ಇಲ್ಲಿನ ಉಚ್ಚಿಲದ ಶ್ರೀ ಮಹಾಲಕ್ಷ್ಮೀ ದೇವಾಲಯಕ್ಕೆ ದ.ಕ. ಮೊಗವೀರ ಮಹಿಳಾ ಮಹಾಜನ ಸಂಘ ಮತ್ತು ಬೆಳ್ಳಿ ರಥ ಸಮಿತಿ ವತಿಯಿಂದ ಸಮರ್ಪಣೆ ಮಾಡಲಿರುವ ಚಂದ್ರಮಂಡಲ ರಥವನ್ನು ಪ್ರಧಾನ ಅರ್ಚಕ ರಾಘವೇಂದ್ರ ಉಪಾಧ್ಯಾಯ ಅವರ ಪೌರೋಹಿತ್ಯದಲ್ಲಿ ಶಿಲ್ಪಿ ಮಾಧವ ಆಚಾರ್ಯ ಅವರು ಶನಿವಾರ ಹಸ್ತಾಂತರಿಸಿದರು.

ಕಾಪು: ಇಲ್ಲಿನ ಉಚ್ಚಿಲದ ಶ್ರೀ ಮಹಾಲಕ್ಷ್ಮೀ ದೇವಾಲಯಕ್ಕೆ ದ.ಕ. ಮೊಗವೀರ ಮಹಿಳಾ ಮಹಾಜನ ಸಂಘ ಮತ್ತು ಬೆಳ್ಳಿ ರಥ ಸಮಿತಿ ವತಿಯಿಂದ ಸಮರ್ಪಣೆ ಮಾಡಲಿರುವ ಚಂದ್ರಮಂಡಲ ರಥವನ್ನು ಪ್ರಧಾನ ಅರ್ಚಕ ರಾಘವೇಂದ್ರ ಉಪಾಧ್ಯಾಯ ಅವರ ಪೌರೋಹಿತ್ಯದಲ್ಲಿ ಶಿಲ್ಪಿ ಮಾಧವ ಆಚಾರ್ಯ ಅವರು ಶನಿವಾರ ಹಸ್ತಾಂತರಿಸಿದರು. ಸುಮಾರು 35 ಲಕ್ಷ ರು. ವೆಚ್ಚದಲ್ಲಿ ತಯಾರಿಸಿದ ಚಂದ್ರಮಂಡಲ ರಥವನ್ನು ದ.ಕ. ಮೊಗವೀರ ಮಹಿಳಾ ಮಹಾಜನ ಸಂಘ ಮತ್ತು ಬೆಳ್ಳಿ ರಥ ಸಮಿತಿಯವರಿಗೆ ಶಿಲ್ಪಿ ಮಾಧವ ಆಚಾರ್ಯ ಅವರು ಹಸ್ತಾಂತರಿಸುವ ಕಾರ್ಯಕ್ರಮ ಶ್ರೀ ಮಹಾಲಕ್ಷ್ಮೀ ಸನ್ನಿಧಿಯಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಗಿರಿಧರ್ ಸುವರ್ಣ, ದ.ಕ ಮಹಿಳಾ ಮಹಾಜನ ಸಂಘದ ಅಧ್ಯಕ್ಷೆ ಕವಿತಾ ಶರತ್, ಕಾರ್ಯದರ್ಶಿ ಪೂರ್ಣಿಮಾ ಚಂದ್ರಶೇಖರ್, ಬೆಳ್ಳಿ ರಥ ಸಮಿತಿಯ ಅಧ್ಯಕ್ಷೆ ಉಷಾರಾಣಿ, ಕಾರ್ಯದರ್ಶಿ ಶುಭಾ ದಿನೇಶ್ ಮತ್ತು ಸರ್ವ ಸದಸ್ಯರು, ಕ್ಷೇತ್ರ ಸಮಿತಿಯ ಪ್ರಮುಖರಾದ ನಾರಾಯಣ ಕರ್ಕೇರಾ, ಸಂಜೀವ ಬಂಗೇರ ಮೋಹನ್ ಬಂಗೇರ, ಕಾಪು ನಾಲ್ಕು ಪಟ್ಣ ಅಧ್ಯಕ್ಷರದ ಮನೋಜ್ ಕಾಂಚನ್, ನಿಕಟ ಪೂರ್ವ ಅಧ್ಯಕ್ಷರಾದ ವಾಸುದೇವ ಸಾಲ್ಯಾನ್, ಮೆಂಡನ್ ಸುಜಿತ್ ‌ಸಾಲ್ಯಾನ್, ನಿಶಾನ್ ಕುಂದರ್ ಏರ್ಮಾಲ್, ಶೇಖರ್ ಪುತ್ರನ್ ಮತ್ತಿತರರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಶ್ರೀ ದಿನೇಶ್ ಎರ್ಮಾಳು ಅವರು ಕೊಡುಗೆಯಾಗಿ ನೀಡಿರುವ ರಥದ ಶಿಖರಕ್ಕೆ ಚಿನ್ನದ ಛತ್ರಿಯನ್ನು ಸಮರ್ಪಿಸಿದರು.