ಕೆಜಿಎಫ್ ಜಿಲ್ಲೆಯ ಪ್ರತಿ ಹೋಬಳಿಯಲ್ಲಿ ಕೈಮಗ್ಗ ತರಬೇತಿ ಕೇಂದ್ರ

| Published : Feb 06 2024, 01:38 AM IST / Updated: Feb 06 2024, 04:54 PM IST

KGF
ಕೆಜಿಎಫ್ ಜಿಲ್ಲೆಯ ಪ್ರತಿ ಹೋಬಳಿಯಲ್ಲಿ ಕೈಮಗ್ಗ ತರಬೇತಿ ಕೇಂದ್ರ
Share this Article
  • FB
  • TW
  • Linkdin
  • Email

ಸಾರಾಂಶ

ಕೇಂದ್ರ ಜವಳಿ ಇಲಾಖೆಯಿಂದ ನೇಕಾರರಿಗೆ ತರಬೇತಿ ಪಡೆದವರ ಕುಟುಂಬಗಳ ಮಕ್ಕಳಿಗೆ ವಿದ್ಯಾರ್ಥಿ ವೇತನ ಮತ್ತು ನೇಕಾರರಿಗೆ ತರಬೇತಿ ಪಡೆದಿರುವವರಿಗೆ ಕೈಮಗ್ಗ ಮತ್ತು ಬ್ಯಾಂಕ್‌ಗಳಿಂದ ೫೦ ಸಾವಿರದಿಂದ ೧೦ ಲಕ್ಷದವರೆಗೂ ಸಾಲ ಸೌಲಭ್ಯ ನಾಡಲಾಗುವುದು

ಕನ್ನಡಪ್ರಭ ವಾರ್ತೆ ಕೆಜಿಎಫ್

ಸಮಾಜದಲ್ಲಿ ಮಹಿಳೆಯರು ಸ್ವಾಲಂಬನೆ ಬದುಕು ನಡೆಸಲು ಕೇಂದ್ರ- ರಾಜ್ಯ ಸರ್ಕಾರವು ಜವಳಿ ಇಲಾಖೆ ಮೂಲಕ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು ಮಹಿಳೆಯರು ಸದ್ಬಳಕೆ ಮಾಡಿಕೊಳ್ಳುವ ಮೂಲಕ ಸ್ವಂತ ಗುಡಿ ಕೈಗಾರಿಕೆಗಳನ್ನು ಸ್ಪಾಪನೆ ಮಾಡಿ ಯಶಸ್ವಿ ಮಹಿಳಾ ಉದ್ಯೋಮಿ ಎನ್ನಿಸಿಕೊಳ್ಳಬೇಕು ಎಂದು ಜಿಲ್ಲಾ ಜವಳಿ ಇಲಾಖೆ ಅಧಿಕಾರಿ ಅನಿತ ಸಲಹೆ ನೀಡಿದರು.

ಕೇಂದ್ರ ಜವಳಿ ಇಲಾಖೆ ಮತ್ತು ನೇಕಾರರ ತರಬೇತಿ ಕೇಂದ್ರ ಹಾಗೂ ಮಹಾಲಕ್ಷ್ಮಿ ಕೈಮಗ್ಗ ನೇಕಾರರ ಉತ್ಪಾದನೆ ಮತ್ತು ಮಾರಾಟ ಸಹಕಾರ ಸಂಘದಿಂದ ಕಾಮದನೇಹಳ್ಳಿ ಗ್ರಾಪಂ ವ್ಯಾಪ್ತಿಯ ಘಟ್ಟರಾಗಡಹಳ್ಳಿಯಲ್ಲಿ ನೇಕಾರರಿಗೆ ಸಮರ್ಥ ಯೋಜನೆಯಡಿ ತರಬೇತಿ ಶಿಬಿರದಲ್ಲಿ ಅವರು ಮಾತನಾಡಿದರು.

ಹೋಬಳಿ ಮಟ್ಟದಲ್ಲಿ ತರಬೇತಿ

ಕೇಂದ್ರ ಜವಳಿ ಇಲಾಖೆಯಿಂದ ನೇಕಾರರಿಗೆ ತರಬೇತಿ ಪಡೆದವರ ಕುಟುಂಬಗಳ ಮಕ್ಕಳಿಗೆ ವಿದ್ಯಾರ್ಥಿ ವೇತನ ಮತ್ತು ನೇಕಾರರಿಗೆ ತರಬೇತಿ ಪಡೆದಿರುವವರಿಗೆ ಸಹಾಯಧನದ ಮೂಲಕ ಕೈಮಗ್ಗ ಮತ್ತು ಬ್ಯಾಂಕ್‌ಗಳಿಂದ ಪ್ರಥಮ ಹಂತದಲ್ಲಿ ೫೦ ಸಾವಿರದಿಂದ ೧೦ ಲಕ್ಷದವರೆಗೂ ಸಾಲ ಸೌಲಭ್ಯವನ್ನು ಪಡೆಯುವ ಅವಕಾಶವಿದೆ. ಜಿಲ್ಲೆಯಲ್ಲಿ ಈಗಾಗಲೇ ೨೮ ಮಂದಿ ಉತ್ತಮವಾಗಿ ತರಬೇತಿ ಪಡೆದಿರುವ ನೇಕಾರರು ಇದ್ದು ಅವರುಗಳಿಗೆ ಇಲಾಖೆಯಿಂದ ಅನೇಕ ಸೌಲತ್ತುಗಳನ್ನು ನೀಡಲಾಗಿದೆ, ಕೈಮಗ್ಗದ ತರಬೇತಿ ಜಿಲ್ಲೆಯ ಎಲ್ಲಾ ತಾಲ್ಲೂಕು ಹಾಗೂ ಹೋಬಳಿ ಕೇಂದ್ರಗಳಲ್ಲಿ ತರಬೇತಿ ಕೇಂದ್ರಗಳನ್ನು ಪ್ರಾರಂಭಿಸುವುದಾಗಿ ತಿಳಿಸಿದರು.

