ಗ್ರಾಮಾಭಿವೃದ್ಧಿ ಯೋಜನೆಯಿಂದ ವಾತ್ಸಲ್ಯ ಮನೆ ಹಸ್ತಾಂತರ

| Published : Dec 14 2024, 12:48 AM IST

ಸಾರಾಂಶ

ತರೀಕೆರೆ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತರೀಕೆರೆಯಿಂದ ಸಮೀಪದ ಎ ರಂಗಪುರ ಗ್ರಾಮದಲ್ಲಿ ಸುಮಾರು 70 ವರ್ಷ ವಯಸ್ಸಿನ ಸುಶೀಲಮ್ಮ ಅವರಿಗೆ ಗ್ರಾಮಾಭಿವೃದ್ಧಿ ಯೋಜನೆಯಿಂದ ವಾತ್ಸಲ್ಯ ಯೋಜನೆಯಡಿ ಸೂರು ನಿರ್ಮಾಣ ಮಾಡಲಾಗಿದೆ.

70 ವರ್ಷ ವಯಸ್ಸಿನ ಸುಶೀಲಮ್ಮ ಅವರಿಗೆ ಒಂದು ಲಕ್ಷದ ಹದಿಮೂರು ಸಾವಿರ ವೆಚ್ಚದಲ್ಲಿ ಮನೆ

ಕನ್ನಡಪ್ರಭ ವಾರ್ತೆ, ತರೀಕೆರೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತರೀಕೆರೆಯಿಂದ ಸಮೀಪದ ಎ ರಂಗಪುರ ಗ್ರಾಮದಲ್ಲಿ ಸುಮಾರು 70 ವರ್ಷ ವಯಸ್ಸಿನ ಸುಶೀಲಮ್ಮ ಅವರಿಗೆ ಗ್ರಾಮಾಭಿವೃದ್ಧಿ ಯೋಜನೆಯಿಂದ ವಾತ್ಸಲ್ಯ ಯೋಜನೆಯಡಿ ಸೂರು ನಿರ್ಮಾಣ ಮಾಡಲಾಗಿದೆ. ಮಾತೃಶ್ರೀ ಹೇಮಾವತಿ ಹೆಗ್ಗಡೆ ಯವರ ಮಾರ್ಗದರ್ಶನದಂತೆ ವಾತ್ಸಲ್ಯ ಕಾರ್ಯಕ್ರಮದಡಿ ಮನೆ ನಿರ್ಮಿಸಿ ಕೊಡಲಾಗಿದೆ. ಕಳೆದ 20 ವರ್ಷಗಳಿಂದ ಹಳೆ ಮನೆಯಲ್ಲಿ ವಾಸವಾಗಿದ್ದ ಇವರಿಗೆ ಒಂದು ಲಕ್ಷದ ಹದಿಮೂರು ಸಾವಿರ ವೆಚ್ಚದಲ್ಲಿ ಮನೆ ನಿರ್ಮಾಣ ಮಾಡಲಾಗಿದೆ. ಪ್ರತಿ ತಿಂಗಳು 1000 ಮಾಸಾಶನ ಮತ್ತು 3 ಕೆಜಿ ವಾತ್ಸಲ್ಯ ಮಿಕ್ಸ್ ಅನ್ನು

