ಕೈ ಗೆಲುವು: ಶಾಸಕ ರಾಜು ಕಾಗೆ ಸಂಭ್ರಮ

| Published : Jun 05 2024, 12:31 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಕಾಗವಾಡ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ಭರ್ಜರಿ ಗೆಲುವು ಸಾಧಿಸುತ್ತಿದ್ದಂತೆ ಕಾರ್ಯಕರ್ತರು, ಮುಖಂಡರು ಶಾಸಕ ರಾಜು ಕಾಗೆ ಅವರ ಗೃಹ ಕಚೇರಿಗೆ ಆಗಮಿಸಿ ಬಣ್ಣ ಎರಚಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದರು.

ಕನ್ನಡಪ್ರಭ ವಾರ್ತೆ ಕಾಗವಾಡ

ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ಭರ್ಜರಿ ಗೆಲುವು ಸಾಧಿಸುತ್ತಿದ್ದಂತೆ ಕಾರ್ಯಕರ್ತರು, ಮುಖಂಡರು ಶಾಸಕ ರಾಜು ಕಾಗೆ ಅವರ ಗೃಹ ಕಚೇರಿಗೆ ಆಗಮಿಸಿ ಬಣ್ಣ ಎರಚಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದರು.ತಾಲೂಕಿನ ಉಗಾರ ಪಟ್ಟಣದ ಶಾಸಕ ರಾಜು ಕಾಗೆ ಗೃಹ ಕಚೇರಿಯ ಮುಂದೆ ನೂರಾರು ಕಾರ್ಯಕರ್ತರು ಜಮಾಯಿಸಿ ಜೈಕಾರಗಳನ್ನು ಕೂಗಿ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಕಳೆದ ಒಂದು ತಿಂಗಳಿನಿಂದ ಹಗಲು ರಾತ್ರಿ ಎನ್ನದೇ ಪ್ರಿಯಾಂಕಾ ಜಾರಕಿಹೊಳಿ ಗೆಲುವಿಗೆ ಶ್ರಮಿಸಿದ ತಮ್ಮೆಲ್ಲ ಕಾರ್ಯಕರ್ತರಿಗೆ ಧನ್ಯವಾದಗಳನ್ನು ಶಾಸಕ ರಾಜು ಕಾಗೆ ತಿಳಿಸಿದರು.ಈ ವೇಳೆ ಪಟ್ಟಣ ಪಂಚಾಯತಿ ಸದಸ್ಯರಾದ ಪ್ರವೀಣ ಗಾಣಿಗೇರ, ಅರುಣ ಗಾಣಿಗೇರ, ಸಂಜಯ ಬೀರಡಿ, ಸಂಜಯ ಕುಚನೂರೆ, ಮುಖಂಡರಾದ ಅಣ್ಣಾಸಾಬ ಪಾಟೀಲ, ಶಂಕರ ವಾಘಮೊಡೆ, ವಸಂತ ಖೋತ, ಸಂಜಯ ಸಲಗರೆ, ರಾಜು ಮದನೆ, ಸುರೇಶ ಗಾಣಿಗೇರ, ಸೌರಭ ಪಾಟೀಲ, ಡಾ.ಅರವಿಂದರಾವ್ ಕಾರ್ಚಿ, ವಿಶ್ವನಾಥ ಪಾಟೀಲ, ಯಮನು ಪಾಟೀಲ, ಅನೀಲಕುಮಾರ ಸತ್ತಿ, ರಾಜು ಅರ್ಜುನವಾಡ, ರಾಜು ಮುಜಾವರ, ಅಶೋಕ ಇಚಲಕರಂಜಿ, ಲಕ್ಷ್ಮಣ ವಡ್ಡರ, ಪಂಡಿತ ವಡ್ಡರ, ಪ್ರಕಾಶ ಚಿಣಗಿ, ರಾಘವೇಂದ್ರ ಜಾಯಗೊಂಡೆ,ರಾಜೇಶ ದಾನೊಳ್ಳಿ, ಶಂಕರ ಮಗದುಮ್, ರಾವಸಾಬ ಐಹೊಳಿ, ವಿನಾಯಕ ಬಾಗಡಿ, ರಮೇಶ ಚೌಗುಲಾ, ಸೌರಭ ಪಾಟೀಲ, ಬಸನಗೌಡ ಪಾಟೀಲ, ಕೆ.ಆರ್.ಪಾಟೀಲ, ವಿಶ್ವನಾಥ ನಾಮದಾರ, ಮಲ್ಲಿಕಾರ್ಜುನ ದಳವಾಯಿ, ರಮೇಶ ಪಟ್ಟಣ, ರಾಜು ಬಿಳ್ಳೂರ, ರಿಯಾಜ್‌ ಸನದಿ, ಸೇರಿ ಹಲವರು ಇದ್ದರು.

ಕೋಟ್......ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ ನೇತೃತ್ವದಲ್ಲಿ ನಡೆದ ಯೋಜನೆಗಳು ನಮ್ಮ ಕಾಂಗ್ರೆಸ್ ಅಭ್ಯರ್ಥಿಗಳ ಕೈ ಹಿಡಿದಿವೆ. ಆ ಮೂಲಕ ಪ್ರಿಯಾಂಕಾ ಜಾರಕಿಹೊಳಿ ಗೆಲುವಿಗೆ ಶ್ರೀರಕ್ಷೆಯಾಗಿವೆ. ಮುಂದಿನ ದಿನಗಳಲ್ಲಿ ಸಂಸದೆಯಾಗಿ ಆಯ್ಕೆಯಾದ ಪ್ರಿಯಾಂಕಾ ಜಾರಕಿಹೊಳಿ ಅವರೊಂದಿಗೆ ಕೂಡಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುವೆ.-ರಾಜು ಕಾಗೆ, ಶಾಸಕರು ಕಾಗವಾಡ ಮತಕ್ಷೇತ್ರ.