ಶಿಬರ ಉದ್ಘಾಟಿಸಿ ಮಾತನಾಡಿದ ಕ್ಕೆ ಘಟ್ಟಕಾಮದನೇಹಳ್ಳಿ ಗ್ರಾಪಂ ಅಧ್ಯಕ್ಷೆ ಸವಿತ ಪ್ರಸನ್ನ, ಮಹಿಳೆಯರು ತಮ್ಮ ಕುಟುಂಬವನ್ನು ಪೋಷಣೆ ಮಾಡುವುದರೊಂದಿಗೆ ಯಶಸ್ವಿ ಉದ್ಯಮಿಯಾಗಬೇಕು. ಮಹಿಳೆಯರು ಸಮಯ ವ್ಯರ್ಥ ಮಾಡದೆ ನೇಕಾರರ ವೃತ್ತಿಯಲ್ಲಿ ತರಬೇತಿ ಪಡೆದುಕೊಂಡರೆ ಸರ್ಕಾರವು ಬ್ಯಾಂಕ್ ಮೂಲಕ ಸಾಲ ಸೌಲಭ್ಯ ನೀಡಲಿದೆ ಇದರೊಂದಿಗೆ ಮಹಿಳೆಯರು ಆರ್ಥಿಕವಾಗಿ ಅಭಿವೃದ್ಧಿ ಹೊಂದುವ ದೃಷ್ಟಿಯಿಂದ ಗ್ರಾಪಂನಿಂದ ಸಹ ಸಹಾಯ ನೀಡಲು ಅವಕಾಶವಿದ್ದರೆ ಸಹಾಯ ಮಾಡುವುದಾಗಿ ಆಶ್ವಾಸನೆ ನೀಡಿದರು.ಸ್ವಾವಲಂಬನೆಗೆ ದಾರಿ

ನೇಕಾರರ ತರಬೇತಿ ಕೇಂದ್ರದ ಅಧಿಕಾರಿ ತುಳಸಿರಾಂ ಮಾತನಾಡಿ, ಕೈಮಗ್ಗ ತರಬೇತಿಯಿಂದ ನಿಮ್ಮ ಕುಟುಂಬವು ಆರ್ಥಿಕವಾಗಿ ಸದೃಡವಾಗಬಹುದು ನೇಕಾರರ ತರಬೇತಿ ಅವಧಿಯಲ್ಲಿ ೩೦೦ ರೂ ಭತ್ಯೆ ನೀಡಲಾಗುವುದು ಮತ್ತು ೪೫ ದಿನಗಳ ತರಬೇತಿ ನಂತರ ಪ್ರಮಾಣ ಪತ್ರ ನೀಡಲಾಗುವುದು ಮತ್ತು ಕೈಮಗ್ಗ ಪಡೆಯುವ ಮಾರ್ಗಗಳನ್ನು ತಿಳಿಸಿಕೊಡಲಾಗುವುದು ಎಂದು ಹೇಳಿದರು.

ಕೇಂದ್ರ ಜವಳಿ ಇಲಾಖೆ ಮತ್ತು ನೇಕಾರರ ತರಬೇತಿ ಕೇಂದ್ರ ಹಾಗೂ ಮಹಾಲಕ್ಷ್ಮಿ ಕೈಮಗ್ಗ ನೇಕಾರರ ಉತ್ಪಾದನೆ ಮತ್ತು ಮಾರಾಟ ಸಹಕಾರ ಸಂಘದ ಸಂಯುಕ್ತಶ್ರಯದಲ್ಲಿ ಒಂದು ದಿನದ ತರಭೇತಿ ಕಾರ್‍ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಘಟ್ಟರಾಗಡಹಳ್ಳಿ ಗ್ರಾಪಂ ಸದಸ್ಯೆ ಮಂಜುಳ ನಾಗರಾಜ್, ಘಟ್ಟಕಾಮದೇನಹಳ್ಳಿ ಗ್ರಾಪಂ ಪಿಡಿಒ ಕೇಶವರೆಡ್ಡಿ, ಮುರಳಿ ಇದ್ದರು.