ಚೀರನಹಳ್ಳಿಯಲ್ಲಿ ಹಾಲುಕಂಬಿ ಮಲೆ ಶ್ರೀಬೀರೇಶ್ವರಸ್ವಾಮಿ ದೊಡ್ಡ ಹಬ್ಬಕ್ಕೆ ಚಾಲನೆ

| Published : Mar 27 2024, 01:06 AM IST

ಚೀರನಹಳ್ಳಿಯಲ್ಲಿ ಹಾಲುಕಂಬಿ ಮಲೆ ಶ್ರೀಬೀರೇಶ್ವರಸ್ವಾಮಿ ದೊಡ್ಡ ಹಬ್ಬಕ್ಕೆ ಚಾಲನೆ
Share this Article
  • FB
  • TW
  • Linkdin
  • Email

ಸಾರಾಂಶ

ಮಾ.24ರ ರಂದು ಗಂಗೆಪೂಜೆ, ಗೋಪೂಜೆ, ಗಣಪತಿ ಪೂಜೆ, ವರುಣವಾಸ್ತು ಸಹಿತ ವಿವಿದ ಹೋಮದ ಮೂಲಕ ಚಾಲನೆ ದೊರೆಯಿತು. ಮಾ.25 ರಂದು ಸ್ವಾಮಿಗೆ ಶುದ್ದ ಪುಣ್ಯಹಾ, ರುದ್ರಾಭಿಷೇಕ ನಡೆದು ರಾತ್ರಿ 9ಕ್ಕೆ ಗಡಿ ದೇವರುಗಳ ಆಗಮನವಾಯಿತು. ರಾತ್ರಿ 10.30ಕ್ಕೆ ಗಡಿದೇವರುಗಳನ್ನು ರಾಜಮಾರ್ಗದೊಂದಿಗೆ ದೇವಸ್ಥಾನದ ಪ್ರಕಾರಕ್ಕೆ ಕರೆತರಲಾಯಿತು.

ಕನ್ನಡಪ್ರಭ ವಾರ್ತೆ ಮಂಡ್ಯ

ತಾಲೂಕಿನ ಚೀರನಹಳ್ಳಿಯಲ್ಲಿ ಹಾಲುಕಂಬಿ ಮಲೆ ಶ್ರೀಬೀರೇಶ್ವರಸ್ವಾಮಿ ದೊಡ್ಡ ಹಬ್ಬ 3 ದಿನಗಳ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು.

ಸುಮಾರು 25 ವರ್ಷಗಳ ನಂತರ ನಡೆಯುತ್ತಿರುವ ಜಾತ್ರೆ ಹಿನ್ನೆಲೆಯಲ್ಲಿ ದೇವರುಗಳ ಉತ್ಸವ ಸಡಗರ ಸಂಭ್ರಮದಿಂದ ಜರುಗಿತು.

ಗ್ರಾಮದಲ್ಲಿ 16 ಕೂಟದ ಮಹಾಮಂತ್ರಿ ಶ್ರೀ ಹಾಲುಕಂಬಿ ಮಲೆ ಬೀರೇಶ್ವರಸ್ವಾಮಿ ದೇವಾಲಯಲದಲ್ಲಿ ಚಿಕ್ಕಮರಳಿ 16 ಕೂಟದ ದೊರೆ ಶ್ರೀ ಚೆನ್ನಿಗರಾಯ ಬೀರೇಶ್ವರಸ್ವಾಮಿಯ ದೊಡ್ಡಮುಲಗೂಡಿ ಶ್ರೀದೊಡ್ಡಯ್ಯ ಬೀರೇಶ್ವರ ಸ್ವಾಮಿ, ಚೀರನಹಳ್ಳಿ ಶ್ರೀ ಹಾಲುಕಂಬಿಮಲೆ ಬೀರೇಶ್ವರಸ್ವಾಮಿ, ಚೋಕನಹಳ್ಳಿ ಶ್ರೀ ದಳವಾಯಿ ಬೀರೇಶ್ವರಸ್ವಾಮಿ, ಗಾಮನಹಳ್ಳಿ ಶ್ರೀ ಹುಚ್ಚುರಾಯ ಬೀರೇಶ್ವರಸ್ವಾಮಿ, ಮಾಡಲ ಶ್ರೀ ಹುಚ್ಚುರಾಯ ಬೀರೇಶ್ವರಸ್ವಾಮಿ, ಗಂಟಗಾನಹಳ್ಳಿ ಶ್ರೀ ಚನ್ನಲಿಕೆ ಬೀರೇಶ್ವರಸ್ವಾಮಿ, ಯತ್ತಗದಹಳ್ಳಿ ಶ್ರೀ ಭೈರವೇಶ್ವರಸ್ವಾಮಿ, ಪುರದ ಶ್ರೀ ಬಸವೇಶ್ವರಸ್ವಾಮಿ, ಚೊಕ್ಕನಹಳ್ಳಿ ಶ್ರೀ ದಳವಾಯಿ ಬೀರೇಶ್ವರಸ್ವಾಮಿ, ಚಿನ್ನೇನಹಳ್ಳಿ ಶ್ರೀ ಚಿಕ್ಕಯ್ಯ ಬೀರೇಶ್ವರಸ್ವಾಮಿ, ಕೆ.ಮಲ್ಲೇನಹಳ್ಳಿ ಶ್ರೀ ಮರಡಿಲಿಂಗೇಶ್ವರ ಬೀರೇಶ್ವರಸ್ವಾಮಿ, ಚೋಕನಹಳ್ಳಿ ಹಳ್ಳದ ದೊಳ್ನಯ್ಯ ಬೀರೇಶ್ವರಸ್ವಾಮಿ, ಎಂ.ಮೊದುರುಕೊಪ್ಪಲು ಶ್ರೀ ಬೀರಲಿಂಗ ಬೀರೇಶ್ವರಸ್ವಾಮಿ, ಮಾರಗೌಡನಹಳ್ಳಿ ಶ್ರೀ ಮರಡಿಲಿಂಗೇಶ್ವರ ಬೀರೇಶ್ವರಸ್ವಾಮಿ, ಮಾವಿನಕೆರೆ ಶ್ರೀ ಹುಚ್ಚರಾಯ ಬೀರೇಶ್ವರಸ್ವಾಮಿ ದೇವರುಗಳ ಮೆರವಣಿಗೆ ಅದ್ದೂರಿಯಾಗಿ ನಡೆಯಿತು.