ನೀಡಲಾಗುತ್ತದೆ.ಸುಶೀಲಮ್ಮನವರು ಸುಮಾರು 50 ವರ್ಷಗಳ ಹಿಂದೆ ಎ. ರಂಗಪುರ ಗ್ರಾಮಕ್ಕೆ ಬಂದು ವಾಸವಿರುತ್ತಾರೆ, ಇವರು ಒಬ್ಬಂಟಿ ಜೀವನ ಜೀವಿಸುತ್ತಾ ಸಣ್ಣಪುಟ್ಟ ಕೆಲಸಗಳನ್ನು ಮಾಡಿಕೊಳ್ಳುತ್ತಾ ಇದ್ದರು. ಊಟಕ್ಕೂ ಸಹ ಕಷ್ಟ ಪಡುತ್ತಿರುವ ಇವರ ಜೀವನಕ್ಕೆ ಗ್ರಾಮ ಅಭಿವೃದ್ಧಿ ಯೋಜನೆ ದಾರಿದೀಪವಾಗಿದೆ. ಗ್ರಾಮಾಭಿವೃದ್ಧಿ ಯೋಜನೆ ಕಡೆಯಿಂದ ಈ ದಿನ ವಾತ್ಸಲ್ಯ ಮನೆ ಹಸ್ತಾಂತರ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವನ್ನು ಪಂಚಾಯಿತಿ ಅಧ್ಯಕ್ಷ ಕಾಂತ್ ಕುಮಾರ್ ನಾಯಕ್ ಅವರು ನಾಮಪಲಕ ಅನಾವರಣ ಮಾಡಿದರು.

ತಾಲೂಕು ಯೋಜನಾಧಿಕಾರಿ ಕುಸುಮಾಧರ್ ಮತನಾಡಿ, ಯೋಜನೆ ಸಮುದಾಯ ಅಭಿವೃದ್ಧಿ ಎಲ್ಲಾ ಕಾರ್ಯಕ್ರಮಗಳ ಹಾಗೂ ಮಾತೃಶ್ರೀ ಅಮ್ಮನವರ ಕನಸು ಜ್ಞಾನವಿಕಾಸ ವಾತ್ಸಲ್ಯ, ಮಾಸಾಶನ ಕಾರ್ಯಕ್ರಮಗಳ ಬಗ್ಗೆ ತಿಳಿಸಿದರು.ಜಿಲ್ಲಾ ಜನಜಾಗೃತಿ ಸದಸ್ಯರಾದ ಶ್ರೀಧರ್, ಗ್ರಾಮ ವಾತ್ಸಲ್ಯ ಸದಸ್ಯರಾದ ಸುಶೀಲಮ್ಮ, ಪಂಚಾಯತಿ ಸದಸ್ಯರಾದ ಸುಂಕಮ್ಮ , ಊರಿನ ಮುಖಂಡರಾದ ಗೋಪಿ ಮತ್ತು ಪ್ರಸನ್ನ ಒಕ್ಕೂಟದ ಅಧ್ಯಕ್ಷೆ ಜಯಂತಿ ಜ್ಞಾನವಿಕಾಸ ಸಮನ್ವಯಧಿ ಕಾರಿ ನಂದಿನಿ, ಸಂಪನ್ಮೂಲ ವ್ಯಕ್ತಿಗಳಾದ ತಿಮ್ಮಯ್ಯ, ಜಯಣ್ಣ, ವಲಯದ ಮೇಲ್ವಿಚಾರಕ ರಮೇಶ್, ಸೇವಾ ಪ್ರತಿನಿಧಿ ಉಷಾ ಊರಿನ ಇತರ ಸದಸ್ಯರು ಹಾಗೂ ಸಂಘದ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.-

13ಕೆಟಿಆರ್.ಕೆ.1ಃ

ತರೀಕೆರೆ ಸಮೀಪದ ಎ.ರಂಗಾಪುರದಲ್ಲಿ 3. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತರೀಕೆರೆ ವತಿಯಿಂದ ವತಿಯಿಂದ ವಾತ್ಸಲ್ಯ ಮನೆ ಹಸ್ತಾಂತರ ಕಾರ್ಯಕ್ರಮ ನಡೆಯಿತು. ಪಂಚಾಯಿತಿ ಅಧ್ಯಕ್ಷ ಕಾಂತ್ ಕುಮಾರ್ ನಾಯಕ್, ಯೋಜನಾಧಿಕಾರಿ ಕುಸುಮಾಧರ್, ಜಿಲ್ಲಾ ಜನಜಾಗೃತಿ ಸದಸ್ಯ ಶ್ರೀಧರ್ ಮತ್ತಿತರರು ಇದ್ದರು.