ಸಾರಾಂಶ
ಲೋಕಸಭಾ ಚುನಾವಣೆಯ ವೇಳೆ ಅಧಿಕಾರಿಗಳಿಗೆ ನೀಡಿರುವ ಹೊಣೆಯನ್ನು ಜವಬ್ದಾರಿಯುತವಾಗಿ ನಿರ್ವಹಿಸಬೇಕೆಂದು ಸಹಾಯಕ ಚುನಾವಣಾಧಿಕಾರಿ ಮಲ್ಲಿಕಾರ್ಜುನ್ ತಿಳಿಸಿದರು.
ಕನ್ನಡಪ್ರಭ ವಾರ್ತೆ ಹನೂರು
ಲೋಕಸಭಾ ಚುನಾವಣೆಯ ವೇಳೆ ಅಧಿಕಾರಿಗಳಿಗೆ ನೀಡಿರುವ ಹೊಣೆಯನ್ನು ಜವಬ್ದಾರಿಯುತವಾಗಿ ನಿರ್ವಹಿಸಬೇಕೆಂದು ಸಹಾಯಕ ಚುನಾವಣಾಧಿಕಾರಿ ಮಲ್ಲಿಕಾರ್ಜುನ್ ತಿಳಿಸಿದರು. ಹನೂರು ಪಟ್ಟಣದ ಲೋಕೋಪಯೋಗಿ ಇಲಾಖೆಯ ವಸತಿ ಗೃಹದ ಸಭಾಂಗಣದಲ್ಲಿ ಲೋಕಸಭಾ ಚುನಾವಣಾ ನಿಮಿತ್ತ ಆಯೋಜಿಸಲಾಗಿದ್ದ ಚುನಾವಣಾಧಿಕಾರಿಗಳ ಸಭೆ ವೇಳೆ ಮಾತನಾಡಿ, ಲೋಕಸಭಾ ಚುನಾವಣೆಗೆ ನಿಯೋಜಿತ ಅಧಿಕಾರಿಗಳ ಮೇಲೆ ಹೆಚ್ಚಿನ ಜವಾಬ್ದಾರಿಗಳಿಗೆ ಹಾಗಾಗಿ ಎಲ್ಲರೂ ಎಚ್ಚರಿಕೆಯಿಂದ ಕರ್ತವ್ಯನಿರ್ವಹಿಸಿ ಮತದಾನದ ದಿನದಂದು ಹಾಗೂ ಮತದಾನದ ಹಿಂದಿನ ದಿನದಂದು ಮತದಾನಕ್ಕೆ ಬೇಕಾದ ಎಲ್ಲಾ ರೀತಿಯ ಸಿದ್ಧತೆಗಳನ್ನು ಆಯಾ ಮತಗಟ್ಟೆಗಳ ಅಧಿಕಾರಿಗಳು ಸಿದ್ಧಪಡಿಸಿಕೊಂಡಿರುವ ಕುರಿತು ಪರಿಶೀಲಿಸಿ ಮತಗಟ್ಟೆ ತೆರಳುವಂತೆ ನೋಡಿಕೊಳ್ಳಿ ಚುನಾವಣೆಯನ್ನು ಪಾರದರ್ಶಕ, ನಿಯಮಾನುಸಾರವಾಗಿ ನಡೆಸುವ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು. ಹಾಗಯೇ ಚುನಾವಣೆಯ ದಿನದಂದು ಪ್ರತಿ 2 ಘಂಟೆಗೆ ಒಮ್ಮೆ ಎಲೆಕ್ಟೋ ಒನ್ ಆ್ಯಪ್ ಮೂಲಕ ಮಾಹಿತಿ ನೀಡುವಂತೆ ನೋಡಿಕೊಳ್ಳಿ ಎಂದು ಸೂಚಿಸಿದರು. ಈ ವೇಳೆ ತಹಸೀಲ್ದಾರ್ ಗುರುಪ್ರಸಾದ್, ಪ್ರೋ. ತಹಸೀಲ್ದಾರ್ ರಂಜಿತ್, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಮಂಜುಳಾ, ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ನವೀದ್ ಮಠದ್, ಲೋಕೊಪಯೋಗಿ ಇಲಾಖೆ ಎಇಇ ಚಿನ್ನಣ್ಣ, ಎಇ ಮಹೇಶ್,ಕಂದಾಯ ಇಲಾಖಾಧಿಕಾರಿ ಶೇಷಣ್ಣ,ಪುನೀತ್,ಕಾವ್ಯ ಹಾಜರಿದ್ದರು.