ಮಾ.24ರ ರಂದು ಗಂಗೆಪೂಜೆ, ಗೋಪೂಜೆ, ಗಣಪತಿ ಪೂಜೆ, ವರುಣವಾಸ್ತು ಸಹಿತ ವಿವಿದ ಹೋಮದ ಮೂಲಕ ಚಾಲನೆ ದೊರೆಯಿತು. ಮಾ.25 ರಂದು ಸ್ವಾಮಿಗೆ ಶುದ್ದ ಪುಣ್ಯಹಾ, ರುದ್ರಾಭಿಷೇಕ ನಡೆದು ರಾತ್ರಿ 9ಕ್ಕೆ ಗಡಿ ದೇವರುಗಳ ಆಗಮನವಾಯಿತು. ರಾತ್ರಿ 10.30ಕ್ಕೆ ಗಡಿ ದೇವರುಗಳನ್ನು ರಾಜಮಾರ್ಗದೊಂದಿಗೆ ದೇವಸ್ಥಾನದ ಪ್ರಕಾರಕ್ಕೆ ಕರೆತರಲಾಯಿತು.

ಮಾ.26 ರಂದು ಬೆಳಗ್ಗೆ ಕೂಟದ ಈರು ಮಕ್ಕಳ ಕುಣಿತ, ದೇವರುಗಳ ನಂದಿಕಂಬ, ಬಸವನ ಸಮೇತ ಕಲ್ಲುಕಟ್ಟಿಗೆ ಇಳಿಸಿ ಹೂ, ಹೊಂಬಾಳೆ ಪೂಜೆ ಮಾಡಿ ತಮಟೆ ಮಂಗಳವಾದ್ಯಗಳೊಂದಿಗೆ ದೇವರುಗಳು ಮತ್ತು ಬಸವನನ್ನು ದೇವಾಲಯದ ಪ್ರಕಾರಕ್ಕೆ ತರಲಾಯಿತು.

ಇದೇ ವೇಳೆ ದೇವರುಗಳ ಅರವಟ್ಟಿಗೆ ಮನೆಗೆ ಪ್ರವೇಶ ಮತ್ತು ಹೆಡಗೆಮೇಗಳ ಆರತಿ ನಡೆಯಿತು. ಬಸವನ ಮೇಲೆ ಮಜ್ಜನ ತಂದು ಬೀರೇಶ್ವರ ಸ್ವಾಮಿಗೆ ಅಭಿಷೇಕ ಮಾಡಿ ಸಹಸ್ರ ಬಿಲ್ವಾರ್ಚನೆ ಮಹಾಮಂಗಳಾರತಿ ನಡೆಯಿತು.

ಮಾ.27 ರಂದು ಉತ್ಸವದ ಅಂಗವಾಗಿ ಚೀರನಹಳ್ಳಿ ರಾಜಬೀದಿಗಳಲ್ಲಿ ದೇವರುಗಳ ಉತ್ಸವ ಮೆರವಣಿಗೆ, ಗ್ರಾಮದ ದೇವಮ್ಮನ ದೇವಸ್ಥಾನದಿಂದ ಬಂಡಿಗಾಡಿಗಳನ್ನು ಬೀರೇಶ್ವರ ಸ್ವಾಮಿಯ ಸನ್ನಿಧಾನಕ್ಕೆ ತಂದು ಹುಲ್ಲುಮರಿ, ಹೆಡಗೆ ಮೇಗಳಾರತಿ, ಓಕುಳಿ ನಂತರ ವೀರಚಾವಟಿ, ಒಕ್ಕಲು ಕುಲಬಾಂಧವರಿಂದ ಅನ್ನ ಸಂತರ್ಪಣೆ ನಡೆಸಲಾಗುವುದು. ನಂತರ ಎಲ್ಲಾ ಗಡಿ ದೇವರುಗಳನ್ನು ಸಕ್ಕರೆ ವೀಳ್ಯದೊಡನೆ ಬೀಳ್ಕೊಡಲಾಗುವುದು.