ಸಾರಾಂಶ
ಪ್ರಮೋದ್ ಮಧ್ವರಾಜ್ ತಮ್ಮ ದಣಿವರಿಯದ ಪ್ರಯತ್ನಗಳ ಮೂಲಕ ಅವರು ಅಂಚಿನಲ್ಲಿರುವವರನ್ನು ಮೇಲಕ್ಕೆತ್ತಲು ಮತ್ತು ಸಬಲೀಕರಣಕ್ಕಾಗಿ ಕೆಲಸ ಮಾಡಲು ಅಚಲವಾದ ಬದ್ಧತೆಯನ್ನು ಪ್ರದರ್ಶಿಸಿದ್ದಾರೆ ಎಂದು ಹನುಮಂತಪ್ಪ ಸರಾವರಿ ಹೇಳಿದರು.
ಹುಬ್ಬಳ್ಳಿ: ಸಮಾಜದ ಮುಖಂಡ, ರಾಜಕೀಯ ಹಿನ್ನಲೆಯುಳ್ಳ ಪ್ರಮೋದ ಮದ್ವರಾಜ್‌ಗೆ ಬಿಜೆಪಿಯಿಂದ ಉಡುಪಿ ಮತ್ತು ಚಿಕ್ಕಮಂಗಳೂರು ಲೋಕಸಭಾ ಕ್ಷೇತ್ರದಿಂದ ಟಿಕೆಟ್ ನೀಡಿ ಪಕ್ಷದ ಅಧಿಕೃತ ಅಭ್ಯರ್ಥಿ ಎಂದು ಘೋಷಿಸುವಂತೆ ಧಾರವಾಡ ಜಿಲ್ಲಾ ಗಂಗಾಮತಸ್ಥರ ಸಂಘದ ಮುಖಂಡ ಹನುಮಂತಪ್ಪ ಸರಾವರಿ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಸಮುದಾಯ ಹಿಂದುಳಿದ ಮತ್ತು ಗುರುತಿಸಲ್ಪಡದ ಸಮುದಾಯವಾಗಿದ್ದರೂ ರಾಜಕೀಯ ವೇದಿಕೆಗಳಲ್ಲಿ ಮಾನ್ಯತೆ ಮತ್ತು ಪ್ರಾತಿನಿಧ್ಯವನ್ನು ಪಡೆಯಲು ನಾವು ಹಲವು ವರ್ಷಗಳ ಕಾಲ ಹೋರಾಟ ಮಾಡಿದ್ದೇವೆ. ಆದರೆ, ಸರ್ಕಾರಗಳಿಗೆ ನಮ್ಮ ಧ್ವನಿ ಕೇಳಿಸದೆ ಇರುವುದು ನೋವಿನ ಸಂಗತಿ.ನಮ್ಮ ಸವಾಲುಗಳನ್ನು ಅರ್ಥಮಾಡಿಕೊಳ್ಳುವ ಮತ್ತು ರಾಜಕೀಯ ವೇದಿಕೆಯಲ್ಲಿ ನಮ್ಮ ಉದ್ದೇಶಕ್ಕೆ ಸಮರ್ಥವಾಗಿ ಸ್ಪಂದಿಸಿ, ಸಮರ್ಥಿಸುವ ಪ್ರತಿನಿಧಿ ಹೊಂದುವುದು ಅವಶ್ಯವಿದೆ.
ಪ್ರಮೋದ್ ಮಧ್ವರಾಜ್ ನಮ್ಮ ಸಮಾಜದ ವ್ಯಕ್ತಿಯಾಗಿದ್ದು, ಅವರ ಸಮರ್ಪಣೆ ಮತ್ತು ನಾಯಕತ್ವ ನಮ್ಮ ಸಮುದಾಯದಲ್ಲಿ ಅಪಾರ ಗೌರವ ಗಳಿಸಿದೆ. ತಮ್ಮ ದಣಿವರಿಯದ ಪ್ರಯತ್ನಗಳ ಮೂಲಕ ಅವರು ಅಂಚಿನಲ್ಲಿರುವವರನ್ನು ಮೇಲಕ್ಕೆತ್ತಲು ಮತ್ತು ಸಬಲೀಕರಣಕ್ಕಾಗಿ ಕೆಲಸ ಮಾಡಲು ಅಚಲವಾದ ಬದ್ಧತೆಯನ್ನು ಪ್ರದರ್ಶಿಸಿದ್ದಾರೆ.ಗಂಗಾಮತಸ್ಥರ ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಪ್ರಮೋದ್ ಮಧ್ವರಾಜ್ ಅವರ ದೃಷ್ಟಿಕೋನ ಜನರ ಆಶೋತ್ತರಗಳೊಂದಿಗೆ ಸಂಪೂರ್ಣವಾಗಿ ಹೊಂದಿಕೊಳ್ಳುತ್ತದೆ. ಹಾಗಾಗಿ, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಪ್ರಮೋದ್ ಮದ್ವರಾಜ್‌ಗೆ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ನೀಡುವಂತೆ ಒತ್ತಾಯಿಸಿದರು.
ಈ ವೇಳೆ ಸಮಾಜದ ಮುಖಂಡರಾದ ಮಂಜುನಾಥ ಬಿಡಿಯಣ್ಣವರ, ಯಲ್ಲಪ್ಪ ಮೊರಬದ ಸೇರಿದಂತೆ ಹಲವರಿದ್ದರು.