿಯಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.

ಸಭೆಯಲ್ಲಿ ಮುಖಂಡರಾದ ಆಲತ್ತೂರು ಸಿದ್ದಲಿಂಗಪ್ಪ, ಕೆರೆಹುಂಡಿ ರಾಜಣ್ಣ, ಅತ್ತಹಳ್ಳಿ ಸೌಮ್ಯರಾಜ್, ಮಂಜಣ್ಣ, ಹಾಡ್ಯ ರವಿ, ಮಲಿಯೂರು ಮಹೇಂದ್ರ, ಶ್ರೀನಿವಾಸ್, ಮಂಜೇಶ್, ಮಹೇಶ್, ಜಯಸ್ವಾಮಿ, ಕೃಷ್ಣಪ್ಪ, ಮಹದೇವಸ್ವಾಮಿ, ಮೋಹನ್, ಆನಂದ್, ಮಾದಪ್ಪ, ಶಿವಣ್ಣ, ಮಾದೇವಸ್ವಾಮಿ, ಮಹದೇವಸ್ವಾಮಿ, ಶ್ರೀಕಂಠ, ಪುಟ್ಟನಾಯಕ, ಪ್ರಭುಸ್ವಾಮಿ, ಮಲ್ಲೇಶ್ ಮೊದಲಾದವರು ಇದ್ದರು.